AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದಲ್ಲಿ ಜೂನ್ 21ಕ್ಕೆ ‘ಲವ್ ಮಾಕ್‌ಟೇಲ್ 3’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯಿಸಿರುವ 'ಲವ್ ಮಾಕ್ಟೇಲ್ 3' ಸಿನಿಮಾ ಜೂನ್ 21 ಭಾನುವಾರ ಸಂಜೆ 4:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಚಿತ್ರಮಂದಿರಗಳಲ್ಲಿ ಯಶಸ್ವಿಯಾದ ಈ ಸಿನಿಮಾ ಈಗ ಮೊದಲ ಬಾರಿಗೆ ದೂರದರ್ಶನದಲ್ಲಿ ವೀಕ್ಷಕರಿಗೆ ಲಭ್ಯವಾಗಲಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಸಿನಿಮಾನ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ವೀಕ್ಷಿಸಬಹುದು. ತಂದೆ-ಮಗಳ ಬಾಂಧವ್ಯ, ಕುಟುಂಬದ ಜವಾಬ್ದಾರಿ ಹಾಗೂ ಭಾವನಾತ್ಮಕ ಹೋರಾಟದ ಕಥಾವಸ್ತುವು ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಜೀ ಕನ್ನಡದಲ್ಲಿ ಜೂನ್ 21ಕ್ಕೆ 'ಲವ್ ಮಾಕ್‌ಟೇಲ್ 3' ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್
ಲವ್ ಮಾಕ್ಟೇಲ್ 3Image Credit source: Love Mocktail 3 Movie
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 19, 2026 | 7:48 AM

Share

ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ಅಭಿನಯಿಸಿರುವ ‘ಲವ್ ಮಾಕ್ಟೇಲ್’ ಸರಣಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಮೊದಲು ‘ಲವ್ ಮಾಕ್ಟೇಲ್’ ಹಾಗೂ ‘ಲವ್ ಮಾಕ್ಟೇಲ್ 2’ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿದ್ದವು. ಇತ್ತೀಚೆಗೆ ‘ಲವ್ ಮಾಕ್‌ಟೇಲ್ 3’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈಗ ಇದೇ ಜೂನ್ 21ರಂದು ಭಾನುವಾರ ಸಂಜೆ 4:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು ಇದೀಗ ಮೊದಲ ಬಾರಿಗೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಸಿನಿಮಾನ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ವೀಕ್ಷಿಸಬಹುದು.

‘ಲವ್ ಮಾಕ್ಟೇಲ್’ ಸರಣಿಯ ಮೂರನೇ ಭಾಗವಾಗಿರುವ ಈ ಚಿತ್ರವು ತಂದೆ-ಮಗಳ ಬಾಂಧವ್ಯ, ಕುಟುಂಬದ ಜವಾಬ್ದಾರಿ ಹಾಗೂ ಕೌಟುಂಬಿಕ ಮೌಲ್ಯಗಳ ಹಿನ್ನೆಲೆಯನ್ನು ಒಳಗೊಂಡಿದೆ. ರಕ್ತಸಂಬಂಧ ಮತ್ತು ಭಾವನಾತ್ಮಕ ನಿರ್ಧಾರಗಳು ಜೀವನದ ಮೇಲೆ ಬೀರುವ ಪ್ರಭಾವವನ್ನು ಕಥೆಯಲ್ಲಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ಸಂವೃತಾ ಸುನಿಲ್, ರೇಚಲ್ ಡೇವಿಡ್, ದಿಲೀಪ್ ರಾಜ್ ಹಾಗೂ ಶ್ವೇತಾ ಆರ್. ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಲೀಪ್ ರಾಜ್ ಈಗ ನಮ್ಮೊಂದಿಗೆ ಇಲ್ಲ. ಹೀಗಾಗಿ, ಈ ಸಿನಿಮಾ ಅವರ ಅಭಿಮಾನಿಗಳ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ವಕೀಲನ ಪಾತ್ರದಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ.

View this post on Instagram

A post shared by Zee Kannada (@zeekannada)

ಚಿತ್ರದ ಕಥಾಸಾರಾಂಶ

ಚಿತ್ರದ ನಾಯಕ ಆದಿತ್ಯ (ಡಾರ್ಲಿಂಗ್ ಕೃಷ್ಣ), ತಾನು ದತ್ತು ಪಡೆದ ಮಗಳು ನಿಧಿಯನ್ನು ಸಾಕುತ್ತಿರುತ್ತಾನೆ. ಇವರ ಜೀವನ ಸುಲಲಿತವಾಗಿ ಸಾಗುತ್ತಿರುವಾಗಲೇ, ಡಾ. ಶಾಂತಾ ಎಂಬುವವರು ಬಂದು ನಿಧಿ ತನ್ನ ಸ್ವಂತ ಮೊಮ್ಮಗಳು ಎಂದು ಹಕ್ಕು ಮಂಡಿಸುತ್ತಾರೆ. ಅಲ್ಲಿಂದ ಕಥೆಗೆ ಹೊಸ ತಿರುವು ಸಿಗುತ್ತದೆ.

ಇದನ್ನೂ ಓದಿ: ‘ಲವ್ ಮಾಕ್ಟೆಲ್ 3’ ಸೆಟ್​ನಲ್ಲಿ ದಿಲೀಪ್ ರಾಜ್: ಸುಂದರ ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಗಳಿಗಾಗಿ ನಡೆಯುವ ಕಾನೂನು ಹೋರಾಟ ಮತ್ತು ಭಾವನಾತ್ಮಕ ಸಂಘರ್ಷಗಳ ನಡುವೆ ಆದಿ ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ಎದುರಿಸುವ ಸವಾಲುಗಳ ಸುತ್ತ ಚಿತ್ರದ ಮುಂದಿನ ಕಥೆ ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಇಂದೂ ಬೆಂಗಳೂರಿನಲ್ಲಿ ವರುಣನ ಆರ್ಭಟ; ಕೆರೆಯಂತಾದ ರಸ್ತೆಗಳು!
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ
ಸರ್ವೀಸ್ ರೈಫಲ್‌ನಿಂದ ನಾಲ್ವರು ಸಹೋದ್ಯೋಗಿಗಳನ್ನೇ ಕೊಂದ ಯೋಧ