
ಕಾಲಿವುಡ್ನಲ್ಲಿ ಜ್ಯೋತಿಕಾ ಮತ್ತು ಸೂರ್ಯ (Suriya) ಅವರು ಸ್ಟಾರ್ ಕಪಲ್. ಸಿನಿಮಾರಂಗದಲ್ಲಿ ಬ್ಯುಸಿ ಆಗಿರುವ ಅವರು ಫ್ಯಾಮಿಲಿ ಟೈಮ್ ಮಿಸ್ ಮಾಡಿಕೊಳ್ಳುವುದಿಲ್ಲ. ಮಕ್ಕಳಿಗಾಗಿ ಸೂರ್ಯ ಮತ್ತು ಜ್ಯೋತಿಕಾ ಅವರು ಸಮಯ ಮೀಸಲಿಡುತ್ತಾರೆ. ಈಗ ಜ್ಯೋತಿಕಾ ಅವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಗಳು ದಿಯಾ (Diya) ಜೊತೆ ಸೂರ್ಯ ಮತ್ತು ಜ್ಯೋತಿಕಾ ಅವರು ಖುಷಿಯಿಂದ ಪೋಸ್ ನೀಡಿದ್ದಾರೆ. ಯಾಕೆಂದರೆ, ವಿದ್ಯಾಭ್ಯಾಸದಲ್ಲಿ ದಿಯಾ ಉತ್ತಮ ಸಾಧನೆ ಮಾಡಿದ್ದಾರೆ. ದಿಯಾ ಅವರ ಹೈಸ್ಕೂಲ್ ಗ್ರ್ಯಾಜುಯೇಷನ್ ದಿನ ಈ ಸ್ಟಾರ್ ದಂಪತಿ ಹೆಮ್ಮೆಯಿಂದ ಪೋಸ್ ಕೊಟ್ಟಿದ್ದಾರೆ.
ವರದಿಗಳ ಪ್ರಕಾರ, 12ನೇ ತರಗತಿಯಲ್ಲಿ ದಿಯಾ ಉತ್ತಮ ಅಂಕ ಗಳಿಸಿದ್ದಾರೆ. ಅವರ ಹೈಸ್ಕೂಲ್ ಗ್ರ್ಯಾಜುಯೇಷನ್ ಕಾರ್ಯಕ್ರಮ ಇತ್ತೀಚೆಗೆ ನಡೆದಿದೆ. ಮಗಳ ಸಾಧನೆಯನ್ನು ಸಂಭ್ರಮಿಸಲು ಸೂರ್ಯ ಮತ್ತು ಜ್ಯೋತಿಕಾ ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಮಗಳ ಜೊತೆ ನಿಂತು ಹೆಮ್ಮೆಯಿಂದ ತೆಗೆಸಿಕೊಂಡಿರುವ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಸೂರ್ಯ ಮತ್ತು ಜ್ಯೋತಿಕಾ ಅವರು ಚೆನ್ನೈನಲ್ಲಿ ವಾಸವಾಗಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಮುಂಬೈಗೆ ಶಿಫ್ಟ್ ಆದರು. ಅದಕ್ಕೆ ಕಾರಣ ಕೂಡ ಮಕ್ಕಳ ವಿದ್ಯಾಭ್ಯಾಸ. ಹೌದು, ಈ ದಂತಿಯ ಮಕ್ಕಳಾದ ದಿಯಾ ಮತ್ತು ದೇವ್ ಮುಂಬೈನ ಶಾಲೆಗೆ ಸೇರಿದ್ದಾರೆ. ಅವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಜ್ಯೋತಿಕಾ ಮತ್ತು ಸೂರ್ಯ ಕೂಡ ಮುಂಬೈನಲ್ಲಿ ವಾಸಿಸಲು ಆರಂಭಿಸಿದರು.
12ನೇ ತರಗತಿಯಲ್ಲಿ ದಿಯಾ 600ಕ್ಕೆ 581 ಅಂಕ ಗಳಿಸಿದ್ದಾರೆ ಎನ್ನಲಾಗಿದೆ. ತಮಿಳಿನಲ್ಲಿ 96, ಇಂಗ್ಲಿಷ್ನಲ್ಲಿ 97, ಅಕೌಂಟ್ಸ್ನಲ್ಲಿ 94, ಭೌತಶಾಸ್ತ್ರದಲ್ಲಿ 99, ರಸಾಯನ ಶಾಸ್ತ್ರದಲ್ಲಿ 98 ಹಾಗೂ ಕಂಪ್ಯೂಟರ್ ಸೈನ್ಸ್ನಲ್ಲಿ 97 ಅಂಕ ಪಡೆದಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದನ್ನು ದಿಯಾ ಅವರಾಗಲಿ, ಅವರ ಕುಟುಂಬದವರಾಗಲಿ ಖಚಿತಪಡಿಸಿಲ್ಲ.
ಇದನ್ನೂ ಓದಿ: ನಟ ಸೂರ್ಯ ಬಗ್ಗೆ ಕೀಳು ಕಮೆಂಟ್ ನೋಡಿ ಕಿಸಿಕಿಸಿ ನಕ್ಕ ಪತ್ನಿ ಜ್ಯೋತಿಕಾ; ಬುದ್ಧಿ ಹೇಳಿದ ಜನ
ಚಿತ್ರರಂಗದಲ್ಲಿ ಬ್ಯುಸಿ ಇದ್ದರೂ ಕೂಡ ಸೂರ್ಯ ಮತ್ತು ಜ್ಯೋತಿಕಾ ಅವರು ಮಕ್ಕಳ ಬಗ್ಗೆ ಗಮನ ಹರಿಸುವುದನ್ನು ಕಡಿಮೆ ಮಾಡಿಲ್ಲ. ಮಕ್ಕಳ ಶಿಕ್ಷಣಕ್ಕಾಗಿ ಅವರು ಮುಂಬೈಗೆ ಶಿಫ್ಟ್ ಆಗಿದ್ದೇ ಈ ಮಾತಿಗೆ ಉದಾಹರಣೆ. ಈಗ ಮಗಳು ಉತ್ತಮ ಅಂಕ ಗಳಿಸಿದ್ದರಿಂದ ಸೂರ್ಯ ಹಾಗೂ ಜ್ಯೋತಿಕಾ ಸಖತ್ ಖುಷಿಪಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.