AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆಯಲ್ಲಿ ಪಿಎಂ ಮೋದಿಯ ಧುರಂಧರ್ ದಳಪತಿ ವಿಜಯ್? ಶುರುವಾಗಿದೆ ಚರ್ಚೆ

ತಮಿಳುನಾಡು ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಟಿವಿಕೆ ಮುನ್ನಡೆ ಸಾಧಿಸಿದೆ. ಇದರ ಬೆನ್ನಲ್ಲೇ ನಟ ವಿಜಯ್ ರಾಜಕೀಯ ಪ್ರವೇಶದ ಕುರಿತು ದೊಡ್ಡ ಚರ್ಚೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ವಿಜಯ್ ಅವರನ್ನು ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಲು ಕಣಕ್ಕಿಳಿಸಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. 2014ರಲ್ಲಿ ಮೋದಿ-ವಿಜಯ್ ಭೇಟಿ ಪ್ರಸ್ತುತ ಸನ್ನಿವೇಶದಲ್ಲಿ ಮಹತ್ವ ಪಡೆದಿದೆ.

ತಮಿಳುನಾಡು ಚುನಾವಣೆಯಲ್ಲಿ ಪಿಎಂ ಮೋದಿಯ ಧುರಂಧರ್ ದಳಪತಿ ವಿಜಯ್? ಶುರುವಾಗಿದೆ ಚರ್ಚೆ
ವಿಜಯ್-ಮೋದಿ
ರಾಜೇಶ್ ದುಗ್ಗುಮನೆ
|

Updated on: May 04, 2026 | 12:33 PM

Share

ತಮಿಳುನಾಡು ಚುನಾವಣಾ ಫಲಿತಾಂಶ ಹೊರ ಬಂದಿದೆ. ಟಿವಿಕೆ ಮುನ್ನಡೆ ಸಾಧಿಸುವ ಮೂಲಕ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷವನ್ನು ಹಿಂದಿಕ್ಕಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ. ‘ತಮಿಳುನಾಡಿನಲ್ಲಿ ದಳಪತಿ ವಿಜಯ್ ಕಣಕ್ಕಿಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯೇ? ವಿಜಯ್ ಅವರು ಮೋದಿಯ ಧುರಂಧರ್’ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಧುರಂಧರ್’ ಸಿನಿಮಾದಲ್ಲಿ ಜಸ್ಕಿರತ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ ಎಂಬ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಉಗ್ರ ಜಾಲವನ್ನು ನಾಶ ಮಾಡುತ್ತಾರೆ. ಅವರನ್ನು ಭಾರತದ ‘ಧುರಂಧರ್’ ಎಂದು ಕರೆಯಲಾಗುತ್ತದೆ. ಅದೇ ರೀತಿ, ತಮಿಳುನಾಡಿನ ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಲು ವಿಜಯ್ ಅವರನ್ನು ಕಣಕ್ಕಿಳಿಸಿದ್ದು ಮೋದಿಯೇ ಎಂಬ ಮಾತುಗಳು ಕೇಳಿಬರುತ್ತಿವೆ.

ಅದು 2014ರ ಸಮಯ. ಆ ವರ್ಷ ಏಪ್ರಿಲ್ 16ರಂದು ಕೊಯಮತ್ತೂರಿನಲ್ಲಿ ನಟ ವಿಜಯ್ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋವನ್ನು ಮೋದಿ ಹಂಚಿಕೊಂಡಿದ್ದರು. ಈ ಭೇಟಿ ರಾಜಕೀಯೇತರ ಎಂದು ವಿವರಿಸಲಾಗಿತ್ತು. ಇಬ್ಬರೂ ಪರಸ್ಪರ ಲೋಕಾರೂಢ ವಿಷಯಗಳ ಬಗ್ಗೆ ಮಾತನಾಡಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ತಮಿಳುನಾಡಿನಲ್ಲಿ ರಜನಿಕಾಂತ್ ಅವರನ್ನೂ ಭೇಟಿ ಮಾಡಿದ್ದ ಮೋದಿ ಅವರು, ರಾಜ್ಯದ ಪ್ರಭಾವಿ ತಾರೆಗಳ ಮೂಲಕ ಮತದಾರರನ್ನು ತಲುಪುವ ಪ್ರಯತ್ನ ಮಾಡಿದ್ದರು. ಆ ಸಮಯದಲ್ಲಿ ಈ ಭೇಟಿ ದೊಡ್ಡ ಸಂಚಲನ ಮೂಡಿಸಿತ್ತಾದರೂ, ವಿಜಯ್ ಅವರು ಆಗ ಯಾವುದೇ ರಾಜಕೀಯ ಪಕ್ಷ ಸೇರದೆ ದೂರ ಉಳಿದಿದ್ದರು. ಅಂದು ಮೋದಿ ಹಂಚಿಕೊಂಡಿದ್ದ ಫೋಟೋವನ್ನು ರೀಟ್ವೀಟ್ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕನ ಮೇಲೆ ಕತೆ ಕದ್ದ ಆರೋಪ: ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?

‘ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಭೇಟಿ ಮಾಡಲು ಬರುವ ಅತಿಥಿಗಳನ್ನು ಎದುರುಬದುರಿನ ಆಸನಗಳಲ್ಲಿ ಕೂರಿಸುತ್ತಾರೆ. ಆದರೆ 2014ರಲ್ಲಿ ನಟ ವಿಜಯ್ ಅವರನ್ನು ಭೇಟಿ ಮಾಡಿದಾಗ, ಅವರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದರು. ಆಗ ಅರ್ಥವಾಗುತ್ತಿರಲಿಲ್ಲ, ಈಗ ಅರ್ಥವಾಗುತ್ತಿದೆ’ ಎಂದು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್?
ವಿಜಯ್ ರಾಜಕೀಯ ಎಂಟ್ರಿ ಹಿಂದೆ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್?
ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಣೆ
ಮದುವೆ ಮನೆಯಲ್ಲೂ ಚುನಾವಣಾ ಫಲಿತಾಂಶದ ಕುತೂಹಲ: ಟಿವಿ9 ಕನ್ನಡ ವೀಕ್ಷಣೆ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸುನಾಮಿ: ಸುವೇಂದು ಅಧಿಕಾರಿ ಏನಂದ್ರು?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸುನಾಮಿ: ಸುವೇಂದು ಅಧಿಕಾರಿ ಏನಂದ್ರು?
ಕೇರಳದಲ್ಲಿ ಯುಡಿಎಫ್​ಗೆ ಭರ್ಜರಿ ಮುನ್ನಡೆ: ಕೋಝಿಕ್ಕೋಡ್​ಗೆ ಧಾವಿಸಿದ ಜಮೀರ್
ಕೇರಳದಲ್ಲಿ ಯುಡಿಎಫ್​ಗೆ ಭರ್ಜರಿ ಮುನ್ನಡೆ: ಕೋಝಿಕ್ಕೋಡ್​ಗೆ ಧಾವಿಸಿದ ಜಮೀರ್
ಕಾಡಿಗೆ ರಾಜನೊಬ್ಬನೇ, ಅವನು ಒಂಟಿಯಾಗಿದ್ದರೂ ಸರಿ!
ಕಾಡಿಗೆ ರಾಜನೊಬ್ಬನೇ, ಅವನು ಒಂಟಿಯಾಗಿದ್ದರೂ ಸರಿ!
ಬಾಗಲಕೋಟೆ ಬೈ ಎಲೆಕ್ಷನ್​: ಕಾಂಗ್ರೆಸ್​​ಗೆ ಮುನ್ನಡೆ; ಕಾರ್ಯಕರ್ತರ ಸಂಭ್ರಮ
ಬಾಗಲಕೋಟೆ ಬೈ ಎಲೆಕ್ಷನ್​: ಕಾಂಗ್ರೆಸ್​​ಗೆ ಮುನ್ನಡೆ; ಕಾರ್ಯಕರ್ತರ ಸಂಭ್ರಮ
ರೋವ್‌ಮನ್ ಪೊವೆಲ್ ಹಿಡಿದ 'ಅಸಾಧ್ಯ' ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ!
ರೋವ್‌ಮನ್ ಪೊವೆಲ್ ಹಿಡಿದ 'ಅಸಾಧ್ಯ' ಕ್ಯಾಚ್‌ಗೆ ಕ್ರಿಕೆಟ್ ಲೋಕ ಫಿದಾ!
ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು?
ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು?
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಲೈವ್ ವಿಡಿಯೋ
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಲೈವ್ ವಿಡಿಯೋ
ಟ್ರಾಫಿಕ್ ಎಂದು ಟ್ರಕ್​ ಅಡಿ ಗಾಡಿ ಸಮೇತ ನುಗ್ಗುತ್ತಿರುವ ಬೈಕ್ ಸವಾರರು
ಟ್ರಾಫಿಕ್ ಎಂದು ಟ್ರಕ್​ ಅಡಿ ಗಾಡಿ ಸಮೇತ ನುಗ್ಗುತ್ತಿರುವ ಬೈಕ್ ಸವಾರರು