
ಇತ್ತೀಚೆಗೆ ರಿಯಾಲಿಟಿ ಶೋಗಳ ಸಂಖ್ಯೆ ಹೆಚ್ಚಾಗಿದೆ. ವೀಕ್ಷಕರನ್ನು ಸೆಳೆಯೋಕೆ ಈ ಶೋಗಳು ನಾನಾ ರೀತಿಯ ಕಸರತ್ತು ನಡೆಸುತ್ತಿವೆ. ಶೋನಲ್ಲಿ ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಿದರೆ ಜಡ್ಜ್ಗಳಿಂದ ಸ್ಪರ್ಧಿಗಳಿಗೆ ಚಪ್ಪಾಳೆ ಅಥವಾ ಹಗ್ ಸಿಗುತ್ತದೆ. ಆದರೆ, ಕನ್ನಡದ ಸಿನಿಮಾಗಳಲ್ಲಿ ನಟಿಸಿದ ಹೀರೋಯಿನ್ ಒಬ್ಬರು ಸ್ಪರ್ಧಿಗೆ ವೇದಿಕೆ ಮೇಲೆಯೇ ಕಿಸ್ ಮಾಡಿ ಕೆನ್ನೆ ಕಚ್ಚಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗಿದೆ.
ಶಮ್ನಾ ಕಾಸಿಂ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. 16-17 ವರ್ಷ ಅವರು ಚಿತ್ರರಂಗದಲ್ಲಿ ಶ್ರಮಿಸಿದ್ದಾರೆ. ಈಗ ಅವರು ಈಟಿವಿ ತೆಲುಗಿನಲ್ಲಿ ಪ್ರಸಾರವಾಗುವ ‘ಧೀ ಚಾಂಪಿಯನ್ಸ್’ ಶೋನಲ್ಲಿ ಜಡ್ಜ್ ಆಗಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡು ಅದ್ಭುತವಾಗಿ ಪರ್ಫಾರ್ಮೆನ್ಸ್ ನೀಡಿದ ಸ್ಪರ್ಧಿಗೆ ಶಮ್ನಾ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಜತೆಗೆ ಕೆನ್ನೆಯನ್ನು ಕಚ್ಚಿದ್ದಾರೆ. ಸದ್ಯ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಈ ವಿಡಿಯೋ ಹೈಪ್ ಪಡೆದುಕೊಂಡಿದೆ ಎಂಬುದು ನಿಜ. ಆದರೆ, ಅನೇಕರು ಇದನ್ನು ಟೀಕಿಸಿದ್ದಾರೆ. ಓರ್ವ ಜಡ್ಜ್ ಆಗಿ ಈ ರೀತಿ ನಡೆದುಕೊಳ್ಳಬಹುದೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದೆಲ್ಲ ಟಿಆರ್ಪಿ ಗಿಮಿಕ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ನಟಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಂದಹಾಗೆ, ಈ ಮೊದಲು ಕೂಡ ಅವರು ಸಾಕಷ್ಟು ಬಾರಿ ಸ್ಪರ್ಧಿಗಳಿಗೆ ಇದೇ ರೀತಿ ಕಿಸ್ ಮಾಡಿದ ಉದಾಹರಣೆ ಇದೆ. ಈ ಫೋಟೋಗಳನ್ನು ಕೂಡ ಈಗ ಹಂಚಿಕೊಳ್ಳಲಾಗುತ್ತಿದೆ.

ವೇದಿಕೆ ಮೇಲೆಯೇ ಸ್ಪರ್ಧಿಗೆ ಕಿಸ್ ಮಾಡಿ, ಕೆನ್ನೆ ಕಚ್ಚಿದ ಕನ್ನಡದ ‘ಜೋಶ್’ ಸಿನಿಮಾ ನಟಿ; ವಿಡಿಯೋ ವೈರಲ್
ಶಮ್ನಾ 2004ರಲ್ಲಿ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಸಾಕಷ್ಟು ಮಲಯಾಳಂ ಸಿನಿಮಾದಲ್ಲಿ ನಟಿಸಿದರು. ನಂತರ ತೆಲುಗು, ತಮಿಳು ಚಿತ್ರರಂಗದಿಂದ ಅವರಿಗೆ ಆಫರ್ಗಳು ಬರೋಕೆ ಆರಂಭವಾದವು. ‘ಜೋಶ್’ ಸಿನಿಮಾ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಕನ್ನಡದ ‘ರಾಧನ ಗಂಡ’ ಹೆಸರಿನ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಅವರ ಕೈಯಲ್ಲಿ ಕನ್ನಡದ ಒಂದು ಸಿನಿಮಾ ಸೇರಿ 6-7 ಪ್ರಾಜೆಕ್ಟ್ಗಳಿವೆ. ಕೊವಿಡ್ ಕಾರಣದಿಂದ ಚಿತ್ರದ ಕೆಲಸಗಳು ವಿಳಂಬವಾಗಿದೆ.
ಇದನ್ನೂ ಓದಿ: ದೇವಸ್ಥಾನದಲ್ಲೂ ಡಿವೋರ್ಸ್ ವಿಚಾರ; ಸಿಟ್ಟಾದ ಸಮಂತಾ ರಿಯಾಕ್ಷನ್ ನೋಡಿ ಚಪ್ಪಾಳೆ ಹೊಡೆದ ಅಭಿಮಾನಿಗಳು
ಆನ್ಲೈನ್ನಲ್ಲೇ ಎಂಗೇಜ್ಮೆಂಟ್ ಮಾಡಿಕೊಂಡ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ