AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ ಮಲ್ಲಿ ಮದುವೆ ದೊಡ್ಡ ತಿರುವು ಪಡೆದಿದೆ. ಜೆಡಿ ಮದುವೆ ಮುರಿಯಲು ಮಾಡಿದ ಪ್ಲಾನ್ ವಿಫಲವಾಗಿದ್ದು, ಗೌತಮ್ ಮತ್ತು ಭೂಮಿಕಾ ಪ್ರಯತ್ನದಿಂದ ಮಲ್ಲಿ ಮದುವೆಯಾಗಿದ್ದಾಳೆ. ಪ್ರೋಮೋದಲ್ಲಿ ಮಲ್ಲಿ ಕುತ್ತಿಗೆಯಲ್ಲಿ ತಾಳಿ ಕಾಣಿಸಿ ಮದುವೆ ಖಚಿತಪಡಿಸಿದೆ. ಜೆಡಿಗೆ ಮಲ್ಲಿ ಎಚ್ಚರಿಕೆ ನೀಡಿದ್ದು, ಇದು ಧಾರಾವಾಹಿಯಲ್ಲಿ ಹೊಸ ಸಂಘರ್ಷಕ್ಕೆ ನಾಂದಿ ಹಾಡಿದೆ.

ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ
ಅಮೃತಧಾರೆ Image Credit source: Zee Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 30, 2026 | 7:43 AM

Share

ಜೀ ಕನ್ನಡದ ‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಾ ಇವೆ. ಈಗ ಮಲ್ಲಿ ಮದುವೆ ಸಂಭ್ರಮ. ಈ ಮಲ್ಲಿ ಮದುವೆಯಲ್ಲಿ ಹಲವು ಡ್ರಾಮಾಗಳು ನಡೆದಿವೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿ ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದು ಜೆಡಿ. ತಾನೇ ಛೂ ಬಿಟ್ಟ ವ್ಯಕ್ತಿ ಜೊತೆ ಮದುವೆ ನಡೆಸೋದು ಜೆಡಿ ಪ್ಲ್ಯಾನ್ ಆಗಿತ್ತು. ಕೊನೆ ಕ್ಷಣದಲ್ಲಿ ಮದುವೆಯಿಂದ ಆ ವ್ಯಕ್ತಿಯನ್ನು ಓಡಿಸೋದು ಪ್ಲ್ಯಾನ್ ಆಗಿತ್ತು. ಆದರೆ, ಪ್ಲ್ಯಾನ್ ಉಲ್ಟಾ ಆಗಿದೆ, ಅಷ್ಟೇ ಅಲ್ಲ, ದೊಡ್ಡ ಎಚ್ಚರಿಕೆ ಕೂಡ ರವಾನೆ ಆಗಿದೆ ಎನ್ನಬಹುದು.

ಜೆಡಿಯು ಸುನಿಲ್ ಎಂಬಾತನನ್ನು ಮಲ್ಲಿ ಪ್ರೀತಿಸುವಂತೆ ಸೂಚನೆ ಕೊಟ್ಟು ಕಳುಹಿಸಿದ್ದನು. ಆ ಸೂಚನೆಯಂತೆ ಮಲ್ಲಿಯನ್ನು ಪ್ರೀತಿಸುವ ಕೆಲಸಕ್ಕೆ ಸುನೀಲ್ ಇಳಿಸಿದ್ದ. ಆದರೆ, ಮದುವೆ ಆಗುವ ಯಾವುದೇ ಪ್ಲ್ಯಾನ್ ಇದರಲ್ಲಿ ಇರಲಿಲ್ಲ. ಪ್ರೀತಿಸೋದು, ಕೊನೆಯ ಕ್ಷಣದಲ್ಲಿ ಆಕೆತನ್ನು ಬಿಟ್ಟು ಹೋಗೋದು ಪ್ಲ್ಯಾನ್ ಆಗಿತ್ತು. ಆದರೆ, ಹಾಗಾಗಿಲ್ಲ.

ಇದನ್ನೂ ಓದಿ: ‘ಅಮೃತಧಾರೆ’ ಧಾರಾವಾಹಿ: ಮಲ್ಲಿ ವಿವಾಹ ನಡೆಯೋದೆ ಅನುಮಾನ?

ಜೆಡಿ ಮಾಡಿದ ಪ್ಲ್ಯಾನ್ ಕೊನೆಯ ಕ್ಷಣದಲ್ಲಿ ಕೈ ಕೊಟ್ಟಿದೆ ಎಂದೇ ಹೇಳಬಹುದು. ಸುನೀಲ್ ಯಾರು ಎಂಬ ವಿಷಯ ಮೊದಲು ಗೊತ್ತಾಗಿದ್ದು ಗೌತಮ್ಗೆ. ಯಾವುದೇ ಕಾರಣಕ್ಕೂ ಈ ಮದುವೆ ನಡೆದೇ ನಡೆಯಬೇಕು ಎಂದು ಪಣ ತೊಟ್ಟನು. ಆದರೆ, ಈ ವಿಷಯ ನಂತರ ಗೊತ್ತಾಗಿದ್ದು ಭೂಮಿಕಾಗೆ. ಆಕೆ ಹೇಗಾದರೂ ಮಾಡಿ ಮದುವೆ ಮಾಡಿಸಲೇಬೇಕು ಎಂದು ಪಣ ತೊಟ್ಟಿದ್ದಾಳೆ.

View this post on Instagram

A post shared by Zee Kannada (@zeekannada)

ಕೊನೆಗೂ ಇವರ ಮದುವೆ ನಡೆದಂತೆ ಕಾಣಿಸುತ್ತದೆ. ಈಗ ರಿಲೀಸ್ ಆದ ಪ್ರೋಮೋದಲ್ಲಿ ಮಲ್ಲಿ ಕತ್ತಿನಲ್ಲಿ ತಾಳಿ ಕಾಣಿಸಿದೆ. ಹೀಗಾಗಿ ಮದುವೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಎಚ್ಚರಿಕೆ ನೀಡಿದ್ದಾಳೆ. ಈ ಎಚ್ಚರಿಕೆಯನ್ನು ಆತ ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲ ಮೂಡಿದೆ. ಜೆಡಿ ಇಷ್ಟು ದಿನ ಹಾಯಾಗಿದ್ದ. ಮುಂದಿನ ದಿನಗಳಲ್ಲಿ ಅದನ್ನು ಬದಲಿಸುವ ಎಲ್ಲಾ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More