Tamannaah Bhatia: ‘ಇವರೇ ನನ್ನ ಗಂಡ’: ವಿಡಿಯೋ ಮೂಲಕ ಪರಿಚಯ ಮಾಡಿಸಿದ ನಟಿ ತಮನ್ನಾ

| Updated By: ಮದನ್​ ಕುಮಾರ್​

Updated on: Nov 17, 2022 | 1:03 PM

Tamannaah Bhatia Marriage: ವಿಶೇಷವಾದ ವಿಡಿಯೋವೊಂದನ್ನು ತಮನ್ನಾ ಹಂಚಿಕೊಂಡಿದ್ದಾರೆ. ‘ಉದ್ಯಮಿ ಆಗಿರುವ ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ’ ಎಂದು ಅವರು ಕ್ಯಾಪ್ಷನ್​ ನೀಡಿದ್ದಾರೆ.

Tamannaah Bhatia: ‘ಇವರೇ ನನ್ನ ಗಂಡ’: ವಿಡಿಯೋ ಮೂಲಕ ಪರಿಚಯ ಮಾಡಿಸಿದ ನಟಿ ತಮನ್ನಾ
ತಮನ್ನಾ ಭಾಟಿಯಾ
Follow us on

ನಟಿಯರ ಮದುವೆ ಬಗ್ಗೆ ಅವರ ಕುಟುಂಬದವರು ಹೆಚ್ಚು ತಲೆ ಕೆಡಿಸಿಕೊಂಡಿರುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಗಾಸಿಪ್​ (Gossip) ಮಂದಿಯಂತೂ ಸದಾ ಕಾಲ ಆ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಈಗ ನಟಿ ತಮನ್ನಾ ಭಾಟಿಯಾ ಅವರ ಮದುವೆ (Tamannaah Bhatia Marriage) ಬಗ್ಗೆ ಇಲ್ಲಸಲ್ಲದ ಗಾಸಿಪ್​ ಹರಡಿದೆ. ಉದ್ಯಮಿಯೊಬ್ಬರ ಜೊತೆ ತಮನ್ನಾ ಹಸೆಮಣೆ ಏರುತ್ತಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಈ ವಿಚಾರ ತಮನ್ನಾ ಭಾಟಿಯಾ (Tamannaah Bhatia) ಅವರ ಕಿವಿಗೂ ಬಿದ್ದಿದೆ. ಅದಕ್ಕೆ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇವರೇ ನೋಡಿ ನನ್ನ ಗಂಡ’ ಎಂದು ಅವರು ಪರಿಚಯ ಮಾಡಿಕೊಟ್ಟಿದ್ದಾರೆ. ಆದರೆ ಅದರಲ್ಲೊಂದು ಟ್ವಿಸ್ಟ್​ ಇದೆ.

ಹಲವು ವರ್ಷಗಳಿಂದ ತಮನ್ನಾ ಭಾಟಿಯಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಅವರಿಗೆ ಸಖತ್​ ಬೇಡಿಕೆ ಇದೆ. ಸಾಲು ಸಾಲು ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರು ಮದುವೆಯ ಆಲೋಚನೆ ಮಾಡುವುದು ಯಾಕೋ ಡೌಟ್​. ಹಾಗಿದ್ದರೂ ಕೂಡ ಗಾಸಿಪ್​ ಜೋರಾಗಿಯೇ ಹರಡುತ್ತಿದೆ. ಇದಕ್ಕೆ ತಮ್ಮದೇ ರೀತಿಯಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಹುಡುಗನ ರೀತಿಯಲ್ಲಿ ತಮನ್ನಾ ಡ್ರೆಸ್​ ಮಾಡಿಕೊಂಡಿದ್ದಾರೆ. ಮುಖಕ್ಕೆ ದಪ್ಪ ಮೀಸೆ ಅಂಟಿಸಿಕೊಂಡಿದ್ದಾರೆ. ಅದೇ ಗೆಟಪ್​ನಲ್ಲಿ ಬಂದು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡು, ‘ಉದ್ಯಮಿ ಆಗಿರುವ ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಆ ಮೂಲಕ ತಮ್ಮ ಮದುವೆ ಬಗ್ಗೆ ಗಾಸಿಪ್​ ಹಬ್ಬಿಸುವವರಿಗೆ ತಮನ್ನಾ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ
ವಿಶೇಷ ಫೋಟೋ ಹಂಚಿಕೊಂಡು ದೀಪಾವಳಿ ವಿಶ್ ಮಾಡಿದ ನಟಿ ತಮನ್ನಾ
Tamannaah Bhatia: ತೆಲುಗಿನಲ್ಲಿ ‘ನಿಧಿಮಾ‘ ಆಗಿ ಕಾಣಿಸಿಕೊಳ್ಳುತ್ತಿರುವ ತಮನ್ನಾ ಭಾಟಿಯಾ; ನಟಿಯ ಅಂದದ ಫೋಟೋಗಳು ಇಲ್ಲಿವೆ
ಸಮುದ್ರ ತೀರದಲ್ಲಿ ಜೋಕಾಲಿ ಆಡುತ್ತ ವೆಕೇಶನ್ ಎಂಜಾಯ್ ಮಾಡಿದ ನಟಿ ತಮನ್ನಾ
ತಮನ್ನಾ ರೀತಿ ಡ್ಯಾನ್ಸ್​ ಮಾಡ್ತಾರಾ ಈ ಸೆಲೆಬ್ರಿಟಿಗಳು? ಹೊಸ ಸವಾಲು ಹಾಕಿದ ‘ಮಿಲ್ಕಿ ಬ್ಯೂಟಿ’

‘ಬಾಹುಬಲಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ ತಮನ್ನಾ ಭಾಟಿಯಾ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಬಾಲಿವುಡ್​ನಲ್ಲೂ ಅವರು ಫೇಮಸ್​ ಆಗಿದ್ದಾರೆ. ಅವರು ನಟಿಸಿದ ‘ಬಬ್ಲಿ ಬೌನ್ಸರ್​’ ಸಿನಿಮಾ ಇತ್ತೀಚೆಗೆ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆಯಿತು. ಈ ಚಿತ್ರಕ್ಕೆ ಮಧುರ್​ ಭಂಡಾರ್ಕರ್​ ನಿರ್ದೇಶನ ಮಾಡಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ಈ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ.

‘ನನಗೀಗ ಮದುವೆ ಆಗುವ ಮನಸ್ಸು ಇಲ್ಲ. ನನ್ನ ವೃತ್ತಿಜೀವನ ಸರಿಯಾದ ರೀತಿಯಲ್ಲಿ ಸಾಗುತ್ತಿದೆ. ಅದರ ಮೇಲೆ ನಾನು ಗಮನ ಹರಿಸಬೇಕಿದೆ’ ಎಂದು ಮಾಧ್ಯಮಗಳಿಗೆ ತಮನ್ನಾ ಈ ಮೊದಲು ಪ್ರತಿಕ್ರಿಯೆ ನೀಡಿದ್ದರು. ಆದರೂ ಅವರ ಮದುವೆ ಬಗ್ಗೆ ಪದೇಪದೇ ಗಾಸಿಪ್​ ಹಬ್ಬುತ್ತಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎನ್ನುತ್ತಿದ್ದಾರೆ ಕೆಲವರು. ಸದ್ಯಕ್ಕಂತೂ ಮದುವೆ ಕುರಿತು ತಮನ್ನಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:03 pm, Thu, 17 November 22