ಆ ಕಾರಣಕ್ಕೆ ಮದುವೆ ಫೋಟೋ ರಿವೀಲ್ ಮಾಡಿಲ್ಲ ತಾಪ್ಸಿ ಪನ್ನು

ನಟಿ ತಾಪಸಿ ಪನ್ನು ತಮ್ಮ ಮದುವೆಯ ಫೋಟೋಗಳನ್ನು ಬಹಿರಂಗಪಡಿಸದಿರಲು ಕಾರಣ ತಿಳಿಸಿದ್ದಾರೆ. ತಮ್ಮ ಪತಿ ಮಥಿಯಾಸ್ ಹಾಗೂ ಅತಿಥಿಗಳ ಖಾಸಗಿತನವನ್ನು ಗೌರವಿಸಲು ಈ ನಿರ್ಧಾರ ತಗೆದುಕೊಂಡಿದ್ದಾಗಿ ಹೇಳಿದ್ದಾರೆ. 13 ವರ್ಷಗಳ ಪ್ರೀತಿಯ ನಂತರ ಮದುವೆಯಾಗಿದ್ದ ಅವರು, ಪರಸ್ಪರ ಗೌರವವೇ ತಮ್ಮ ಸಒಲವಿನ ದಾಂಪತ್ಯದ ರಹಸ್ಯ ಎಂದು ಸ್ಪಷ್ಟಪಡಿಸಿದ್ದಾರೆ.

ಆ ಕಾರಣಕ್ಕೆ ಮದುವೆ ಫೋಟೋ ರಿವೀಲ್ ಮಾಡಿಲ್ಲ ತಾಪ್ಸಿ ಪನ್ನು
ಪತಿ ಜೊತೆ ತಾಪ್ಸೀ
Edited By:

Updated on: Sep 28, 2026 | 7:46 AM

ಮುಖ್ಯಾಂಶಗಳು

  • ಮದುವೆ ಫೋಟೋ ಸೀಕ್ರೆಟ್ ಓಪನ್
  • ನಟಿ ತಾಪಸಿ ಪನ್ನು ನೀಡಿದ ಖಡಕ್ ಉತ್ತರವೇನು?
  • ಪತಿ ಹಾಗೂ ಅತಿಥಿಗಳ ಖಾಸಗಿತನಕ್ಕೆ ಆದ್ಯತೆ

ಬಾಲಿವುಡ್ ನಟಿ ತಾಪ್ಸಿ ಪನ್ನು ತಮ್ಮ ಮದುವೆಯ ವಿಚಾರವನ್ನು ಅತ್ಯಂತ ಗೌಪ್ಯವಾಗಿಟ್ಟಿದ್ದರು. ಡೆನ್ಮಾರ್ಕ್‌ನ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಅವರೊಂದಿಗೆ ಅವರು ಸರಳವಾಗಿ ವಿವಾಹವಾಗಿದ್ದರು. ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ಅವರು ಇದುವರೆಗೆ ಅಧಿಕೃತ ಫೋಟೋಗಳನ್ನು ಹಂಚಿಕೊಂಡಿಲ್ಲ. ಈ ನಿರ್ಧಾರದ ಹಿಂದಿರುವ ನೈಜ ಕಾರಣವನ್ನು ತಾಪ್ಸಿ ಅವರು ಇತ್ತೀಚೆಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

‘ನನ್ನ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಪ್ರತ್ಯೇಕವಾಗಿಡುವುದು ನನಗೆ ಮೊದಲಿನಿಂದಲೂ ಅಭ್ಯಾಸ. ಮದುವೆಯಂತಹ ಪವಿತ್ರ ವಿಷಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ನನಗೆ ಇಷ್ಟವಿಲ್ಲ. ಮಾಧ್ಯಮಗಳಿಗೆ ಅಧಿಕೃತ ಹೇಳಿಕೆ ನೀಡುವುದು ನನಗೇಕೋ ವಿಚಿತ್ರ ಎನಿಸುತ್ತದೆ. ನಮ್ಮ ಮದುವೆಗೆ ಬಂದಿದ್ದ ಆತ್ಮೀಯರೆಲ್ಲರಿಗೂ ಕಾರ್ಯಕ್ರಮದ ವಿಡಿಯೋ ತಲುಪಿಸಲಾಗಿದೆ. ಅವರು ಯಾರೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದೆ ಗೌರವ ನೀಡಿದ್ದಾರೆ’ ಎಂದಿದ್ದಾರೆ ನಟಿ.

‘ಆದರೆ ಮದುವೆಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿತ್ತು. ಈ ಘಟನೆಯು ನಮಗೆ ಸಾಕಷ್ಟು ಮುಜುಗರ ಉಂಟುಮಾಡಿತು. ಕುಟುಂಬದವರು ಕರೆದಿದ್ದ ಕೆಲವು ಅತಿಥಿಗಳು ನೀಡಿದ್ದ ಸೂಚನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ. ಹೀಗಾಗಿ ಆ ವಿಡಿಯೋ ಹೊರಬರಲು ಕಾರಣವಾಯಿತು. ಈ ವಿಚಾರವಾಗಿ ನಾನು ಯಾರ ಮೇಲೆಯೂ ಕೋಪಗೊಳ್ಳದೆ ನೇರವಾಗಿಯೇ ಮಾತನಾಡಿದ್ದೇನೆ’ ಎನ್ನುತ್ತಾರೆ ತಾಪ್ಸಿ.

‘ನನ್ನ ಪತಿ ಹಾಗೂ ಅವರ ಕುಟುಂಬದವರು ಸಾರ್ವಜನಿಕ ರಂಗದಲ್ಲಿದ್ದವರಲ್ಲ. ಸಿನಿಮಾ ರಂಗದಲ್ಲಿದ್ದ ಕಾರಣಕ್ಕೆ ನಾನು ಮಾಧ್ಯಮಗಳ ಕಣ್ಣಿಗೆ ಅಭ್ಯಾಸವಾಗಿದ್ದೇನೆ. ಆದರೆ ನನ್ನ ಪತಿಗೆ ಹಾಗೂ ಬಂದಿದ್ದ ಅತಿಥಿಗಳಿಗೆ ಈ ರೀತಿಯ ಕಟ್ಟುನಿಟ್ಟಿನ ಗಮನ ಇಷ್ಟವಾಗುವುದಿಲ್ಲ. ಅವರ ಖಾಸಗಿ ಜೀವನಕ್ಕೆ ತೊಂದರೆಯಾಗಬಾರದು ಎಂಬುದು ನನ್ನ ಮುಖ್ಯ ಉದ್ದೇಶವಾಗಿತ್ತು. ಹೀಗಾಗಿ ಯಾವುದೇ ಫೋಟೋಗಳನ್ನು ನಾನು ಹೊರಗೆ ಬಿಡಲಿಲ್ಲ’ ಎನ್ನುತ್ತಾರೆ ನಟಿ.

ಇದನ್ನೂ ಓದಿ: ಹೊಟ್ಟೆಯ ಬೊಜ್ಜು ಕರಗಿಸಲು ಹೋಗಿ ಸಮಸ್ಯೆ ಮಾಡಿಕೊಂಡ ತಾಪ್ಸಿ ಪನ್ನು; ಮಹಿಳೆಯರಿಗೆ ಎಚ್ಚರಿಕೆ

ನಾವು 2013 ರಿಂದ ಅಂದರೆ ಸುಮಾರು 13 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ನಮ್ಮಿಬ್ಬರ ನಡುವೆ ಪರಸ್ಪರ ಗೌರವ ಹಾಗೂ ಅಪಾರ ಭದ್ರತೆಯ ಭಾವನೆ ಇದೆ. ಮದುವೆಯ ಶಾಸ್ತ್ರಗಳ ಸಮಯದಲ್ಲಿ ನಾನು ಎಲ್ಲೂ ಕಣ್ಣೀರು ಹಾಕಲಿಲ್ಲ. ನನ್ನ ಪತಿ ಡೆನ್ಮಾರ್ಕ್‌ಗಿಂತ ಹೆಚ್ಚಾಗಿ ಭಾರತದಲ್ಲೇ ನನ್ನೊಂದಿಗೆ ಸಮಯ ಕಳೆಯುತ್ತಾರೆ. ನನ್ನ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದರೆ ಮಥಿಯಾಸ್ ಅವರನ್ನು ಮದುವೆಯಾಗಿದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us