ಸೆಟ್ಗೆ ಬಂದು ಸರ್ಪ್ರೈಸ್ ಕೊಟ್ಟ ಸುಪ್ರಿಯಾ ಮೆನನ್; ‘ನೀನ್ಯಾಕೆ ಬಂದೆ’ ಎಂದ ಪೃಥ್ವಿರಾಜ್
ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್ನಲ್ಲಿ ಬಂದಿದ್ದಾರೆ. ಅವರು ಸೆಟ್ಗೆ ಬಂದು, ‘ಸರ್ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ.
ಹೀರೋಗಳು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾಗ ಅವರ ಪತ್ನಿ ಸರ್ಪ್ರೈಸ್ ಕೊಟ್ಟ ಉದಾಹರಣೆ ಇದೆ. ಈ ಮೊದಲು ಅನೇಕ ಸೆಲೆಬ್ರಿಟಿಗಳು ಈ ರೀತಿ ಮಾಡಿದ್ದಾರೆ. ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಪತ್ನಿ ಸುಪ್ರಿಯಾ ಅವರು ಇದೇ ರೀತಿಯ ಸರ್ಪ್ರೈಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಪತ್ನಿ ಸೆಟ್ಗೆ ಆಗಮಿಸಿದ್ದಕ್ಕೆ ಸುಕುಮಾರ್ ಅವರು ಖುಷಿಪಟ್ಟಿಲ್ಲ. ಬದಲಿಗೆ ‘ನೀನೇಕೆ ಇಲ್ಲಿಗೆ ಬರೋಕೆ ಹೋದೆ’ ಎಂದು ಕೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಪೃಥ್ವಿರಾಜ್ ಅವರು ನಿರ್ದೇಶನ ಮಾಡುತ್ತಿರುವ ‘ಎಂಪುರಾನ್’ ಸಿನಿಮಾದ ಶೂಟ್ ಪಾಲಕ್ಕಾಡ್ನಲ್ಲಿ ನಡೆಯುತ್ತಿತ್ತು. ಸುಪ್ರಿಯಾ ಅವರು ಮುಂಬೈನಿಂದ ಫ್ಲೈಟ್ನಲ್ಲಿ ಬಂದಿದ್ದಾರೆ. ಅವರು ಸೆಟ್ಗೆ ಬಂದು, ‘ಸರ್ಪ್ರೈಸ್’ ಎಂದಿದ್ದಾರೆ. ಆಗ ಪೃಥ್ವಿರಾಜ್ ಅವರ ‘ನೀನೇಕೆ ಬಂದೆ’ ಎಂದು ಕೇಳಿದ್ದಾರೆ. ಇದು ಸುಪ್ರಿಯಾ ಕೋಪಕ್ಕೆ ಕಾರಣ ಆಗಿದೆ.
‘ನೀವು ಫ್ಲೈಟ್ ಹಿಡಿದು ಬಂದು, ಮೂರು ಗಂಟೆ ಕಾರಿನಲ್ಲಿ ಪ್ರಯಾಣ ಮಾಡಿ, ಪೃಥ್ವಿರಾಜ್ ಅವರಿಗೆ ಸರ್ಪ್ರೈಸ್ ನೀಡಿದರೆ ಅವರು ನೀನೇಕೆ ಬಂದೆ ಎಂದು ಕೇಳುತ್ತಾರೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.
View this post on Instagram
‘ಎಂಪುರಾನ್’ ಸಿನಿಮಾದ ಶೂಟ್ ಡಿಸೆಂಬರ್ 1ರಂದು ಕೊನೆ ಆಗಿದೆ. ಸಂಜೆ ಮಲಂಪುಳಾ ಡ್ಯಾಮ್ ಸಮೀಪ ಕೊನೆಯ ಶಾಟ್ ತೆಗೆಯಲಾಗಿದೆ. ಈ ಚಿತ್ರಕ್ಕೆ ಕಳೆದ 14 ತಿಂಗಳಿಂದ ಶೂಟಿಂಗ್ ನಡೆಯುತ್ತಿದೆ. ಎಂಟು ರಾಜ್ಯಗಳಲ್ಲಿ ಇದರ ಶೂಟ್ ಮಾಡಲಾಗಿದೆ. ಅವರು ನಿರ್ದೇಶನಕ್ಕೆ ಮರಳಿರೋದು ಫ್ಯಾನ್ಸ್ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ಸ್ಟಾರ್ ಹೀರೋನ ಜಾಗಕ್ಕೆ ಪೃಥ್ವಿರಾಜ್ ಸುಕುಮಾರನ್ ಎಂಟ್ರಿ: ಇಲ್ಲಿದೆ ವಿವರ
‘ಎಂಪುರಾನ್’ ಚಿತ್ರ ‘ಲುಸಿಫರ್’ ಸಿನಿಮಾದ ಮುಂದುವರಿದ ಭಾಗ. 2019ರಲ್ಲಿ ರಿಲೀಸ್ ಆದ ‘ಲುಸಿಫರ್’ ಸಿನಿಮಾದಲ್ಲಿ ಮೋಹನ್ಲಾಲ್ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಸಿನಿಮಾದಲ್ಲಿ ಪೃಥ್ವಿರಾಜ್ ಅತಿಥಿ ಪಾತ್ರ ಮಾಡಿದ್ದರು. ಈಗ ‘ಎಲ್2’ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲೂ ಮೋಹನ್ಲಾಲ್ ನಟಿಸಿದ್ದಾರೆ. ಪೃಥ್ವಿರಾಜ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಮುಂದಿನ ವರ್ಷ ಮಾರ್ಚ್ನಲ್ಲಿ ಸಿನಿಮಾ ರಿಲೀಸ್ ಮಾಡುವ ಉದ್ದೇಶ ತಂಡಕ್ಕೆ ಇದೆ. ಲೈಕಾ ಪ್ರೊಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.