‘ಜೊತೆ ಜೊತೆಯಲಿ’ ಧಾರಾವಾಹಿಗೆ ‘ಅಮೃತಧಾರೆ’ ಹೋಲಿಕೆ; ಪ್ರತಿಕ್ರಿಯೆ ನೀಡಿದ ರಾಜೇಶ್ ನಟರಂಗ

‘ಅಮೃತಧಾರೆ’ ಧಾರಾವಾಹಿ ಪ್ರೋಮೋ ಹಂಚಿಕೊಂಡಾಗ ಇದು ‘ಜೊತೆ ಜೊತೆಯಲಿ’ ರೀತೀಯ ಕಥೆ ಎಂದು ಪ್ರೇಕ್ಷಕರಿಗೆ ಅನಿಸಿತ್ತು. ಆದರೆ, ಈಗ ಆ ಭಿಪ್ರಾಯ ಬದಲಾಗಿದೆ.

‘ಜೊತೆ ಜೊತೆಯಲಿ’ ಧಾರಾವಾಹಿಗೆ ‘ಅಮೃತಧಾರೆ’ ಹೋಲಿಕೆ; ಪ್ರತಿಕ್ರಿಯೆ ನೀಡಿದ ರಾಜೇಶ್ ನಟರಂಗ
ಅಮೃತಧಾರೆ ತಂಡ-ಜೊತೆ ಜೊತೆಯಲಿ ತಂಡ
Follow us
ರಾಜೇಶ್ ದುಗ್ಗುಮನೆ
|

Updated on: Jun 03, 2023 | 6:30 AM

ಜೀ ಕನ್ನಡ ವಾಹಿನಿಯಲ್ಲಿ ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ಪ್ರಸಾರ ಕಂಡಿತ್ತು. ಮೇಘಾ ಶೆಟ್ಟಿ, ಅನಿರುದ್ಧ್​ ಜತ್ಕರ್ ಆರಂಭದಲ್ಲಿ ಈ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಅನಿರುದ್ಧ್ ಬದಲು ಹರೀಶ್ ರಾಜ್ ಈ ಪಾತ್ರ ಮಾಡಿದರು. ಈ ಧಾರಾವಾಹಿಯಲ್ಲಿ ವಯಸ್ಸಿನ ಅಂತರದ ಕಥೆ ಇತ್ತು. ಈ ಧಾರಾವಾಹಿ ಪೂರ್ಣಗೊಳ್ಳುತ್ತಿದ್ದಂತೆ ‘ಅಮೃತಧಾರೆ’ ಧಾರಾವಾಹಿ (Amruthadhare)  ಪ್ರಸಾರ ಕಾಣುತ್ತಿದೆ. ಇದನ್ನು ಅನೇಕರು ‘ಜೊತೆ ಜೊತೆಯಲಿ’ ಧಾರಾವಾಹಿಗೆ ಹೋಲಿಕೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ರಾಜೇಶ್ ನಟರಂಗ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹೀರೋ ಹಾಗೂ ಹೀರೋಯಿನ್ ಮಧ್ಯೆ ವಯಸ್ಸಿನ ಅಂತರ ಇತ್ತು. ಈ ಕಥೆ ಜನರಿಗೆ ಇಷ್ಟ ಆಗಿತ್ತು. ‘ಅಮೃತಧಾರೆ’ ಧಾರಾವಾಹಿ ಪ್ರೋಮೋ ಹಂಚಿಕೊಂಡಾಗ ಇದು ‘ಜೊತೆ ಜೊತೆಯಲಿ’ ರೀತಿಯ ಕಥೆ ಎಂದು ಪ್ರೇಕ್ಷಕರಿಗೆ ಅನಿಸಿತ್ತು. ಆದರೆ, ಈಗ ಆ ಅಭಿಪ್ರಾಯ ಬದಲಾಗಿದೆ. ಇದು ಸಂಪೂರ್ಣವಾಗಿ ಮದುವೆ ಹಾಗೂ ಸಂಬಂಧಗಳ ಬಗ್ಗೆ ಇರುವ ಧಾರಾವಾಹಿ ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ಈ ಬಗ್ಗೆ ರಾಜೇಶ್ ನಟರಂಗ ಮಾತನಾಡಿದ್ದಾರೆ. ‘ಜೊತೆ ಜೊತೆಯಲಿ ಧಾರಾವಾಹಿಗೆ ನಮ್ಮ ಧಾರಾವಾಹಿ ಹೋಲಿಕೆ ಮಾಡಿದ್ದು ನನ್ನ ಗಮನಕ್ಕೂ ಬಂದಿದೆ. ಪ್ರಮೋಷನಲ್ ವಿಡಿಯೋ ಹಾಕಿದಾಗ ಈ ರೀತಿಯ ಮೆಸೇಜ್​ಗಳು, ಕಮೆಂಟ್​ಗಳು ನನಗೂ ಬಂದಿತ್ತು. ಅದು ಮಧ್ಯ ವಯಸ್ಕ ಪುರುಷ ಹಾಗೂ ಸಣ್ಣ ವಯಸ್ಸಿನ ಯುವತಿಯ ನಡುವಿನ ಕಥೆ. ಆದರೆ, ನಮ್ಮ ಧಾರಾವಾಹಿಯ ಆಯಾಮ ಬೇರೆ’ ಎಂದಿದ್ದಾರೆ ರಾಜೇಶ್ ನಟರಂಗ.

ಇದನ್ನೂ ಓದಿ: ‘ನಿಮ್ಮ ಗುಣಗಳನ್ನೂ ಒಪ್ಪುವ ಹೃದಯಗಳಿರುತ್ತವೆ’; ‘ಅಮೃತಧಾರೆ’ ಕಥಾವಸ್ತು ಬಗ್ಗೆ ರಾಜೇಶ್ ನಟರಂಗ ಮಾತು

‘ಮದುವೆ, ಸಂಬಂಧ ಅನ್ನೋದು ನಮ್ಮ ಕಥೆಯ ಜೀವಾಳ. ಸೋಶಿಯಲ್ ಮೀಡಿಯಾದಲ್ಲಿ ನಾವು ಅದು ಹಾಗಲ್ಲ ಹೀಗೆ ಎಂಬುದನ್ನು ಹೇಳಿ ಪ್ರಯೋಜನ ಇಲ್ಲ. ಅವರ ದೃಷ್ಟಿಕೋನವೇ ಬದಲಾಗುತ್ತದೆ. ಈಗ ಅದೇ ರೀತಿಯಲ್ಲಿ ಬದಲಾಗಿದೆ’ ಎನ್ನುತ್ತಾರೆ ರಾಜೇಶ್ ನಟರಂಗ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ