AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟ ಸೂರ್ಯ

Suriya and Jyothika: ಸ್ಟಾರ್ ನಟರ ಪತ್ನಿಯರು ಪತಿ ಹಾಗೂ ಮಕ್ಕಳ ಕೇರ್ ಟೇಕರ್​ಗಳಾಗಿ ಉಳಿದು ಬಿಡುವುದೇ ಹೆಚ್ಚು. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ಹಾಗೆ ಮಾಡಿಲ್ಲ. ತಮ್ಮ ಪತ್ನಿ ಜ್ಯೋತಿಕಾಗಾಗಿ ತ್ಯಾಗವೊಂದನ್ನು ಮಾಡಿದ್ದಾರೆ.

ಪತ್ನಿಗಾಗಿ ತ್ಯಾಗ ಮಾಡಿದ ಸ್ಟಾರ್ ನಟ ಸೂರ್ಯ
ಮಂಜುನಾಥ ಸಿ.
|

Updated on: Oct 29, 2024 | 12:10 PM

Share

ಸ್ಟಾರ್ ನಟರ ಪತ್ನಿಯರು ಪತಿ ಮತ್ತು ಮಕ್ಕಳ ಕೇರ್​ಟೇಕರ್​ಗಳಾಗಿ ಮಾತ್ರವೇ ಉಳಿದು ಬಿಡುವುದನ್ನು ನೋಡಿದ್ದೇವೆ. ಒಳ್ಳೆಯ ನಟಿಯರಾಗಿದ್ದರೂ ಸಹ ಪತಿ ಸ್ಟಾರ್ ನಟನಾದ ಕಾರಣಕ್ಕೆ ಚಿತ್ರರಂಗದಿಂದ ದೂರ ಉಳಿಯುವುದು, ವೃತ್ತಿ ಜೀವನ ತ್ಯಾಗ ಮಾಡಿರುವ ಹಲವು ನಟಿಯರು ನೋಡಲು ಸಿಗುತ್ತಾರೆ. ಆದರೆ ತಮಿಳಿನ ಸ್ಟಾರ್ ನಟ ಸೂರ್ಯ ತನ್ನ ಪತ್ನಿಗಾಗಿ ಒಂದು ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ. ಪತ್ನಿ ತನ್ನ ಪತಿಗಾಗಿ ತ್ಯಾಗ ಮಾಡುತ್ತಾಳೆ, ಆದರೆ ಸೂರ್ಯ ಈಗ ಪತ್ನಿಗಾಗಿ ತ್ಯಾಗವೊಂದನ್ನು ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ, ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಚೆನ್ನೈನಲ್ಲಿಯೇ. ಚೆನ್ನೈನಲ್ಲಿ ಸೂರ್ಯ ಅವರ ನೆರೆಯ ಮನೆಯಲ್ಲಿಯೇ ಡಾ ರಾಜ್​ಕುಮಾರ್ ಅವರ ಮನೆಯೂ ಇತ್ತು. ಸೂರ್ಯ ನಟರಾದ ಬಳಿಕ ಮುಂಬೈ ಮೂಲದ ನಟಿ ಜ್ಯೋತಿಕ ಅವರನ್ನು ವಿವಾಹವಾದರು. ಜ್ಯೋತಿಕ ಆ ಸಮಯದಲ್ಲಿ ದೊಡ್ಡ ನಟಿ. ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸ್ಟಾರ್ ನಟರೊಟ್ಟಿಗೆ ನಟಿಸಿದ್ದರು. ಸೂರ್ಯ ಅವರನ್ನು ವಿವಾಹವಾದ ಬಳಿಕ ಮುಂಬೈ ತೊರೆದು ಚೆನ್ನೈನಲ್ಲಿ ಜ್ಯೋತಿಕಾ ನೆಲೆಸಿದರು.

ಸೂರ್ಯ ಅವರನ್ನು ಮದುವೆಯಾಗುವ ಮುಂಚೆ ಸುಮಾರು ಎರಡು ದಶಕಕ್ಕೂ ಹೆಚ್ಚು ಸಮಯ ಜ್ಯೋತಿಕಾ ಮುಂಬೈನಲ್ಲಿ ನೆಲೆಸಿದ್ದರು. ಆದರೆ ಸೂರ್ಯಾಗಾಗಿ ಮುಂಬೈ ಅನ್ನು ಬಿಟ್ಟು ಬಂದರು. ಆದರೆ ಈಗ ಸೂರ್ಯ, ಜ್ಯೋತಿಕಾಗಾಗಿ ಚೆನ್ನೈ ಬಿಟ್ಟು ಮುಂಬೈಗೆ ಹೋಗಿದ್ದಾರೆ. ಸೂರ್ಯ ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಅನುಪಮಾ ಚೋಪ್ರಾ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ಸೂರ್ಯ, ‘ಜ್ಯೋತಿಕ ಎರಡು ದಶಕಗಳ ಕಾಲ ಮುಂಬೈನಲ್ಲಿ ನೆಲೆಸಿದ್ದರು. ನನಗಾಗಿ ಅವರು ಮುಂಬೈ ಬಿಟ್ಟು ಬಂದರು. ಆದರೆ ಈಗ ನಾನು ಜ್ಯೋತಿಕಾಗಾಗಿ ಮುಂಬೈಗೆ ಶಿಫ್ಟ್ ಆಗಿದ್ದೇನೆ. ಪ್ರತಿ ಬಾರಿಯೂ ಪತ್ನಿಯೇ ಏಕೆ ತ್ಯಾಗ ಮಾಡಬೇಕು, ಈ ಒಂದು ಸಣ್ಣ ತ್ಯಾಗವನ್ನು ನಾನೂ ಮಾಡೋಣ ಎಂಬ ಕಾರಣಕ್ಕೆ ನಾನು ಮುಂಬೈಗೆ ಶಿಫ್ಟ್ ಆಗಿದ್ದೇನೆ’ ಎಂದಿದ್ದಾರೆ ಸೂರ್ಯ.

ಇದನ್ನೂ ಓದಿ:ಸೂರ್ಯ ಜೊತೆ ನಟಿಸೋ ಚಾನ್ಸ್ ಮಿಸ್ ಮಾಡಿಕೊಂಡ ಮೃಣಾಲ್​ಗೆ ಮತ್ತೊಂದು ಅವಕಾಶ

ಸೂರ್ಯ ಪತ್ನಿ ಜ್ಯೋತಿಕಾ ಸಹ ಬ್ಯುಸಿ ನಟಿಯಾಗಿದ್ದು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹಿಂದಿಯ ‘ಶ್ರೀಕಾಂತ್’ ಮತ್ತು ‘ಶೈತಾನ್’ ಸಿನಿಮಾಗಳಲ್ಲಿ ಜ್ಯೋತಿಕಾ ನಟಿಸಿದ್ದರು. ಈಗ ‘ಡಬ್ಬಾಕಾರ್ಟೆಲ್’ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಕಾದಲ್; ದಿ ಕೋರ್’ ಮಲಯಾಳಂ ಸಿನಿಮಾದ ಜ್ಯೋತಿಕಾರ ನಟನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಆ ಸಿನಿಮಾದಲ್ಲಿ ಅವರು ಮಮ್ಮುಟಿ ಎದುರು ನಟಿಸಿದ್ದರು. ಸೂರ್ಯ ನಟನೆಯ ‘ಕಂಗುವ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
ಬೀದರ್ ವಿವಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಸಂಕಷ್ಟ
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
KPSC ಹಗರಣ: ಐಎಎಸ್‌ ಅಧಿಕಾರಿ ಜ್ಞಾನೇಂದ್ರ ರಾತ್ರಿ ಕಾರುಬಾರು ಬಯಲು!
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು