AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆವಿಎನ್ ಸಂಸ್ಥೆಯಿಂದ ಮೋಸ ಆರೋಪ, ನಿರ್ಮಾಪಕರ ಸಂಘಕ್ಕೆ ದೂರು, ಪರಿಹಾರಕ್ಕೆ ಒತ್ತಾಯ

ಹಲವು ದೊಡ್ಡ ಬಜೆಟ್ ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ಮಾಣ ಮಾಡುತ್ತಿರುವ ‘ಬಡಾ’ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಕೆವಿಎನ್ ವಿರುದ್ಧ ವಂಚನೆ ದೂರು ದಾಖಲಾಗಿದೆ. ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ವಿಷಯದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪದ್ಮಾವತಿ ಫಿಲಮ್ಸ್ ವತಿಯಿಂದ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ.

ಕೆವಿಎನ್ ಸಂಸ್ಥೆಯಿಂದ ಮೋಸ ಆರೋಪ, ನಿರ್ಮಾಪಕರ ಸಂಘಕ್ಕೆ ದೂರು, ಪರಿಹಾರಕ್ಕೆ ಒತ್ತಾಯ
Kvn Productions
ಮಂಜುನಾಥ ಸಿ.
|

Updated on: Sep 23, 2026 | 10:57 AM

Share

ಮುಖ್ಯಾಂಶಗಳು

  • ಕೆವಿಎನ್ ಪ್ರೊಡಕ್ಷನ್ಸ್​ ಮೇಲೆ ದೂರು
  • ನಿರ್ಮಾಪಕಕ್ಕೆ ದೂರು ನೀಡಿದ ನಿರ್ಮಾಪಕರು
  • ಬಲರಾಮನ ದಿನಗಳು ಸಿನಿಮಾಕ್ಕೆ ಸಂಬಂಧಿಸಿದಂತೆ ದೂರು

ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆ ಮಾಡಿರುವ ಕೆವಿಎನ್ ನಿರ್ಮಾಣ ಸಂಸ್ಥೆಯ ಮೇಲೆ ವಂಚನೆ ಆರೋಪ ಹೊರಿಸಲಾಗಿದೆ. ಕೆವಿಎನ್ ನಿರ್ಮಾಣ ಸಂಸ್ಥೆಯ ಮೂಲಕ ವಿತರಣೆ ಮಾಡಲಾಗಿರುವ ಸಿನಿಮಾಗಳ ವ್ಯವಹಾರದಲ್ಲಿ ವಂಚನೆ ನಡೆದಿದೆ ಎಂಬ ಆರೋಪ ಎದುರಾಗಿದ್ದು, ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ. ತಮಗೆ ಆಗಿರುವ ಮೋಸಕ್ಕೆ ಕೆವಿಎನ್​​ ಕಡೆಯಿಂದ ಎರಡು ಕೋಟಿ ರೂಪಾಯಿ ಪರಿಹಾರವನ್ನು ಕೊಡಿಸಬೇಕೆಂದು ಕೋರಲಾಗಿದೆ.

ಪದ್ಮಾವತಿ ಫಿಲಮ್ಸ್ ವತಿಯಿಂದ ದೂರು ದಾಖಲಾಗಿದ್ದು, ಇತ್ತೀಚೆಗೆ ಬಿಡುಗಡೆ ಆದ ‘ಬಲರಾಮನ ದಿನಗಳು’ ಸಿನಿಮಾಕ್ಕೆ ಸಂಬಂಧಿಸಿದಂತೆ ಈ ಆರೋಪ ಮಾಡಲಾಗಿದೆ. ಪದ್ಮಾವತಿ ಫಿಲಮ್ಸ್ ನಿರ್ಮಾಣ ಮಾಡಿದ್ದ ‘ಬಲರಾಮನ ದಿನಗಳು’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್​​ನವರು ವಿತರಣೆ ಮಾಡಿದ್ದರು. ಆದರೆ ವಿತರಣೆಯ ಬಳಿಕ ಬಂದ ಲಾಭದ ಹಣವನ್ನು ನಿರ್ಮಾಪಕರಿಗೆ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಕೆವಿಎನ್​​ ಸಂಸ್ಥೆಯ ಕಡೆಯವರು ಎಂದು ಪರಿಚಯಿಸಿಕೊಂಡ ಸುಪ್ರೀತ್ ಎಂಬುವರು ‘ಬಲರಾಮನ ದಿನಗಳು’ ಸಿನಿಮಾದ ವಿತರಣೆ ಹಕ್ಕು ಖರೀದಿ ಮಾಡಿರುತ್ತಾರೆ. ಖರೀದಿ ಮಾಡುವ ಸಮಯದಲ್ಲಿ ನಿರ್ಮಾಪಕರಿಗೆ ಯಾವುದೇ ಹಣ ನೀಡಿರುವುದಿಲ್ಲ. ಆ ಬಳಿಕ ಲೆಕ್ಕಾಚಾರದ ಬಗ್ಗೆ ಕೇಳಿದಾಗ 43 ಸಾವಿರಕ್ಕೂ ಹೆಚ್ಚು ಮೊತ್ತ ಗಳಿಕೆ ಆದರಷ್ಟೆ ಚಿತ್ರಮಂದಿರದವರು ಹಣ ಕೊಡುವುದಾಗಿ ಹೇಳಿದ್ದರು. ಆದರೆ ನಾವು (ನಿರ್ಮಾಣ ಸಂಸ್ಥೆಯ ವತಿಯಿಂದ) ವಿಚಾರಿಸಿದಾಗ ಚಿತ್ರಮಂದಿರಗಳವರು 50% ಶೇರು ನೀಡಿರುವುದಾಗಿ ಹೇಳಿದ್ದಾರೆ. ಆದರೆ ಆ ಹಣವನ್ನು ನಮಗೆ ನೀಡಲಾಗಿಲ್ಲ’ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಯಶ್​ ಕಾರಣಕ್ಕೆ ‘ಟಾಕ್ಸಿಕ್’ ಸೋತಿತೆ? ಸಹ ನಟ ಹೇಳಿದ್ದೇನು?

ಅಲ್ಲದೆ ವಿತರಣೆ ಹಕ್ಕು ಖರೀದಿ ಸಮಯದಲ್ಲಿ ‘ಬಲರಾಮನ ದಿನಗಳು’ ಸಿನಿಮಾದ ಒಟಿಟಿ ಮತ್ತು ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ತಾವೇ ಮಾಡಿಸಿಕೊಡುವುದಾಗಿ ಹೇಳಿದ್ದರು. ಆದರೆ ಆ ರೀತಿ ಯಾವುದೇ ಕಾರ್ಯವನ್ನು ಅವರು ಮಾಡಿಲ್ಲ. ನಮಗೆ ಬರಬೇಕಾದ ಹಣವನ್ನೂ ಕೊಟ್ಟಿಲ್ಲ. ಹಾಗೂ ಸಿನಿಮಾ ಅನ್ನು ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ಕೇವಲ ಅವರ ಹಿಡಿತ ಇರುವ ಚಿತ್ರಮಂದಿರದಲ್ಲಿ ಮಾತ್ರವೇ ಬಿಡುಗಡೆ ಮಾಡಿರುತ್ತಾರೆ’ ಎಂದಿದ್ದಾರೆ ನಿರ್ಮಾಪಕರು.

ಸಿನಿಮಾದ ಎಲ್ಲ ಪೋಸ್ಟರ್​​ಗಳಲ್ಲಿ ‘ಕೆವಿಎನ್ ವಿತರಣೆ’ ಎಂದು ಜಾಹೀರಾತು ನೀಡಿದ್ದರು. ಆದರೆ ‘ಬಲರಾಮನ ದಿನಗಳು’ ಸಿನಿಮಾದ ಎಲ್ಲ ವ್ಯವಹಾರ ನಡೆದಿರುವುದು ಎಸ್​​ಎಸ್​​ಎಸ್ ಎಂಟರ್ಪ್ರೈಸ್​​ ಹೆಸರಿನ ಸಂಸ್ಥೆಯ ಮೂಲಕ. ನಮಗೆ ನೀಡಲಾಗಿರುವ ಇನ್​​ವಾಯ್ಸ್ ಸಹ ಅದೇ ಸಂಸ್ಥೆಯಿಂದ ನೀಡಲಾಗಿದ್ದು, ಇದರಿಂದ ತೆರಿಗೆ ವಂಚನೆ ಸಹ ಆಗಿದೆ. ಈ ಬಗ್ಗೆ ನಿರ್ಮಾಪಕರ ಸಂಘವು ತನಿಖೆ ನಡೆಸಬೇಕು ಹಾಗೂ ನಮಗೆ ಆಗಿರುವ ನಷ್ಟಕ್ಕೆ ಕೆವಿಎನ್​ ವತಿಯಿಂದ ಎರಡು ಕೋಟಿ ಪರಿಹಾರ ಕೊಡಿಸಬೇಕು ಎಂದು ಪದ್ಮಾವತಿ ಫಿಲಮ್ಸ್​​ನ ನಿರ್ಮಾಪಕರು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕಾರು: 4 ಮಂದಿ ಯುವಕರ ಸಾಹಸಮಯ ರಕ್ಷಣೆ
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಕಾರು: 4 ಮಂದಿ ಯುವಕರ ಸಾಹಸಮಯ ರಕ್ಷಣೆ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ನೀವಿರುವಲ್ಲೇ ಇ ಖಾತಾ ಪಡೆಯಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಜಾತಿನಿಂದನೆ ಆರೋಪ; ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮತ್ತೊಂದು ಎಫ್​ಐಆರ್
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಕಾವೇರಿ ನೀರು ಹಂಚಿಕೆ: ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
ಇಂದು ಶ್ರವಣ ದ್ವಾದಶಿ: ಮೇಷಾದಿ 12 ರಾಶಿಗಳ ಜನರ ದಿನ ಭವಿಷ್ಯ ಇಲ್ಲಿದೆ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು