ನೂರಾರು ದಿನಗಳ ಕಾಲ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಈಗ ಪೂರ್ಣಗೊಳ್ಳುತ್ತಿದೆ. ಇಂದು (ಜನವರಿ 28) ಝಗಮಗಿಸುವ ವೇದಿಕೆಯಲ್ಲಿ ಫಿನಾಲೆ (BBK 10 Finale) ನಡೆಯಲಿದೆ. ಸದ್ಯಕ್ಕೆ ಈ ಕಾರ್ಯಕ್ರಮದಲ್ಲಿ ಟಾಪ್ 5 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಆ ಐವರಲ್ಲಿ ಯಾರು ವಿನ್ ಆಗುತ್ತಾರೆ ಎಂಬುದು ಇಂದು ರಾತ್ರಿ ಗೊತ್ತಾಗಲಿದೆ. ಕಿಚ್ಚ ಸುದೀಪ್ ಅವರು ವಿನ್ನರ್ (Bigg Boss Winner) ಹೆಸರು ಘೋಷಿಸಲಿದ್ದಾರೆ. ವಿಶೇಷ ಏನೆಂದರೆ, ಇದೇ ಸಮಯಕ್ಕೆ ಇನ್ನೊಬ್ಬರಿಗೂ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಬಹುತೇಕ ಒಂದೇ ಸಮಯಕ್ಕೆ ಇಬ್ಬರೂ ಬಿಗ್ ಬಾಸ್ ಟ್ರೋಫಿ ಎತ್ತಲಿದ್ದಾರೆ. ಒಬ್ಬರು ಕನ್ನಡ ಬಿಗ್ ಬಾಸ್ನಲ್ಲಿ, ಮತ್ತೊಬ್ಬರು ಹಿಂದಿ ಬಿಗ್ ಬಾಸ್ನಲ್ಲಿ!
ಹೌದು, ಕನ್ನಡ ಬಿಗ್ ಬಾಸ್ ಕಾರ್ಯಕ್ರಮದ 10ನೇ ಸೀಸನ್ ಹಾಗೂ ಹಿಂದಿ ಬಿಗ್ ಬಾಸ್ನ 17ನೇ ಸೀಸನ್ ಏಕಕಾಲಕ್ಕೆ ಮುಕ್ತಾಯ ಆಗುತ್ತಿದೆ. ಇಂದು (ಜನವರಿ 28) ಈ ಎರಡೂ ಶೋಗಳಿಗೆ ಫಿನಾಲೆ ನಡೆಯುತ್ತಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ನಡೆಸಿಕೊಡುತ್ತಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಸೀಸನ್ನ ವಿನ್ನರ್ ಯಾರು ಎಂಬುದನ್ನು ತಿಳಿಯಲು ಭಾರಿ ಕುತೂಹಲ ನಿರ್ಮಾಣ ಆಗಿದೆ.
ಇದನ್ನೂ ಓದಿ: Tukali Santhosh: ಈ 5 ಕಾರಣದಿಂದಲೇ ತುಕಾಲಿ ಸಂತೋಷ್ಗೆ ಮಿಸ್ ಆಯ್ತು ಬಿಗ್ ಬಾಸ್ ಟ್ರೋಫಿ
ಕನ್ನಡದಲ್ಲಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಫಿನಾಲೆಯ ಟಾಪ್ 5 ಸ್ಪರ್ಧಿಗಳಾಗಿದ್ದಾರೆ. ಸಂಗೀತಾ, ವಿನಯ್ ಹಾಗೂ ಕಾರ್ತಿಕ್ ಅವರು ಮನರಂಜನೆಯ ಕ್ಷೇತ್ರದಿಂದ ಬಂದವರು. ಆದರೆ ವರ್ತೂರು ಸಂತೋಷ್ ಮತ್ತು ಡ್ರೋನ್ ಪ್ರತಾಪ್ ಅವರಿಗೆ ಬಣ್ಣದ ಲೋಕದ ಹಿನ್ನೆಲೆ ಇಲ್ಲ. ಈ ಐವರಲ್ಲಿ ಒಬ್ಬರಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ. ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಿರುತೆರೆ ಪ್ರೇಕ್ಷಕರು ಕಾದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿ ಮತ್ತು ‘ಕಲರ್ಸ್ ಕನ್ನಡ’ದಲ್ಲಿ ಸಂಜೆ 7.30ಕ್ಕೆ ಫಿನಾಲೆ ಪ್ರಸಾರ ಆರಂಭ ಆಗಲಿದೆ.
ಇದನ್ನೂ ಓದಿ: ತುಕಾಲಿ ಸಂತೋಷ್ ಔಟ್ ಆದ ಬಳಿಕ ಟಾಪ್ 5 ಸ್ಪರ್ಧಿಗಳಿಗೆ ಶುರುವಾಯ್ತು ಢವಢವ
ಹಿಂದಿಯಲ್ಲಿ ಅಂಕಿತಾ ಲೋಖಂಡೆ, ಮುನಾವರ್ ಫಾರೂಕಿ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್, ಅರುಣ್ ಮಶೆಟ್ಟಿ ಅವರು ಟಾಪ್ 5 ಸ್ಥಾನವನ್ನು ತಲುಪಿದ್ದಾರೆ. ಇವರಲ್ಲಿ ಯಾರು ಬಿಗ್ ಬಾಸ್ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಸಮಯ ಹತ್ತಿರ ಆಗಿದೆ. ಕಳೆದ ವರ್ಷ ಅಕ್ಟೋಬರ್ 16ರಂದು ‘ಬಿಗ್ ಬಾಸ್ ಹಿಂದಿ ಸೀಸನ್ 17’ ಆರಂಭ ಆಗಿತ್ತು. ಈಗ ಫಿನಾಲೆ ಎದುರಾಗಿದೆ. ‘ಕಲರ್ಸ್’ ವಾಹಿನಿ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಪ್ರಸಾರ ಆಗುತ್ತಿದೆ. ಈ ಸೀಸನ್ನಲ್ಲಿ ಅಂಕಿತಾ ಲೋಖಂಡೆ ಅವರ ಪತಿ ವಿಕ್ಕಿ ಜೈನ್ ಕೂಡ ಭಾಗವಹಿಸಿ, ಸಾಕಷ್ಟು ಜನಪ್ರಿಯತೆ ಪಡೆದರು. ಇತ್ತೀಚೆಗೆ ಅವರ ಎಲಿಮಿನೇಷನ್ ನಡೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ