AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ನಾಯಕಿಯಾಗಿ ವಿದೇಶಿ ನಟಿ ಎಂಟ್ರಿ, ಯಾರಾಕೆ?

Rajamouli: ಎಸ್​ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್​ನ ಸಿನಿಮಾಕ್ಕೆ ನಾಯಕಿಯಾಗಿ ವಿದೇಶಿ ನಟಿಯನ್ನು ಆಯ್ಕೆ ಮಾಡಲಾಗುತ್ತಿದೆ. ಯಾರಾಕೆ?

ಮಹೇಶ್ ಬಾಬು-ರಾಜಮೌಳಿ ಸಿನಿಮಾಕ್ಕೆ ನಾಯಕಿಯಾಗಿ ವಿದೇಶಿ ನಟಿ ಎಂಟ್ರಿ, ಯಾರಾಕೆ?
ಮಂಜುನಾಥ ಸಿ.
|

Updated on: Jan 07, 2024 | 3:37 PM

Share

‘RRR’ ಸಿನಿಮಾದಿಂದ ಭಾರಿ ಯಶಸ್ಸು, ವಿಶ್ವಮಟ್ಟದಲ್ಲಿ ಕೀರ್ತಿ ಗಳಿಸಿರುವ ರಾಜಮೌಳಿ (Rajamouli) ಇದೀಗ ತಮ್ಮ ಮುಂದಿನ ಸಿನಿಮಾ ‘RRR’ ಗಿಂತಲೂ ಅದ್ಧೂರಿಯಾಗಿ, ಬೃಹತ್ ಆಗಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಸಿನಿಮಾದ ಪ್ರೀ ಪ್ರೊಡಕ್ಷನ್​ಗೆ ಸುಮಾರು ಎರಡು ವರ್ಷ ಸಮಯ ವ್ಯಯಿಸುತ್ತಿದ್ದಾರೆ. ಮುಂದಿನ ಸಿನಿಮಾಕ್ಕಾಗಿ ವಿದೇಶದ ಹಲವು ತಂತ್ರಜ್ಞರೊಡನೆ ಚರ್ಚೆ ನಡೆಸಿ ಒಪ್ಪಂದವನ್ನೂ ರಾಜಮೌಳಿ ಮಾಡಿಕೊಂಡಿದ್ದಾರೆ. ತಂತ್ರಜ್ಞರು ಮಾತ್ರವೇ ಅಲ್ಲದೆ ಕೆಲವು ನಟಿಯರನ್ನು ಸಹ ವಿದೇಶದಿಂದಲೇ ಕರೆತರುತ್ತಿದ್ದಾರೆ ರಾಜಮೌಳಿ.

ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಆರಂಭದಿಂದಲೂ ಇದೆ. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮಹೇಶ್ ಬಾಬು ಎದುರು ನಾಯಕಿಯಾಗಿ ವಿದೇಶಿ ನಟಿಯನ್ನು ರಾಜಮೌಳಿ ಆಯ್ಕೆ ಮಾಡಿದ್ದಾರೆ.

ಇಂಡೋನೇಷ್ಯಾದ ನಟಿ ಚೆಲ್ಸಿಯಾ ಎಲಿಜಿಬೆತ್ ಇಸ್ಲೇನ್ ಮಹೇಶ್ ಬಾಬು ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸುಂದರ ನಟಿ ಈಗಾಗಲೇ ಸಿನಿಮಾಕ್ಕಾಗಿ ಸ್ಕ್ರೀನ್ ಟೆಸ್ಟ್, ಲುಕ್ ಟೆಸ್ಕ್​ಗಳನ್ನು ನೀಡಿದ್ದು ರಾಜಮೌಳಿ ಹಾಗೂ ಚಿತ್ರತಂಡಕ್ಕೆ ಓಕೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜಮೌಳಿಯವರು ತಮ್ಮ ಈ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡಲು ಅಮೆರಿಕದ ಹೊಸ ಕಾಸ್ಟಿಂಗ್ ಏಜೆನ್ಸಿಯ ಸಹಾಯ ಪಡೆದಿದ್ದು, ಅದರ ಮೂಲಕ ಚೆಲ್ಸ್ಲಿಯಾ ಇಸ್ಲೇನ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ವಿದ್ಯುತ್​ ಸ್ಪರ್ಶಿಸಿ ಪ್ರಭಾಸ್​ ಅಭಿಮಾನಿ ಸಾವು; ‘ಸಲಾರ್​’ ಬಿಡುಗಡೆ ಖುಷಿಯ ನಡುವೆ ಕಹಿ ಸುದ್ದಿ

ಚೆಲ್ಸ್ಲಿಯಾ ಇಸ್ಲೇನ್, ಅಮೆರಿಕದಲ್ಲಿ ಜನಿಸಿದ ಇಂಡೋನೇಷ್ಯಾ ಮೂಲದ ನಟಿ. ‘ಟೇಂಗಾ ಮೆಸಾ ಗಿಟ್ಟು’ ಹೆಸರಿನ ಟಿವಿ ಸರಣಿ ಮೂಲಕ ಚೆಲ್ಸ್ಲಿಯಾ ಇಸ್ಲೇನ್ ಜನಪ್ರಿಯತೆ ಗಳಿಸಿದರು. ಈ ಧಾರಾವಾಹಿಯ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಇವರು ಪಡೆದಿದ್ದಾರೆ. ‘ಆರ್​ಆರ್​ಆರ್’ ಸಿನಿಮಾದಲ್ಲಿ ವಿದೇಶಿ ನಟಿ ಒಲಿವಾ ಮೋರಿಸ್ ಅವರನ್ನು ಹಾಕಿಕೊಂಡಿದ್ದರು ರಾಜಮೌಳಿ, ಇದೀಗ ಚೆಲ್ಸಿಯಾ ಇಸ್ಲೇನ್ ಅನ್ನು ಸಿನಿಮಾಕ್ಕೆ ಹಾಕಿಕೊಂಡಿದ್ದಾರೆ.

ಚೆಲ್ಸಿಯಾ ಇಸ್ಲೇನ್ ಸುಂದರ ಹಾಗೂ ಪ್ರತಿಭಾವಂತ ನಟಿಯಾಗಿರುವ ಜೊತೆಗೆ ಇಂಡೋನೇಷ್ಯಾ ಹಾಗೂ ಆ ಭಾಗದ ಇನ್ನೂ ಕೆಲವು ದೇಶಗಳಲ್ಲಿ ಬಹಳ ಜನಪ್ರಿಯತೆ ಇರುವ ನಟಿ. ಇವರನ್ನು ತಮ್ಮ ಸಿನಿಮಾಕ್ಕೆ ಹಾಕಿಕೊಳ್ಳುವ ಮೂಲಕ ಇಂಡೋನೇಷ್ಯಾದಲ್ಲಿಯೂ ತಮ್ಮ ಸಿನಿಮಾದ ಪ್ರಚಾರವನ್ನು ಸುಲಭವಾಗಿ ಮಾಡುವ ದೂರಾಲೋಚನೆಯನ್ನೂ ಸಹ ರಾಜಮೌಳಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ