ಐಶಾರಾಮಿ ಕಾರು ಖರೀದಿಸಿದ ಆ್ಯಂಕರ್ ಅನುಶ್ರೀ, ಬೆಲೆ ಎಷ್ಟು ಗೊತ್ತೆ?
Anchor Anushree: ನಟಿ ಆಂಖರ್ ಅನುಶ್ರೀ ಕನ್ನಡ ಮನೊರಂಜನಾ ಲೋಕದ ಬಲು ಜನಪ್ರಿಯ, ಬೇಡಿಕೆಯ ಮತ್ತು ದುಬಾರಿ ನಿರೂಪಕಿ. ಯಾವುದೇ ಸಿನಿಮಾ ನಟಿಯರಿಗಿಂತಲೂ ಹೆಚ್ಚಿನ ಹಣ ಸಂಪಾದನೆ ಮಾಡುತ್ತಾರೆ ಅನುಶ್ರೀ. ಇದೀಗ ಅನುಶ್ರೀ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಎಷ್ಟು ಲಕ್ಷ? ಕಾರಿನ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ...

ಅನುಶ್ರೀ, ಕನ್ನಡ ಮನೊರಂಜನಾ ಲೋಕದ ಬಲು ಜನಪ್ರಿಯ ಕಾರ್ಯಕ್ರಮ ನಿರೂಪಕಿ. ಬಹಳ ಬ್ಯುಸಿ ನಿರೂಪಕಿ ಆಗಿರುವ ಜೊತೆಗೆ ಬಲು ಬೇಡಿಕೆಯ ಹಾಗೂ ಬಲು ದುಬಾರಿ ಕಾರ್ಯಕ್ರಮ ನಿರೂಪಕಿ ಸಹ ಆಗಿದ್ದಾರೆ ಅನುಶ್ರೀ. ಹಲವು ಸಿನಿಮಾ ನಟಿಯರಿಗಿಂತಲೂ ಹೆಚ್ಚಿನ ಗಳಿಕೆಯನ್ನು ಆಂಖರ್ ಅನುಶ್ರೀ ಮಾಡುತ್ತಾರೆ. ನಿರೂಪಣೆಯ ಜೊತೆಗೆ ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದಾರೆ ಅನುಶ್ರೀ. ಪ್ರತಿ ಎಪಿಸೋಡಿಗೆ ಲಕ್ಷಾಂತರ ಸಂಭಾವನೆ ಪಡೆವ ಅನುಶ್ರೀ, ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.
ಅನುಶ್ರೀ ಅವರು ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ಆರಂಭಿಕ ಬೆಲೆಯೇ 25 ಲಕ್ಷ ರೂಪಾಯಿಗಳು. ಕಾರಿನ ಟಾಪ್ ಎಂಡ್ ಮಾಡೆಲ್ಲಿನ ಬೆಲೆ 40 ಲಕ್ಷ ರೂಪಾಯಿಗಳು. ಅನುಶ್ರೀ ಯಾವ ಮಾಡೆಲ್ ಅನ್ನು ಖರೀದಿ ಮಾಡಿದ್ದಾರೆ ಎಂಬುದು ಖಾತ್ರಿ ಇಲ್ಲ. ಆದರೆ ಈ ಕಾರಿನ ಮಿಡಲ್ ವೇರಿಯೆಂಟ್ ಹೆಚ್ಚು ಪ್ರಚಲಿತದಲ್ಲಿದೆ. ಹಾಗಾಗಿ ಅನುಶ್ರೀ ಸಹ ಸುಮಾರು 30 ಲಕ್ಷಕ್ಕೂ ಹೆಚ್ಚಿನ ಬೆಲೆ ನೀಡಿ ಮಿಡಲ್ ವೇರಿಯೆಂಟ್ ಅನ್ನೇ ಖರೀದಿ ಮಾಡಿರುವ ಸಾಧ್ಯತೆ ಇದೆ.
ಅನುಶ್ರೀ ಈಗ ಖರೀದಿ ಮಾಡಿರುವ ಈ ಕಾರಿನಲ್ಲಿ ಹಲವು ವಿಶೇಷತೆಗಳು ಇವೆ. ಏಳು ಎಂಟು ಜನ ಆರಾಮವಾಗಿ ಕೂತು ಪ್ರಯಾಣ ಮಾಡಬಹುದಾದ ಈ ಕಾರು ಕಂಪರ್ಟ್ ಜೊತೆಗೆ ಸಖತ್ ಪವರ್ ಅನ್ನು ಸಹ ಹೊಂದಿದೆ. ಕೇವಲ 10 ಸೆಕೆಂಡ್ನಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ ಈ ಕಾರು. ಇದೊಂದು ಹೈಬ್ರಿಡ್ ಕಾರಾಗಿದ್ದು ಪೆಟ್ರೊಲ್ ಜೊತೆಗೆ ಬ್ಯಾಟರಿ ಶಕ್ತಿಯನ್ನೂ ಸಹ ಬಳಕೆ ಮಾಡಿಕೊಳ್ಳುವ ಕಾರಣ ಇದರ ಮೈಲೆಜ್ ಬಹಳ ಹೆಚ್ಚಾಗಿದೆ. ಈ ಕಾರಿನ ಮೈಲೆಜ್ ಸುಮಾರು 25 ಕಿ.ಮೀ ಪ್ರತಿ ಲೀಟರ್ಗೆ ಸಿಗುತ್ತದೆ.
ಇದನ್ನೂ ಓದಿ:ಹೊಸ ಕಾರು ಖರೀದಿಸಿದ ಮ್ಯಾಕ್ಸ್ ಮಂಜು? ಇಲ್ಲಿದೆ ವಿವರ..
ಮುಂದಿನ ಸೀಟುಗಳು ವೆಂಟಿಲೇಟೆಡ್ ತಂತ್ರಜ್ಞಾನ ಹೊಂದಿದೆ. ಸನ್ರೂಫ್ ಅನ್ನು ಸಹ ಈ ಕಾರು ಹೊಂದಿದೆ. ಆಟೊಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆ, ಅತ್ಯಾಧುನಿಕ ಏಡಾಸ್ ತಂತ್ರಜ್ಞಾನ, ಆಟೊಮ್ಯಾಟಿಕ್ ಬ್ಯಾಕ್ ಡೋರ್, ಜೆಬಿಎಲ್ನ ಅದ್ಭುತ ಸೌಂಡ್ ಸಿಸ್ಟಮ್, ಹಲವಾರು ಏರ್ ಬ್ಯಾಗ್ಗಳು, ಅತ್ಯುತ್ತಮ ಎನ್ಫೋಟೇನ್ಮೆಂಟ್ ಸಿಸ್ಟಂ ಇನ್ನೂ ಹಲವು ಅತ್ಯಾಧುನಿಕ ಆಧುನಿಕ ವ್ಯವಸ್ಥೆ ಇದರಲ್ಲಿದೆ.
ಹೊಸ ಕಾರು ಖರೀದಿ ಮಾಡಿರುವ ಅನುಶ್ರೀ, ಹೊಸ ಕಾರಿಗೆ ಕೆಲವು ಹೆಚ್ಚುವರಿ ಆಕ್ಸೆಸರಿ, ಟಿಂಟ್, ಪಿಪಿಎಫ್ ಕೋಟಿಂಗ್ ಇನ್ನಿತರೆಗಳನ್ನು ಹಾಕಿಸಿದ್ದಾರೆ. ಅನುಶ್ರೀ ಅವರ ಹೊಸ ಕಾರಿಗೆ ಹೊಸ ಆಕ್ಸೆಸ್ಸರಿಗಳನ್ನು ಹಾಕಿದ ಎಕ್ಸ್ಪರ್ಟ್ ಕಾರ್ ಕೇರ್ನವರು ಅನುಶ್ರೀ ಅವರ ಹೊಸ ಕಾರಿನ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Sun, 15 June 25




