AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ನೀರಿನ ಸಮಸ್ಯೆಗೆ ಸಿಕ್ಕಿತು ಪರಿಹಾರ; ಶೂಟ್​​ನಲ್ಲಿ ಪ್ರಿಯಾಂಕಾ ಭಾಗಿ

ನಿರ್ದೇಶಕ ರಾಜಮೌಳಿ ಮತ್ತು ನಟ ಮಹೇಶ್ ಬಾಬು ಒಗ್ಗೂಡುತ್ತಿರುವ 'ವಾರಣಾಸಿ' ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಡ್ವೆಂಚರ್ ಆಕ್ಷನ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸೇರ್ಪಡೆಯಾಗಿರುವುದು ಖಚಿತವಾಗಿದೆ. ನೀರಿನ ಅಭಾವದ ಸವಾಲುಗಳನ್ನು ನಿವಾರಿಸಿಕೊಂಡು ಚಿತ್ರೀಕರಣ ಮುಂದುವರಿದಿದ್ದು, ಮಲಯಾಳಂ ನಟ ಪೃಥ್ವಿರಾಜ್ ಸೇರಿ ಅನೇಕ ಬಹುಭಾಷಾ ನಟರು ಮುಖ್ಯ ಪಾತ್ರಗಳಲ್ಲಿದ್ದಾರೆ.

ರಾಜಮೌಳಿ ನೀರಿನ ಸಮಸ್ಯೆಗೆ ಸಿಕ್ಕಿತು ಪರಿಹಾರ; ಶೂಟ್​​ನಲ್ಲಿ ಪ್ರಿಯಾಂಕಾ ಭಾಗಿ
ವಾರಣಾಸಿ
 ಶ್ರೀಲಕ್ಷ್ಮೀ ಎಚ್
| Edited By: |

Updated on:May 11, 2026 | 11:44 AM

Share

ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ನಟ ಮಹೇಶ್ ಬಾಬು ಮೊದಲ ಬಾರಿಗೆ ಒಂದಾಗುತ್ತಿರುವ ಸಿನಿಮಾ ‘ವಾರಣಾಸಿ’ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೊಂದು ಅಡ್ವೆಂಚರ್ ಆಕ್ಷನ್ ಥ್ರಿಲ್ಲರ್ ಆಗಿದ್ದು, ವಿಶ್ವದ ವಿವಿಧ ದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಚೋಪ್ರಾ ಮಹತ್ವದ ಅಪ್‌ಡೇಟ್ ಒಂದನ್ನು ನೀಡಿದ್ದಾರೆ.

ರಾಜಮೌಳಿ ಅವರ ಈ ಸಿನಿಮಾಗೆ ನೀರಿನ ಶಾರ್ಟೇಜ್ ಉಂಟಾಗಿದೆ ಎಂದು ವರದಿ ಆಗಿತ್ತು. ನಿರ್ದೇಶಕರು 150 ಟ್ಯಾಂಕರ್ ನೀರನ್ನು ಕೇಳಿದ್ದರು. ಆದರೆ, ಬೇಸಿಗೆ ಆಗಿರುವುದರಿಂದ ಅಷ್ಟೊಂದು ನೀರನ್ನು ಕೊಡಲು ಸಾಧ್ಯವಿಲ್ಲ ಎಂದು ಹೈದರಾಬಾದ್ ಜಲ ಮಂಡಳಿ ಹೇಳಿತ್ತು. ಈಗ ಇದಕ್ಕೆ ರಾಜಮೌಳಿ ಬೇರೆಯ ಅರೇಂಜ್​​ಮೆಂಟ್ಸ್​ ಮಾಡಿದ್ದಾರೆ ಎಂಬುದು ತಿಳಿಯುತ್ತಿದೆ. ಏಕೆಂದರೆ, ಪ್ರಿಯಾಂಕಾ ಚೋಪ್ರಾ ಅವರು ಸಿನಿಮಾದ ಶೂಟ್​​​ನಲ್ಲಿ ಭಾಗವಹಿಸುತ್ತಿದ್ದಾರೆ.

ಇತ್ತೀಚೆಗೆ ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ‘ವಾರಣಾಸಿ, ಹಿಯರ್ ವಿ ಗೋ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಸಿನಿಮಾದ ಹೊಸ ಶೆಡ್ಯೂಲ್‌ನಲ್ಲಿ ಭಾಗವಹಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಹಿಂದೆ ಹೈದರಾಬಾದ್‌ನಲ್ಲಿ ನಡೆಯಬೇಕಿದ್ದ ಚಿತ್ರೀಕರಣವು ನೀರಿನ ಅಭಾವದ ಕಾರಣದಿಂದಾಗಿ ಸ್ಥಗಿತಗೊಂಡಿತ್ತು ಎಂದು ವರದಿಯಾಗಿತ್ತು. ಇದೀಗ ಅಡೆತಡೆಗಳನ್ನು ನಿವಾರಿಸಿಕೊಂಡು ಚಿತ್ರತಂಡ ಶೂಟ್​​ನಲ್ಲಿ ಬ್ಯುಸಿ ಆಗಿದೆ.

ಈ ಬಿಗ್ ಬಜೆಟ್ ಸಿನಿಮಾದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರದ ಪೋಸ್ಟರ್ ರಿಲೀಸ್ ಆಗಿ ಟ್ರೋಲ್ ಆಗಿತ್ತು. ಇವರ ಜೊತೆಗೆ ಬಹುಭಾಷಾ ನಟರಾದ ಆರ್. ಮಾಧವನ್ ಮತ್ತು ಪ್ರಕಾಶ್ ರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವುದು ಚಿತ್ರದ ತೂಕವನ್ನು ಹೆಚ್ಚಿಸಿದೆ. ಕೆ.ಎಲ್. ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ಅವರು ಈ ಅದ್ದೂರಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಅವರು ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.ರಾಜಮೌಳಿ ಸಿನಿಮಾಗಳಿಗೆ ಇವರ ಸಂಗೀತ ಇರೋದು ಸಾಮಾನ್ಯ ಆಗಿದೆ. ಇನ್ನು ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು, ಈ ಸಿನಿಮಾ ಭಾರತೀಯ ಚಿತ್ರರಂಗದ ಮಟ್ಟಿಗೆ ಮತ್ತೊಂದು ‘ಬಾಹುಬಲಿ’ ಅಥವಾ ‘ಆರ್.ಆರ್.ಆರ್’ ಮಾದರಿಯ ಸಂಚಲನ ಸೃಷ್ಟಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ವಾರಣಾಸಿ’ ಶೂಟಿಂಗ್​​ಗೆ 150 ಟ್ಯಾಂಕರ್ ನೀರು ಕೇಳಿದ ರಾಜಮೌಳಿ; ಶಾಕ್ ಕೊಟ್ಟ ಅಧಿಕಾರಿಗಳು

ಚಿತ್ರತಂಡದ ಯೋಜನೆಯಂತೆ ‘ವಾರಣಾಸಿ’ ಸಿನಿಮಾ 2027ರ ಏಪ್ರಿಲ್ 7ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಮಹೇಶ್ ಬಾಬು ಅವರ ಹೊಸ ಲುಕ್ ಮತ್ತು ರಾಜಮೌಳಿ ಅವರ ಮೇಕಿಂಗ್ ಶೈಲಿಯನ್ನು ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Mon, 11 May 26

Follow Us