SS Rajamouli: ‘RRR ಬಾಲಿವುಡ್​ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ

| Updated By: ಮದನ್​ ಕುಮಾರ್​

Updated on: Jan 15, 2023 | 5:17 PM

RRR Movie | Tollywood: ರಾಜಮೌಳಿ ಅವರ ಈ ಹೇಳಿಕೆಗೆ ಕೆಲವರು ತಕರಾರು ತೆಗೆದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

SS Rajamouli: ‘RRR ಬಾಲಿವುಡ್​ ಚಿತ್ರವಲ್ಲ’: ರಾಜಮೌಳಿ ಹೇಳಿಕೆಗೆ ಹಿಂದಿ ಮಂದಿ ಅಸಮಾಧಾನ
ಎಸ್ಎಸ್ ರಾಜಮೌಳಿ, ಆರ್​ಆರ್​ಆರ್​ ಸಿನಿಮಾ ಪೋಸ್ಟರ್​
Follow us on

ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ‘ಬಾಹುಬಲಿ’, ‘ಆರ್​ಆರ್​ಆರ್​’ (RRR Movie) ಮುಂತಾದ ಸಿನಿಮಾಗಳಿಂದಾಗಿ ಅವರ ಜನಪ್ರಿಯತೆ ಹೆಚ್ಚಾಗಿದೆ. ಇತ್ತೀಚೆಗೆ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ‘ಗೋಲ್ಡನ್​ ಗ್ಲೋಬ್​ 2023’ ಅವಾರ್ಡ್​ ಪಡೆದುಕೊಂಡ ನಂತರ ಬೇರೆ ಬೇರೆ ದೇಶಗಳ ಜನರು ತೆಲುಗು ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ಈಗ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್​ ಪ್ರಶಸ್ತಿ (Oscar Award) ಪಡೆಯಲು ಪ್ರಯತ್ನಿಸುತ್ತಿದೆ. ಈ ಸಂದರ್ಭದಲ್ಲಿ ರಾಜಮೌಳಿ ನೀಡಿದ ಒಂದು ಹೇಳಿಕೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ. ‘ಆರ್​ಆರ್​ಆರ್​ ಬಾಲಿವುಡ್​ ಸಿನಿಮಾ’ ಅಲ್ಲ ಎಂದು ರಾಜಮೌಳಿ (SS Rajamouli) ಹೇಳಿದ್ದಾರೆ. ಈ ಹೇಳಿಕೆಯಿಂದಾಗಿ ಹಿಂದಿ ಪ್ರೇಕ್ಷಕರ ಪೈಕಿ ಕೆಲವರು ಅಸಮಾಧಾನಗೊಂಡಿದ್ದಾರೆ.

ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ‘ಆರ್​ಆರ್​ಆರ್​’ ಚಿತ್ರವನ್ನು ನಾಮಿನೇಟ್​ ಮಾಡಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ‘ಫಾರ್​ ಯುವರ್​ ಕನ್ಸಿಡರೇಷನ್​’ ಕ್ಯಾಂಪೇನ್​ ಮೂಲಕ ಈ ಚಿತ್ರವನ್ನು ಆಸ್ಕರ್​ಗೆ ಕಳಿಸುವ ಕಸರತ್ತು ನಡೆಯುತ್ತಿವೆ. ಅದರ ಅಂಗವಾಗಿ ಇತ್ತೀಚೆಗೆ ಅಮೆರಿಕದಲ್ಲಿ ಈ ಸಿನಿಮಾದ ಪ್ರದರ್ಶನ ಮತ್ತು ಸಂವಾದ ನಡೆಯಿತು. ಸಿನಿಮಾ ಬಿತ್ತರ ಆಗುವುದಕ್ಕೂ ಮುನ್ನ ರಾಜಮೌಳಿ ಮಾತನಾಡಿದರು. ‘ಇದು ಬಾಲಿವುಡ್​ ಸಿನಿಮಾ ಅಲ್ಲ. ದಕ್ಷಿಣ ಭಾರತದ ತೆಲುಗು ಭಾಷೆಯ ಸಿನಿಮಾ ಇದು. ಅಲ್ಲಿಂದಲೇ ನಾನು ಬಂದಿರುವುದು. ಸಿನಿಮಾದ ಕಥೆಯನ್ನು ಮುಂದುವರಿಸಲು ನಾನು ಹಾಡುಗಳನ್ನು ಬಳಸುತ್ತೇನೆ’ ಎಂದು ರಾಜಮೌಳಿ ಹೇಳಿದ್ದಾರೆ.

ಇದನ್ನೂ ಓದಿ: Natu Natu Song: ಯುದ್ಧ ಶುರು ಆಗೋದಕ್ಕೂ ಮುನ್ನ ಉಕ್ರೇನ್​ನಲ್ಲಿ ‘ನಾಟು ನಾಟು..’ ಸಾಂಗ್​ ಶೂಟಿಂಗ್​ ಮಾಡಿದ್ದ ರಾಜಮೌಳಿ

ಇದನ್ನೂ ಓದಿ
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?
ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್; ಪಬ್ಲಿಸಿಟಿ ಸ್ಟಂಟ್ಸ್ ಎಂದ ನೆಟ್ಟಿಗರು
ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
‘ನನ್ನ ಸಿನಿಮಾದಲ್ಲಿ ಅಂಥ ನಟರು ಇರೋದೇ ಬೇಡ’: ರಾಜಮೌಳಿಗೆ ಕಂಡೀಷನ್​ ಹಾಕಿದ ಮಹೇಶ್​ ಬಾಬು?

ರಾಜಮೌಳಿ ಅವರ ಈ ಹೇಳಿಕೆಗೆ ಕೆಲವರು ತಕಾರಾರು ತೆಗೆದಿದ್ದಾರೆ. ‘ಆರ್​ಆರ್​ಆರ್​ ನಾಮಿನೇಟ್​ ಆಗುವುದು ಭಾರತದಿಂದಲೇ ಹೊರತು ಸೌತ್​ ಇಂಡಿಯಾ ಅಥವಾ ತೆಲುಗು ಚಿತ್ರರಂಗದಿಂದ ಅಲ್ಲ. ಪ್ರದೇಶ ಮತ್ತು ಭಾಷೆಗಳ ವಿಚಾರದಲ್ಲಿ ಪಕ್ಷಪಾತ ಬೇಡ. ಬಾಲಿವುಡ್ ಎಂದರೆ ಒಂದು ಚಿತ್ರರಂಗವಲ್ಲ. ಅದು ಭಾರತವನ್ನು ಪ್ರತಿನಿಧಿಸುತ್ತದೆ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಆದರೆ ಈ ಮಾತಿನಲ್ಲಿ ತರ್ಕವೇ ಇಲ್ಲ ಎಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rajamouli: ರಾಜಮೌಳಿಯ ಹಾಲಿವುಡ್​ ಪ್ಲ್ಯಾನ್​ ಏನು? ಕೇಳಿಬಂತು ಎರಡು ಅಚ್ಚರಿಯ ಸುದ್ದಿ 

‘ಭಾರತದಿಂದ ಬಂದ ಎಲ್ಲ ಸಿನಿಮಾಗಳನ್ನೂ ಬಾಲಿವುಡ್​ ಚಿತ್ರಗಳು ಎಂದು ಯಾಕೆ ಹಣೆಪಟ್ಟಿ ಕಟ್ಟಬೇಕು’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ‘ಬಾಲಿವುಡ್​ನಲ್ಲಿ ಉತ್ತಮ ಸಿನಿಮಾಗಳು ಬರುತ್ತವೆ ಎಂಬುದು ನಿಜ. ಅದೇ ರೀತಿ ಸೌತ್​ ಇಂಡಿಯಾದಿಂದ ಒಳ್ಳೆಯ ಸಿನಿಮಾಗಳು ಬಂದಾಗ ಅವರಿಗೂ ಕ್ರೆಡಿಟ್​ ಸಿಗಬೇಕು’ ಎಂದು ಹಲವರು ಹೇಳಿದ್ದಾರೆ. ಆ ಮೂಲಕ ರಾಜಮೌಳಿ ಮಾತಿಗೆ ಬೆಂಬಲ ಸೂಚಿಸಿದ್ದಾರೆ. ಪರ-ವಿರೋಧ ಏನೇ ಇರಲಿ, ಭಾರತದ ಸಿನಿಮಾಗೆ ಆಸ್ಕರ್​ ಸಿಗಲಿ ಎಂದು ಸಿನಿಪ್ರಿಯರು ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.