‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಶೋ ಈಗ 10 ವಾರಗಳನ್ನು ಪೂರೈಸಿದೆ. ಪ್ರತಿ ಸಂಚಿಕೆಯಲ್ಲೂ ಡ್ರಾಮಾ ಇದ್ದೇ ಇರುತ್ತದೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳ ನಡುವೆ ಹಣಾಹಣಿ ನಡೆಯುತ್ತಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಸಮೀಪಿಸಲಿದೆ. ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆಲ್ಲ ಪೈಪೋಟಿ ಚುರುಕಾಗುತ್ತಿದೆ. ಇಂಥ ಸಂದರ್ಭದಲ್ಲಿ ಸಾಧ್ಯವಾದಷ್ಟು ಹುಷಾರಾಗಿ ಇರಬೇಕು. ಆರ್ಯವರ್ಧನ್ ಗುರೂಜಿ (Aryavardhan Guruji) ಅವರಿಗೆ ಈ ವಾರ ಕಳಪೆ ಪಟ್ಟ ಸಿಕ್ಕಿದೆ. ಆ ಕಾರಣದಿಂದ ಅವರು ಜೈಲು ಸೇರಿದ್ದಾರೆ. ಜೈಲಿನಲ್ಲಿ ಇದ್ದುಕೊಂಡೇ ಅವರು ಬಿಗ್ ಬಾಸ್ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಒಂದು ರೀತಿಯಲ್ಲಿ ಆವಾಜ್ ಹಾಕಿದ್ದಾರೆ ಎಂದೇ ಹೇಳಬಹುದು. ಈ ವಿಚಾರವಾಗಿ ಕಿಚ್ಚ ಸುದೀಪ್ (Kichcha Sudeep) ಅವರು ವೀಕೆಂಡ್ ಎಪಿಸೋಡ್ನಲ್ಲಿ ಕ್ಲಾಸ್ ತೆಗೆದುಕೊಂಡರೂ ಅಚ್ಚರಿ ಇಲ್ಲ.
ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ನಿಯಮಗಳಿವೆ. ಅದನ್ನು ಎಲ್ಲರೂ ಪಾಲಿಸಲೇಬೇಕು. ಹಗಲು ಹೊತ್ತಿನಲ್ಲಿ ಯಾರೂ ಕೂಡ ನಿದ್ರೆ ಮಾಡುವಂತಿಲ್ಲ. ಒಂದುವೇಳೆ ತೂಕಡಿಸಿದರೆ, ನಿದ್ರೆ ಮಾಡಿದರೆ ‘ಎದ್ದೇಳು ಮಂಜುನಾಥ..’ ಹಾಡನ್ನು ಜೋರಾಗಿ ಹಾಕಲಾಗುತ್ತದೆ. ನಿದ್ರೆ ಮಾಡಿದವರ ಹೆಸರು ಕೇಳಿ ಎಚ್ಚರಿಕೆ ನೀಡಲಾಗುತ್ತದೆ. ಇತ್ತೀಚೆಗಿನ ಸಂಚಿಕೆಯಲ್ಲಿ ಆರ್ಯವರ್ಧನ್ ಗುರೂಜಿ ಅವರು ಜೈಲಿನ ಒಳಗೆ ನಿದ್ರೆ ಮಾಡಿರುವುದು ಗೊತ್ತಾಗಿದೆ. ಆದರೆ ಎಚ್ಚರಿಕೆ ನೀಡಲು ಬಂದು ಬಿಗ್ ಬಾಸ್ಗೆ ಅವರು ಆವಾಜ್ ಹಾಕಿದ್ದಾರೆ.
ಇದನ್ನೂ ಓದಿ: BBK9: ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಡಬಲ್ ಗೇಮ್; ಸ್ಪರ್ಧಿಗಳ ನೇರ ಆರೋಪ
‘ನಾನು ಬೇಜಾರಾಗಿ ಮಗಲಿದ್ದೇನೆ, ಆದರೆ ನಿದ್ರೆ ಮಾಡಿಲ್ಲ. ನನಗೆ ಒಂದು ಲೋಟ ಕಾಫಿ ನೀಡಿಲ್ಲ ಅಂತ ಬೇಜಾರಾಗಿದೆ. ಒಬ್ಬರ ಮನಸ್ಸಲ್ಲೂ ನನ್ನ ಬಗ್ಗೆ ಕಾಳಜಿ ಇಲ್ಲ. ಆ ದುಃಖವನ್ನು ಹಂಚಿಕೊಳ್ಳೋಕೆ ಆಗುತ್ತಿಲ್ಲ. ಆದಕ್ಕಾಗಿ ಮಲಗಿಕೊಂಡೆ. ನಾನು ನೋವಿನಲ್ಲಿ ಇರುವುದು ನಿಮಗೆ ಕಾಣಿಸದೇ ಇರಬಹುದು. ನನ್ನಾಣೆಗೂ ಮಲಲಿಲ್ಲ’ ಎಂದು ಆರ್ಯವರ್ಧನ್ ಅವರು ಕೋಪದಲ್ಲಿ ಎದೆ ಬಡಿದುಕೊಂಡಿದ್ದಾರೆ.
ಇದನ್ನೂ ಓದಿ: BBK9: ಆರ್ಯವರ್ಧನ್ ಗುರೂಜಿ ಆಡಿದ ಮಾತುಗಳಿಗೆ ಈ ಪರಿ ರಿಯಾಕ್ಷನ್ ಕೊಟ್ರು ಕಿಚ್ಚ ಸುದೀಪ್
ಆರ್ಯವರ್ದನ್ ಮಲಗಿಲ್ಲ , ಅವರಿಗೆ ಯಾರೂ ಕಾಫಿ ಕೇಳಿಲ್ಲ!#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಇಂದು ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ@KicchaSudeep pic.twitter.com/IvS3rlyVyX
— Colors Kannada (@ColorsKannada) December 5, 2022
ಹೀಗೆ ಬಿಗ್ ಬಾಸ್ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿದರೆ ಬಿಗ್ ಬಾಸ್ಗೆ ಗೌರವ ಇಲ್ಲದಂತೆ ಆಗುತ್ತದೆ. ಇದನ್ನು ಆಯೋಜಕರು ಗಂಭೀರವಾಗಿ ಪರಿಗಣಿಸಬಹುದು. ಕಳೆದ ಸೀಸನ್ನಲ್ಲಿ ಈ ರೀತಿ ಮಾಡಿದ್ದಕ್ಕೆ ಶುಭಾ ಪೂಂಜಾ ಅವರಿಗೆ ವಾರ್ನಿಂಗ್ ನೀಡಲಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:35 pm, Tue, 6 December 22