10 ಪರ್ಸೆಂಟ್ ಕೂಡ ಕಲೆಕ್ಷನ್ ಆಗಿಲ್ಲ: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ಕಂಗನಾ ಚಿತ್ರ

Dhaakad Boxoffice Collection: ಬ್ಯಾಕ್ ಟು ಬ್ಯಾಕ್ ನಾಲ್ಕು ಅಟ್ಟರ್ ಫ್ಲಾಪ್ ಚಿತ್ರಗಳನ್ನು ನೀಡಿರುವ ಕಂಗನಾ ರಣಾವತ್ ಮತ್ತೆ ತನು ವೆಡ್ಸ್ ಮನು-3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿದೆ.

10 ಪರ್ಸೆಂಟ್ ಕೂಡ ಕಲೆಕ್ಷನ್ ಆಗಿಲ್ಲ: ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದ ಕಂಗನಾ ಚಿತ್ರ
Kanagana Ranaut
TV9kannada Web Team

| Edited By: Zahir PY

Jun 16, 2022 | 5:15 PM

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) ಅಭಿನಯದ ಧಾಕಡ್ (Dhaakad) ಚಿತ್ರವು ಬಾಕ್ಸಾಫೀಸ್​ನಲ್ಲಿ ಮಕಾಡೆ ಮಲಗಿದೆ. ಇದರೊಂದಿಗೆ ಬಿಟೌನ್​ನಲ್ಲಿ ಆ್ಯಕ್ಷನ್ ಕ್ವೀನ್ ಎನಿಸಿಕೊಳ್ಳುವ ಕಂಗನಾ ಅವರ ಕನಸು ಕೂಡ ಕಮರಿದೆ. ಏಕೆಂದರೆ ಧಾಕಡ್ ಚಿತ್ರವು ಇದುವರೆಗೆ ಕಲೆಹಾಕಿದ್ದು ಕೇವಲ 2.58 ಕೋಟಿ ಮಾತ್ರ. ಅಂದರೆ ಈ ಚಿತ್ರಕ್ಕೆ ಹಾಕಿದ ಒಟ್ಟು ಬಂಡವಾಳ ಶೇ.10 ರಷ್ಟು ಕೂಡ ಗಳಿಕೆಯಾಗಿಲ್ಲ ಎಂಬ ಸುದ್ದಿಯೊಂದು ಬಿಟೌನ್​ನಿಂದ ಹೊರಬಿದ್ದಿದೆ. 85 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಆ್ಯಕ್ಷನ್ ಥ್ರಿಲ್ಲರ್ ಧಾಕಡ್ ಸಿನಿಮಾವು ಅಟ್ಟರ್ ಫ್ಲಾಪ್ ಆಗಿರುವ ಕಾರಣ ನಿರ್ಮಾಪಕರು ಬರೋಬ್ಬರಿ 78 ಕೋಟಿ ನಷ್ಟ ಎದುರಿಸುತ್ತಿದ್ದಾರೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.

ಧಾಕಡ್ ಚಿತ್ರವು ಬಿಡುಗಡೆಯಾದ ಮೊದಲ ವಾರದಲ್ಲೇ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಇದರೊಂದಿಗೆ ಸಿನಿಮಾ ನೆಲಕಚ್ಚುವುದು ಕೂಡ ಖಚಿತವಾಗಿತ್ತು. ಆದರೆ ಸಿನಿಮಾ ರಿಲೀಸ್​ಗೂ ಮುನ್ನ ನಿರ್ಮಾಪಕರು ಸ್ಯಾಟ್​ಲೈಟ್ ಹಾಗೂ ಡಿಜಿಟಲ್ ರೈಟ್ಸ್​ ಅನ್ನು ಮಾರಾಟ ಮಾಡಿರಲಿಲ್ಲ. ಆದರೀಗ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಬಹಿರಂಗವಾಗುತ್ತಿದ್ದಂತೆ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏಕೆಂದರೆ ಒಂದು ತಿಂಗಳಲ್ಲಿ ಧಾಕಡ್ ಸಿನಿಮಾ ಕಲೆಹಾಕಿದ್ದು ಕೇವಲ 2.58 ಕೋಟಿ ಮಾತ್ರ. ಅಂದರೆ ಬಂಡವಾಳದ 10 ರಷ್ಟು ಕೂಡ ನಿರ್ಮಾಪಕರಿಗೆ ಹಿಂತಿರುಗಿಲ್ಲ. ಹೀಗಾಗಿಯೇ ಚಿತ್ರದ ಡಿಜಿಟಲ್ ಹಾಗೂ ಸ್ಯಾಟ್​ಲೈಟ್ ಹಕ್ಕುಗಳನ್ನು ಖರೀದಿಸಲು ಯಾರು ಕೂಡ ಮುಂದಾಗುತ್ತಿಲ್ಲ. ಅಲ್ಲದೆ ಚಿತ್ರವು ಬಾಕ್ಸಾಫೀಸ್​ನಲ್ಲಿ ಹೀನಾಯ ಸೋಲನುಭವಿಸಿರುವ ಕಾರಣ ಧಾಕಡ್​ ಚಿತ್ರದ ಡಿಜಿಟಲ್ ಹಾಗೂ ಸ್ಯಾಟ್​ಲೈಟ್ ಹಕ್ಕುಗಳು ಕೇವಲ 5 ಕೋಟಿಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗಲಿದೆ ಎಂಬ ಟಾಕುಗಳು ಶುರುವಾಗಿದೆ.

ಅಂದರೆ ಬರೋಬ್ಬರಿ 85 ಕೋಟಿ ಬಂಡವಾಳ ಹೂಡಿ ಕಂಗನಾ ರಣಾವತ್​ ಅವರನ್ನು ಆ್ಯಕ್ಷನ್ ಕ್ವೀನ್ ಮಾಡಲೋದ ನಿರ್ಮಾಪಕರಾದ ದೀಪಕ್ ಮುಕುತ್ , ಸೊಹೈಲ್ ಮಕ್ಲೈ ಇದೀಗ ಒಂದೇ ಚಿತ್ರದಿಂದ 78 ಕೋಟಿ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ ಧಾಕಡ್ ಜೊತೆ ತೆರೆಕಂಡ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲಯ್ಯಾ-2 ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈಗಾಗಲೇ 170 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಆದರೆ ಕಂಗನಾ ರಣಾವತ್ ಅಭಿನಯದ ಕಳೆದ ನಾಲ್ಕು ಚಿತ್ರಗಳ ಒಟ್ಟಾರೆ ಕಲೆಕ್ಷನ್ ಅನ್ನು ಸೇರಿಸಿದರೂ 100 ಕೋಟಿ ದಾಟಲ್ಲ ಎಂಬುದು ವಿಶೇಷ. ಅಂದರೆ ಬಾಲಿವುಡ್​ ಕ್ವೀನ್ ಅಭಿನಯದ ಕೊನೆಯ ನಾಲ್ಕು ಚಿತ್ರಗಳೂ ಕೂಡ ಮಕಾಡೆ ಮಲಗಿದೆ. ಜಡ್ಜ್​ಮೆಂಟಲ್​ ಹೈ ಕ್ಯಾ ಚಿತ್ರವು  33.11 ಕೋಟಿ ಕಲೆಹಾಕಿದರೆ, ಪಂಗ ಚಿತ್ರವು 28.92 ಕೋಟಿಗಳಿಸಷ್ಟೇ ಶಕ್ತವಾಗಿತ್ತು. ಇನ್ನು ತಲೈವಿಯ ಗಳಿಕೆ ಕೇವಲ 1.46 ಕೋಟಿಗೆ ನಿಂತಿತ್ತು. ಇದೀಗ ಧಾಕಡ್ ಕೂಡ 2.58 ಕೋಟಿಯೊಂದಿಗೆ ಮಕಾಡೆ ಮಲಗಿದೆ.

ಬ್ಯಾಕ್ ಟು ಬ್ಯಾಕ್ ನಾಲ್ಕು ಅಟ್ಟರ್ ಫ್ಲಾಪ್ ಚಿತ್ರಗಳನ್ನು ನೀಡಿರುವ ಕಂಗನಾ ರಣಾವತ್ ಮತ್ತೆ ತನು ವೆಡ್ಸ್ ಮನು-3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿದೆ. ಅಂದಹಾಗೆ ಕಂಗನಾ ರಣಾವತ್ ಒಂದು ಸೂಪರ್ ಹಿಟ್ ಸಿನಿಮಾ ನೀಡಿ 7 ವರ್ಷಗಳೇ ಕಳೆದಿವೆ. ಅಂದರೆ 2015 ರಲ್ಲಿ ತೆರೆಕಂಡಿದ್ದ ಕಂಗನಾ ಅಭಿನಯದ ತನು ವೆಡ್ಸ್ ಮನು ರಿಟರ್ನ್ಸ್ ಸೂಪರ್ ಡೂಪರ್ ಹಿಟ್ ಆಗಿತ್ತು. ಆ ಸಿನಿಮಾ ಬಾಕ್ಸಾಫೀಸ್​ನಲ್ಲಿ 150 ಕೋಟಿಗೂ ಅಧಿಕ ಮೊತ್ತ ಕಲೆಕ್ಷನ್ ಮಾಡಿತ್ತು. ಇದಾದ ಬಳಿಕ ಕಂಗನಾ ರಣಾವತ್ ಅಭಿನಯದ ಯಾವುದೇ ಚಿತ್ರ 100 ಕೋಟಿಯನ್ನು ದಾಟಿಲ್ಲ ಎಂಬುದೇ ಅಚ್ಚರಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada