Sai Pallavi: ಸಾಯಿ ಪಲ್ಲವಿಗೆ ಬಂತು ಮತ್ತಷ್ಟು ಬಲ; ಕನ್ನಡದಲ್ಲೂ ಬರುವ ಹೊಸ ಚಿತ್ರಕ್ಕೆ ಕೈ ಜೋಡಿಸಿದ ಸೂರ್ಯ-ಜ್ಯೋತಿಕಾ

Suriya Jyothika | Gagri Movie: ‘ಗಾರ್ಗಿ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಖತ್​ ನಿರೀಕ್ಷೆ ಇದೆ. ಈ ಸಿನಿಮಾ ಕನ್ನಡದಲ್ಲೂ ಮೂಡಿಬರುತ್ತಿದೆ. ಸಾಯಿ ಪಲ್ಲವಿ ನಟನೆಯ ಈ ಚಿತ್ರಕ್ಕೆ ಈಗ ಸೂರ್ಯ ಮತ್ತು ಜ್ಯೋತಿಕಾ ಕೂಡ ಸಾಥ್​ ನೀಡಿದ್ದಾರೆ.

Sai Pallavi: ಸಾಯಿ ಪಲ್ಲವಿಗೆ ಬಂತು ಮತ್ತಷ್ಟು ಬಲ; ಕನ್ನಡದಲ್ಲೂ ಬರುವ ಹೊಸ ಚಿತ್ರಕ್ಕೆ ಕೈ ಜೋಡಿಸಿದ ಸೂರ್ಯ-ಜ್ಯೋತಿಕಾ
ಸೂರ್ಯ, ಸಾಯಿ ಪಲ್ಲವಿ, ಜ್ಯೋತಿಕಾ
Edited By:

Updated on: Jun 25, 2022 | 8:28 AM

ನಟಿ ಸಾಯಿ ಪಲ್ಲವಿ (Sai Pallavi) ಅವರು ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಅವರು ನೀಡಿದ ಒಂದು ಹೇಳಿಕೆ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ಸೋಶಿಯಲ್​ ಮೀಡಿಯಾದಲ್ಲಿ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಅವರು ನಟಿಸಿದ ‘ವಿರಾಟ ಪರ್ವಂ’ ಸಿನಿಮಾ ರಿಲೀಸ್​ ಆಗಿ ಸೋಲುಂಡಿತು. ಹಾಗಿದ್ದರೂ ಕೂಡ ಸಾಯಿ ಪಲ್ಲವಿ ಅವರ ಆತ್ಮವಿಶ್ವಾಸ ಕಡಿಮೆ ಆಗಿಲ್ಲ. ಎಂದಿನ ಹುಮ್ಮಸ್ಸಿನೊಂದಿಗೆ ಅವರು ಹೊಸ ಸಿನಿಮಾದ ಕೆಲಸಗಳತ್ತ ಗಮನ ಹರಿಸಿದ್ದಾರೆ. ನಟನೆ ಮೂಲಕವೇ ಎಲ್ಲರ ಗಮನ ಸೆಳೆದಿರುವ ಅವರಿಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿದೆ. ಶೀಘ್ರದಲ್ಲೇ ಸಾಯಿ ಪಲ್ಲವಿ ಅವರ ‘ಗಾರ್ಗಿ’ (Gagri) ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ತಂಡದಿಂದ ಒಂದು ಬಿಗ್​ ಅಪ್​ಡೇಟ್​ ಸಿಕ್ಕಿದೆ. ‘ಗಾರ್ಗಿ’ ಚಿತ್ರವನ್ನು ಬಿಡುಗಡೆ ಮಾಡಲು ಕಾಲಿವುಡ್​ ಸ್ಟಾರ್​ ದಂಪತಿ ಸೂರ್ಯ ಮತ್ತು ಜ್ಯೋತಿಕಾ (Suriya Jyothika) ಅವರು ಮುಂದೆ ಬಂದಿದ್ದಾರೆ.

ದೊಡ್ಡ ಸುದ್ದಿ ನೀಡುವುದಾಗಿ ಸಾಯಿ ಪಲ್ಲವಿ ಅವರು ಇತ್ತೀಚೆಗೆ ಅನೌನ್ಸ್​ ಮಾಡಿದ್ದರು. ಅದರಂತೆ ಅಭಿಮಾನಿಗಳು ಖುಷಿಯಾಗುವ ಸುದ್ದಿಯನ್ನೇ ಕೊಟ್ಟಿದ್ದಾರೆ. ‘ಗಾರ್ಗಿ ಚಿತ್ರವನ್ನು ಯಾರು ಪ್ರೆಸೆಂಟ್​ ಮಾಡುತ್ತಿದ್ದಾರೆ ನೋಡಿ..’ ಎಂದು ಬರೆದುಕೊಂಡಿರುವ ಸಾಯಿ ಪಲ್ಲವಿ ಅವರು ಸೂರ್ಯ ಮತ್ತು ಜ್ಯೋತಿಕಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸ್ಟಾರ್​ ದಂಪತಿಗೆ ಸಾಯಿ ಪಲ್ಲವಿ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ
Sai Pallavi: ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಸಾಯಿ ಪಲ್ಲವಿ ಹೇಳಿಕೆ ವಿವಾದ: ನಟಿಯ ಪರವಾಗಿ ನಿಂತ ರಮ್ಯಾ
Sai Pallavi: ಪಾತ್ರಕ್ಕಾಗಿ ಸಾಯಿ ಪಲ್ಲವಿ 2 ದಿನ ಉಪವಾಸ; ಇವರೇ ನಿಜವಾದ ನ್ಯಾಷನಲ್​ ಕ್ರಶ್​ ಎಂದ ಫ್ಯಾನ್ಸ್​
Sai Pallavi: ಮುಖ ಮುಚ್ಕೊಂಡು ಥಿಯೇಟರ್​ಗೆ ಬಂದ ಸಾಯಿ ಪಲ್ಲವಿ; ನೋಡಿ ಎಂಜಾಯ್​ ಮಾಡಿದ್ದು ಯಾವ ಸಿನಿಮಾ?
ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

‘ಗಾರ್ಗಿ’ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಖತ್​ ನಿರೀಕ್ಷೆ ಇದೆ. ಈ ಸಿನಿಮಾ ಕನ್ನಡದಲ್ಲೂ ಮೂಡಿಬರುತ್ತಿದೆ. ಅದಕ್ಕೆ ಕನ್ನಡದಲ್ಲಿ ಸ್ವತಃ ಸಾಯಿ ಪಲ್ಲವಿ ಅವರು ಡಬ್ಬಿಂಗ್​ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಕುತೂಹಲ ಹೆಚ್ಚಿದೆ. ಈ ಸಿನಿಮಾ ಬಗ್ಗೆ ಸೂರ್ಯ ಅವರು ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಸಾಯಿ ಪಲ್ಲವಿ ಅವರ ಬಲ ಹೆಚ್ಚಿದಂತಾಗಿದೆ.

‘ಜ್ಯೋತಿಕಾ ಮತ್ತು ನಾನು ಗಾರ್ಗಿ ಚಿತ್ರತಂಡದ ಜೊತೆ ಕೈ ಜೋಡಿಸುತ್ತಿರುವುದಕ್ಕೆ ಖುಷಿ ಇದೆ. ಕೆಲವು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಹೊಸ ಆಲೋಚನೆ ಮತ್ತು ಬರವಣಿಗೆಯನ್ನು ಸೆಲೆಬ್ರೇಟ್​ ಮಾಡಬೇಕು. ನಿಮ್ಮೆಲ್ಲರಿಗೂ ಇದು ಇಷ್ಟ ಆಗಲಿದೆ ಎಂಬ ನಂಬಿಕೆ ಇದೆ’ ಎಂದು ಸೂರ್ಯ ಅವರು ಟ್ವೀಟ್​ ಮಾಡಿದ್ದಾರೆ. ‘ಗಾರ್ಗಿ’ ಚಿತ್ರಕ್ಕೆ ಗೌತಮ್​ ರಾಮಚಂದ್ರನ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?

Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

Published On - 8:24 am, Sat, 25 June 22