ಬಿಗ್ಬಾಸ್ ಸ್ಪರ್ಧಿ ಜೊತೆ ನಟನ ಸಂಬಂಧ, ವಿಡಿಯೋ ಬಿಡುಗಡೆ ಮಾಡಿದ ನಟನ ಪತ್ನಿ
Bigg Boss Contestant Ritu: ಬಿಗ್ಬಾಸ್ ಸ್ಪರ್ಧಿಯೊಟ್ಟಿಗೆ ನನ್ನ ಪತಿ ಸಂಬಂಧ ಹೊಂದಿದ್ದಾರೆ ಎಂದು ನಟನ ಪತ್ನಿ ಆರೋಪ ಮಾಡಿದ್ದು, ತನ್ನ ಪತಿ ಹಾಗೂ ಬಿಗ್ಬಾಸ್ ಸ್ಪರ್ಧಿಯ ವಿಡಿಯೋಗಳನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಮಾಡಿದ್ದಾರೆ. ಅಷ್ಟಕ್ಕೂ ಯಾರು ಆ ನಟ? ಯಾವ ಬಿಗ್ಬಾಸ್ ಸ್ಪರ್ಧಿಯೊಂದಿಗೆ ಸಂಬಂಧ ಹೊಂದಿದ್ದಾರೆ? ಇಲ್ಲಿದೆ ಮಾಹಿತಿ ಓದಿ...

ತೆಲುಗು ಬಿಗ್ಬಾಸ್ ಸೀಸನ್ 9 (Telugu Bigg Boss) ಚಾಲ್ತಿಯಲ್ಲಿದೆ. ಕನ್ನಡದ ನಟಿಯರಾದ ಸಂಜನಾ ಗಲ್ರಾನಿ, ತನುಜಾ ಗೌಡ ಅವರುಗಳು ಸಹ ಈ ಬಾರಿ ತೆಲುಗು ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಖ್ಯಾತ ನಟಿ ಫ್ಲೋರಾ ಸೈನಿ, ನಟ ಸುಮನ್ ಶೆಟ್ಟಿ ಇನ್ನೂ ಹಲವರು ಬಿಗ್ಬಾಸ್ ಮನೆಯಲ್ಲಿದ್ದಾರೆ. ಹಲವು ವರ್ಷಗಳಿಂದ ಟಿವಿ ಧಾರಾವಾಹಿಗಳಲ್ಲಿ ನಟಿಸುತ್ತಿರುವ ರಿತು ಚೌಧರಿ ಸಹ ಬಿಗ್ಬಾಸ್ ಮನೆಗೆ ಹೋಗಿದ್ದಾರೆ. ಆದರೆ ಹೊರಗೆ ಅವರದ್ದೇ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಟನೊಟ್ಟಿಗೆ ರಿತು ಚೌಧರಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ತೆಲುಗಿನ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಧರ್ಮ ಮಹೇಶ್ ಅವರೊಟ್ಟಿಗೆ ರಿತು ಚೌಧರಿ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಆರೋಪ ಮಾಡಿರುವುದು ಸ್ವತಃ ನಟ ಧರ್ಮ ಮಹೇಶ್ ಅವರ ಪತ್ನಿಯೇ. ಕೆಲ ದಿನಗಳ ಹಿಂದಷ್ಟೆ ಧರ್ಮ ಮಹೇಶ್ ಪತ್ನಿ ಗೌತಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು, ಧರ್ಮ ಮಹೇಶ್ ತಮಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಹಾಗೂ ಮತ್ತೊಬ್ಬ ಯುವತಿಯೊಟ್ಟಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ ಆ ಯುವತಿ ಯಾರು ಎಂಬುದನ್ನು ಹೇಳಿರಲಿಲ್ಲ.
ಆದರೆ ಇದೀಗ ಗೌತಮಿ ಅವರು ರಿತು ಚೌಧರಿ ಮೇಲೆ ಆರೋಪ ಮಾಡಿದ್ದು, ತನ್ನ ಪತಿ ಧರ್ಮ ಮಹೇಶ್ ಹಾಗೂ ನಟಿ ರಿತು ಚೌಧರಿ ನಡುವೆ ಸಂಬಂಧ ಇದೆ ಎಂದಿದ್ದಾರೆ ಮಾತ್ರವಲ್ಲದೆ. ಇಬ್ಬರೂ ಒಟ್ಟಿಗೆ ಓಡಾಡುತ್ತಿರುವ ಕೆಲವು ವಿಡಿಯೋಗಳನ್ನು ಸ್ವತಃ ಗೌತಮಿ ಬಿಡುಗಡೆ ಮಾಡಿದ್ದಾರೆ. ತಮ್ಮ ಫ್ಲ್ಯಾಟ್ನಲ್ಲಿ ಇಬ್ಬರೂ ಒಟ್ಟಿಗೆ ಇದ್ದು, ಇಬ್ಬರೂ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂದು ಸಹ ಗೌತಮಿ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಬಿಗ್ಬಾಸ್: ಹೀರೋಯಿನ್ಗೆ ಹೊಡೆದ ಕಮಿಡಿಯನ್, ಮನೆಯಲ್ಲಿ ‘ಬಳೆ’ ಸದ್ದು
ಗೌತಮಿ ಬಿಡುಗಡೆ ಮಾಡಿರುವ ವಿಡಿಯೋಗಳಲ್ಲಿ ರಿತು ಚೌಧರಿ ಮತ್ತು ಧರ್ಮ ಮಹೇಶ್ ಲಿಫ್ಟ್ನಲ್ಲಿ ಒಟ್ಟಿಗೆ ಹೋಗುತ್ತಿರುವ ವಿಡಿಯೋ ಇದೆ, ಒಟ್ಟಿಗೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದೆ. ಮತ್ತೊಂದು ವಿಡಿಯೋನಲ್ಲಿ ರಿತು ಚೌಧರಿ ಸಣ್ಣ ಡಬ್ಬಿ ಒಂದರಿಂದ ವಸ್ತುವೊಂದನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಿರುವ ದೃಶ್ಯವಿದೆ. ಇದನ್ನೇ ಗೌತಮಿ, ಡ್ರಗ್ಸ್ ಸೇವನೆ ಮಾಡುತ್ತಿರುವ ದೃಶ್ಯವೆಂದು ವಿಡಿಯೋ ಹಂಚಿಕೊಂಡಿದ್ದಾರೆ. ರಿತು ಚೌಧರಿ ಪ್ರಸ್ತುತ ಬಿಗ್ಬಾಸ್ ಮನೆಯಲ್ಲಿದ್ದಾರೆ. ಪತ್ನಿಯ ಆರೋಪಗಳ ಬಗ್ಗೆ ಧರ್ಮ ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಿತು ಚೌಧರಿ ಕೆಲ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಜೊತೆಗೆ ಟಿವಿ ನಿರೂಪಕಿ ಸಹ ಆಗಿದ್ದಾರೆ. ಧರ್ಮ ಮಹೇಶ್ ‘ಡ್ರಿಂಕರ್ ಸಾಯಿ’ ಸೇರಿದಂತೆ ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಧರ್ಮ ಮಹೇಶ್ ಪತ್ನಿ ಗೌತಮಿ, ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




