Vikrant Rona: ಅಭಿಮಾನಿಗಳಿಗೆ ‘ವಿಕ್ರಾಂತ್ ರೋಣ’ನ ಕಡೆಯಿಂದ ಬಿಗ್ ಸರ್ಪ್ರೈಸ್

Sudeep's Vikrant Rona: ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಟೀಸರ್ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

Vikrant Rona: ಅಭಿಮಾನಿಗಳಿಗೆ ವಿಕ್ರಾಂತ್ ರೋಣನ ಕಡೆಯಿಂದ ಬಿಗ್ ಸರ್ಪ್ರೈಸ್
Vikrant Rona
Edited By:

Updated on: Jun 16, 2022 | 7:23 PM

‘ರಾ ರಾ ರಕ್ಕಮ್ಮ’ (Ra Ra Rakkamma) ಮೂಲಕ ಸ್ಯಾಂಡಲ್​ವುಡ್​ನಲ್ಲಿ ಹೊಸ ಸೆನ್ಸೇಷನ್​ ಸೃಷ್ಟಿಸಿರುವ ಅಭಿನಯ ಚಕ್ರವರ್ತಿ ಅಭಿನಯದ ‘ವಿಕ್ರಾಂತ್ ರೋಣ’ (Vikrant Rona) ಚಿತ್ರ ತಂಡದಿಂದ ಬಿಗ್ ಅಪ್​ಡೇಟ್​ವೊಂದು ಹೊರಬೀಳಲಿದೆ. ಈಗಾಗಲೇ ತಿಳಿಸಿರುವಂತೆ ನಾಳೆ (ಜೂ.17) ಸಂಜೆ 5 ಗಂಟೆಗೆ ನಮ್ಮ ಕಡೆಯಿಂದ ಬಿಗ್ ಅನೌನ್ಸ್​ಮೆಂಟ್ ಹೊರಬೀಳಲಿದೆ ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ. ಇದಾಗ್ಯೂ ನಾಳೆ ಚಿತ್ರ ತಂಡ ಅಭಿಮಾನಿಗಳ ಮುಂದಿಡುವ ಸರ್ಪ್ರೈಸ್​ ಏನು ಎಂಬುದನ್ನು ಮಾತ್ರ ರಹಸ್ಯವಾಗಿಡಲಾಗಿದೆ. ಮತ್ತೊಂದೆಡೆ ಕಿಚ್ಚ ಫ್ಯಾನ್ಸ್​ ವಿಕ್ರಾಂತ್ ರೋಣನ ಟ್ರೈಲರ್​ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಚಿತ್ರವು ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ರೋಣನ ಆರ್ಭಟದ ಝಲಕ್​ ನೋಡಲು ಅಭಿಮಾನಿಗಳೂ ತುದಿಗಾಲಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ಚಿತ್ರತಂಡವು ಜೂನ್ 17 ರಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಮುಂದಾಗಿದೆ.

ಈಗಾಗಲೇ ರಗಡ್ ರಕ್ಕಮ್ಮನ ಹಾಡಿನ ಮೂಲಕ ಮೋಡಿ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ಮತ್ತೊಂದು ಹಾಡನ್ನು ಸಿನಿಪ್ರಿಯರ ಮುಂದಿಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಏಕೆಂದರೆ ಹೇ ಫಕೀರಾ ಹಾಗೂ ಚಿಕ್ಕಿ ಗೊಂಬೆ ಹಾಡಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಹೀಗಾಗಿ ಈ ಹಾಡಿನಲ್ಲಿ ಯಾವುದಾದರೂ ಒಂದನ್ನು ನಾಳೆ ಬಿಡುಗಡೆ ಮಾಡಬಹುದು.

ಇದನ್ನೂ ಓದಿ
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!
Rakshit Shetty: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ

ಏಕೆಂದರೆ ರಾ ರಾ ರಕ್ಕಮ್ಮ ಹಾಡಿನ ಮೂಲಕ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಪ್ರೇಕ್ಷಕರನ್ನು ಸೆಳೆದಿರುವ ವಿಕ್ರಾಂತ್ ರೋಣ ಮುಂದಿನ ತಿಂಗಳು 28 ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಅದಕ್ಕೂ ಮುನ್ನ ಮತ್ತೊಂದಿಷ್ಟು ಹಾಡನ್ನು ಬಿಡುಗಡೆ ಮಾಡಿ ಸಿನಿಪ್ರಿಯರನ್ನು ಸೆಳೆಯುವ ಇರಾದೆಯಲ್ಲಿದೆ ಚಿತ್ರತಂಡ.

ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣರಾಗಿ ಕಾಣಿಸಿಕೊಳ್ಳಲಿದ್ದು, ಸಂಜೀವ್ ಗಂಭೀರ ಹೆಸರಿನ ಮತ್ತೊಂದು ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ. ಹಾಗೆಯೇ ನಾಯಕಿಯಾಗಿ ನಿತಾ ಅಶೋಕ್ ಇದ್ದರೆ, ಮತ್ತೊಂದು ವಿಭಿನ್ನ ಪಾತ್ರದೊಂದಿಗೆ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಗಡ್ ರಕ್ಕಮ್ಮಳಾಗಿ ಎಂಟ್ರಿ ಕೊಡಲಿದ್ದಾರೆ.

ರಂಗಿ ತರಂಗ ಖ್ಯಾತಿಯ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿರುವ ವಿಕ್ರಾಂತ್ ರೋಣ ಚಿತ್ರವು ಈಗಾಗಲೇ ಟೀಸರ್ ಮೂಲಕ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಅಲ್ಲದೆ ಚಿತ್ರದ ಪ್ರಮುಖ ಭಾಗವನ್ನು ವೀಕ್ಷಿಸಿರುವ ಬಾಲಿವುಡ್ ನಟ ಸಲ್ಮಾನ್ ತಮ್ಮದೇ ಸಂಸ್ಥೆಯಲ್ಲಿ ವಿಕ್ರಾಂತ್ ರೋಣನನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಹೀಗಾಗಿಯೇ ಸೌತ್ ಸಿನಿರಂಗದಂತೆ, ಬಾಲಿವುಡ್​ನಲ್ಲೂ ವಿಕ್ರಾಂತ್ ರೋಣನ ಎಂಟ್ರಿಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ. ಈ ಕಾಯುವಿಕೆ ಕೊನೆಗೊಳ್ಳಬೇಕಿದ್ದರೆ ಜುಲೈ 28ರ ತನಕ ಕಾಯಲೇಬೇಕು.

 

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.