SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು

‘ಯಾವುದೇ ದುರುದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವುದಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ಸಿನಿಮಾ ನೋಡುವವರಿಗಾಗಿ ನಾನು ಸಿನಿಮಾ ಮಾಡುತ್ತೇನೆ’ ಎಂದು ರಾಜಮೌಳಿ ಹೇಳಿದ್ದಾರೆ.  

SS Rajamouli: ‘ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡ್ತಾರೆ’ ಎಂದವರಿಗೆ ರಾಜಮೌಳಿ ಕೊಟ್ರು ತಿರುಗೇಟು
ರಾಜಮೌಳಿ
Follow us
ರಾಜೇಶ್ ದುಗ್ಗುಮನೆ
|

Updated on: Mar 01, 2023 | 7:13 AM

ಕೆಲ ನಿರ್ದೇಶಕರು ತಮ್ಮದೇ ಆದ ಅಜೆಂಡಾ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಸಿನಿಮಾಗಳಲ್ಲಿ ಈ ರೀತಿಯ ಅಜೆಂಡಾಗಳು ಎದ್ದು ಕಾಣುತ್ತವೆ. ಆಗ ಅವರು ಟೀಕೆಗೆ ಒಳಗಾಗುತ್ತಾರೆ. ರಾಜಮೌಳಿ (SS Rajamouli) ಕೂಡ ತಮ್ಮದೇ ಅಜೆಂಡಾ ಹೊಂದಿದ್ದು, ಸಿನಿಮಾಗಳಲ್ಲಿ ಅದನ್ನು ತೋರಿಸುತ್ತಾರೆ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಿರುತ್ತವೆ. ಇದಕ್ಕೆ ಈಗ ಅವರು ಉತ್ತರ ನೀಡಿದ್ದಾರೆ. ‘ಯಾವುದೇ ದುರುದ್ದೇಶ ಇಟ್ಟುಕೊಂಡು ಸಿನಿಮಾ ಮಾಡುವುದಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿ ಸಿನಿಮಾ ನೋಡುವವರಿಗಾಗಿ ನಾನು ಸಿನಿಮಾ ಮಾಡುತ್ತೇನೆ’ ಎಂದು ರಾಜಮೌಳಿ ಹೇಳಿದ್ದಾರೆ.

ಸುದ್ದಿ ಸಂಸ್ಥೆ ಎಎಫ್​ಪಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಜಮೌಳಿ, ‘ಸಿನಿಮಾ ನೋಡಲು ಹೋಗುವಾಗ ಜೀವನಕ್ಕಿಂತ ದೊಡ್ಡ ಪಾತ್ರಗಳು, ಜೀವನಕ್ಕಿಂತ ದೊಡ್ಡ ಸನ್ನಿವೇಶಗಳು, ಜೀವನಕ್ಕಿಂತ ದೊಡ್ಡ ಡ್ರಾಮಾ ನೋಡಲು ನಾನು ಬಯಸುತ್ತೇನೆ ಮತ್ತು ಅವುಗಳನ್ನೇ ನಾನು ಸಿನಿಮಾ ಮಾಡಲು ಇಷ್ಟಪಡುತ್ತೇನೆ. ನಾವು ಕಟ್ಟಲೆಗಳನ್ನು ಒಡೆಯುತ್ತಿದ್ದೇವೆ. ಆದರೆ ಈ ವಿಚಾರದಲ್ಲಿ ನಾವು ತುಂಬಾನೇ ಆರಂಭಿಕ ಹಂತದಲ್ಲಿ ಇದ್ದೇವೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ ರಾಜಮೌಳಿ.

‘ಯಾವುದೇ ವಿಚಾರ ಅತಿಯಾದರೆ ನಾನು ವಿರೋಧಿಸುತ್ತೇನೆ. ನನಗೆ ಯಾವುದೇ ರೀತಿಯ ಹಿಡನ್ ಅಜೆಂಡಾ ಇಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಸಿನಿಮಾಗಾಗಿ ಖರ್ಚು ಮಾಡಲು ಸಿದ್ಧರಿರುವ ಜನರಿಗಾಗಿ ಮಾತ್ರ ನಾನು ಸಿನಿಮಾ ಮಾಡೋದು. ಪಾತ್ರಗಳ ಬಗ್ಗೆ, ಸನ್ನಿವೇಶಗಳ ಬಗ್ಗೆ ನಾಟಕೀಯ ಭಾವನೆ ಮೂಡಿಸಿ ಮನರಂಜನೆ ನೀಡೋದು ನನ್ನ ಉದ್ದೇಶ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಹಾಲಿವುಡ್​ನಲ್ಲಿ ‘ಆರ್​ಆರ್​ಆರ್​’ ಸಾಧನೆ; ಒಂದೇ ವೇದಿಕೆಯಲ್ಲಿ ನಾಲ್ಕು ಪ್ರಶಸ್ತಿ ಬಾಚಿದ ರಾಜಮೌಳಿ ಸಿನಿಮಾ

ಹಾಲಿವುಡ್​ ಕ್ರಿಟಿಕ್ಸ್ ಅವಾರ್ಡ್ಸ್ ಆಯೋಜಕರಿಂದ ಸ್ಪಷ್ಟನೆ

‘ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್​’ ಕಾರ್ಯಕ್ರಮ ಇತ್ತೀಚೆಗೆ ನಡೆದಿತ್ತು. ‘ಆರ್​ಆರ್​ಆರ್​’ ಸಿನಿಮಾ ಇದರಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಬೇಸರದ ವಿಚಾರ ಎಂದರೆ ರಾಮ್ ಚರಣ್ ಹಾಗೂ ಎಸ್.ಎಸ್​. ರಾಜಮೌಳಿ ಮಾತ್ರ ಇದರಲ್ಲಿ ಭಾಗಿ ಆಗಿದ್ದರು. ಜೂ.ಎನ್​ಟಿಆರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಅವರಿಗೆ ಆಹ್ವಾನವೇ ಇರಲಿಲ್ಲ ಎಂದೆಲ್ಲ ಸುದ್ದಿ ಹಬ್ಬಿಸಲಾಗಿತ್ತು. ಇದಕ್ಕೆ ಹಾಲಿವುಡ್​ ಕ್ರಿಟಿಕ್ಸ್ ಅವಾರ್ಡ್​​ನ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ. ‘ಆರ್​ಆರ್​ಆರ್ ಫ್ಯಾನ್ಸ್ ಹಾಗೂ ಬೆಂಬಲಿಗರೇ, ನಾವು ಜೂ.ಎನ್​ಟಿಆರ್​ಗೆ ಆಹ್ವಾನ ನೀಡಿದ್ದರು. ಆದರೆ, ಅವರು ಭಾರತದಲ್ಲಿ ತಮ್ಮ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಅವರು ಶೀಘ್ರವೇ ಈ ಅವಾರ್ಡ್ ಸ್ವೀಕರಿಸಲಿದ್ದಾರೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದ’ ಎಂದು ಬರೆದುಕೊಳ್ಳಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್