AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಸೂರ್ಯ ಬಗ್ಗೆ ಕೀಳು ಕಮೆಂಟ್ ನೋಡಿ ಕಿಸಿಕಿಸಿ ನಕ್ಕ ಪತ್ನಿ ಜ್ಯೋತಿಕಾ; ಬುದ್ಧಿ ಹೇಳಿದ ಜನ

ನಟಿ ಜ್ಯೋತಿಕಾ ಅವರು ಮಾಡಿದ ಒಂದೇ ಒಂದು ಕಮೆಂಟ್​ ಮೂಲಕ ವಿವಾದ ಉಂಟಾಗಿದೆ. ಗಂಡನ ಬಗ್ಗೆ ಬಂದ ನೆಗೆಟಿವ್ ಕಮೆಂಟ್ ನೋಡಿ ಜ್ಯೋತಿಕಾ ಅವರು ಕಿಸಿಕಿಸಿ ನಕ್ಕಿದ್ದಾರೆ. ಸೂರ್ಯ ಅವರ ಅಭಿಮಾನಿಗಳಿಗೆ ಇದು ಸರಿ ಎನಿಸಿಲ್ಲ. ಆದ್ದರಿಂದ ಜ್ಯೋತಿಕಾಗೆ ಸೂರ್ಯ ಫ್ಯಾನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಟ ಸೂರ್ಯ ಬಗ್ಗೆ ಕೀಳು ಕಮೆಂಟ್ ನೋಡಿ ಕಿಸಿಕಿಸಿ ನಕ್ಕ ಪತ್ನಿ ಜ್ಯೋತಿಕಾ; ಬುದ್ಧಿ ಹೇಳಿದ ಜನ
Suriya, Jyothika
ಮದನ್​ ಕುಮಾರ್​
|

Updated on: Feb 27, 2025 | 5:01 PM

Share

ಕಾಲಿವುಡ್​ ನಟಿ ಜ್ಯೋತಿಕಾ (Jyothika) ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ತುಂಬ ಚ್ಯೂಸಿ ಆಗಿದ್ದಾರೆ. ಅವರ ಪತಿ ಸೂರ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸೂರ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ನಡುವೆ ಜ್ಯೋತಿಕಾ ಮತ್ತು ಸೂರ್ಯ ನಡುವೆ ಏನೋ ಕಿರಿಕ್ ಶುರುವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಜ್ಯೋತಿಕಾ ಅವರ ವರ್ತನೆ. ಸೋಶಿಯಲ್ ಮೀಡಿಯಾದಲ್ಲಿ ಗಂಡನ ಬಗ್ಗೆ ಬಂದಿರುವ ಕೀಳುಮಟ್ಟಕ್ಕೆ ಕಮೆಂಟ್​ ನೋಡಿ ಜ್ಯೋತಿಕಾ ನಕ್ಕಿದ್ದಾರೆ.

ನೆಟ್​ ಫ್ಲಿಕ್ಸ್ ನಲ್ಲಿ ಜ್ಯೋತಿಕಾ ಅವರ ಹೊಸ ಸಿನಿಮಾ ಬರುತ್ತಿದೆ. ಈ ಪ್ರಯುಕ್ತ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿದ ನೆಟ್ಟಿಗರು ಜ್ಯೋತಿಕಾ ಪತಿ ಸೂರ್ಯ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ. ‘ನಿಮ್ಮ ಗಂಡನಿಗಿಂತ ದಳಪತಿ ವಿಜಯ್ ಉತ್ತಮ’ ಎಂಬ ಕಮೆಂಟ್ ಬಂದಿದೆ. ‘ಸೂರ್ಯ ಮತ್ತು ಕಾರ್ತಿಗಿಂತಲೂ ಬೇರೆ ನಟರೇ ಉತ್ತಮವಾಗಿದ್ದಾರೆ’ ಎಂದು ಕೂಡ ಕೆಲವರು ಕಮೆಂಟ್ ಮಾಡಿದ್ದಾರೆ.

ಈ ನೆಗೆಟಿವ್ ಕಮೆಂಟ್ ನೋಡಿ ಜ್ಯೋತಿಕಾ ಅವರು ಸುಮ್ಮನೆ ಇರಬಹುದಿತ್ತು. ಆದರೆ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಆ ಕಮೆಂಟ್​ ಗೆ ಪ್ರತಿಕ್ರಿಯೆಯಾಗಿ ಕಿಸಿಕಿಸಿ ನಗುವ ಎಮೋಜಿಯನ್ನು ಹಾಕಿದ್ದಾರೆ. ಇದನ್ನು ನೋಡಿದ ಸೂರ್ಯ ಅಭಿಮಾನಿಗಳಿಗೆ ಬೇಸರ ಆಗಿದೆ. ಗಂಡನ ಬಗ್ಗೆ ಇರುವ ಟ್ರೋಲ್​ ಗೆ ಪತ್ನಿಯೇ ಈ ರೀತಿ ಪ್ರತಿಕ್ರಿಯಿಸಿದ್ದು ಸರಿಯಲ್ಲ ಎಂದು ಫ್ಯಾನ್ಸ್ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ
Image
ಕೊಲ್ಲೂರು ಚಂಡಿಕಾಯಾಗದಲ್ಲಿ ಕಾಲಿವುಡ್ ದಂಪತಿ; ದರ್ಶನ ಪಡೆದ ಸೂರ್ಯ-ಜ್ಯೋತಿಕಾ
Image
ಪತ್ನಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟ ಸೂರ್ಯ
Image
ಚಿತ್ರರಂಗಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕ ಪುತ್ರಿ, ಮೊದಲ ಪ್ರಯತ್ನಕ್ಕೆ ಜಯ
Image
ಒಂದೇ ಒಂದು ವಿಡಿಯೋದಿಂದ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಜ್ಯೋತಿಕಾ-ಸೂರ್ಯ

ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತವೆ. ಅದನ್ನು ತಪ್ಪಿಸಲು ಸೆಲೆಬ್ರಿಟಿಗಳು ಪ್ರಯತ್ನಿಸಬೇಕು. ಜ್ಯೋತಿಕಾ ಇಂಥ ಕಮೆಂಟ್​ ಗಳಿಗೆ ನಕ್ಕು ಎಂಜಾಯ್ ಮಾಡುತ್ತಿದ್ದಾರೆ ಎಂಬುದು ನಿಜವಾದರೆ ಫ್ಯಾನ್ಸ್ ವಾರ್​ ಗೆ ಅವರೇ ಪ್ರೋತ್ಸಾಹ ಕೊಟ್ಟಂತೆ ಆಗುತ್ತದೆ ಎಂಬುದು ಕೆಲವರ ವಾದ. ಹಾಗಾಗಿ ಜ್ಯೋತಿಕಾಗೆ ಕೆಲವರು ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: ಸೂರ್ಯನ ವಿವಾಹ ಆದಾಗಿನಿಂದ ಜ್ಯೋತಿಕಾಗೆ ಸಂಕಷ್ಟ; ಎದುರಿಸಿದ ಕಷ್ಟಗಳೇನು?

‘ದಯವಿಟ್ಟು ಹೀಗೆಲ್ಲ ಮಾಡಬೇಡಿ’ ಎಂದು ಅನೇಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಜ್ಯೋತಿಕಾ ಅವರು ತಮ್ಮ ಕಮೆಂಟ್ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಸೂರ್ಯ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಅಂತ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ಬೆಳಗಾವಿ ಎಪಿಎಂಸಿ ಪ್ರತಿ ಕ್ವಿಂಟಾಲ್ ಈರುಳ್ಳಿ ಬೆಲೆ ₹800 ರಿಂದ ₹1,200!
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ವಿರಾಟ್ ಕೊಹ್ಲಿ ಮೇಲೂ ಕೇಸ್ ಆಗುತ್ತಾ? ಪರಮೇಶ್ವರ್ ಕೊಟ್ಟರು ಮಾಹಿತಿ
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಸ್ವಾಮೀಜಿ ಮಠದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ: ಕಾಶಪ್ಪನವರ್
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಲಂಡನ್​​ನಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ, ಎಲ್ಲೆಲ್ಲೂ ಜೈಕಾರ
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್
ಪ್ರವೀಣ್ ಜೀವನವನ್ನೇ ಬದಲಿಸಿದ ಸುಕೃತಾ ನಾಗ್
ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇದನ್ನೆಲ್ಲ ಗಮನಿಸಲ್ಲವೇ?
ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇದನ್ನೆಲ್ಲ ಗಮನಿಸಲ್ಲವೇ?
ಇಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಪ್ರಧಾನಿ ಮೋದಿ
ಇಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಪ್ರಧಾನಿ ಮೋದಿ
Video: 8 ತಿಂಗಳ ಮಗುವನ್ನು ತಲೆಕೆಳಗಾಗಿಸಿ ಊರು ತುಂಬಾ ಓಡಾಡಿದ ತಂದೆ
Video: 8 ತಿಂಗಳ ಮಗುವನ್ನು ತಲೆಕೆಳಗಾಗಿಸಿ ಊರು ತುಂಬಾ ಓಡಾಡಿದ ತಂದೆ
Daily Devotional: ಸತ್ಯನಾರಾಯಣ ಪೂಜೆಯ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸತ್ಯನಾರಾಯಣ ಪೂಜೆಯ ಮಹತ್ವ ಹಾಗೂ ಫಲ ತಿಳಿಯಿರಿ