AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ದವಡೆಯಿಂದ ಜಸ್ಟ್​ ಮಿಸ್ ಆದ ಭುವಿ​; ಸುಪಾರಿ ಕಿಲ್ಲರ್​ಗೆ ತಿರುಮಂತ್ರ ಹಾಕ್ತಾನಾ ಹರ್ಷ?

ಹಸಿರುಪೇಟೆ ಸಮೀಪ ಇರುವ ಗುಡ್ಡಕ್ಕೆ ಹರ್ಷ, ಭುವಿ, ರತ್ನಮಾಲಾ, ವರುಧಿನಿ, ಬಿಂದು ತೆರಳಿದ್ದಾರೆ. ಭುವಿಯನ್ನು ವರುಧಿನಿ ಬೆಟ್ಟದ ತುದಿಗೆ ಕರೆತಂದಿದ್ದಾಳೆ. ಅಲ್ಲಿ ಆಕೆಯನ್ನು ಮುಗಿಸಬೇಕು ಎಂದು ಸೂಚನೆ ನೀಡಿದ್ದಾಳೆ ಸಾನಿಯಾ.

ಸಾವಿನ ದವಡೆಯಿಂದ ಜಸ್ಟ್​ ಮಿಸ್ ಆದ ಭುವಿ​; ಸುಪಾರಿ ಕಿಲ್ಲರ್​ಗೆ ತಿರುಮಂತ್ರ ಹಾಕ್ತಾನಾ ಹರ್ಷ?
ಸುಪಾರಿ ಕಿಲ್ಲರ್-ಭುವಿ
TV9 Web
| Edited By: |

Updated on: Apr 18, 2022 | 1:32 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವಿ ಹಾಗೂ ಹರ್ಷನ ನಿಶ್ಚಿತಾರ್ಥ ನೆರವೇರಿದೆ. ಈ ಮೂಲಕ ವೀಕ್ಷಕರು ಅಂದುಕೊಂಡ ಒಂದು ಕೋರಿಕೆ ನೆರವೇರಿದೆ. ಹರ್ಷ ಹಾಗೂ ಭುವಿ ನಡುವೆ ಹಲವು ತಿಂಗಳಿಂದ ತೊಯ್ದಾಟ ನಡೆದೇ ಇತ್ತು. ಈಗ ಇಬ್ಬರ ಎಂಗೇಜ್​ಮೆಂಟ್ (Harsha-Bhuvi Engagement) ನಡೆದಿರೋದು ಖುಷಿಯ ವಿಚಾರ. ಎಲ್ಲವೂ ಒಂದು ಹಂತಕ್ಕೆ ಬಂತು ಎನ್ನುವಾಗಲೇ ಭುವಿಗೆ ತೊಂದರೆ ಒಂದು ಎದುರಾಗಿದೆ. ಭುವಿಯನ್ನು ಹತ್ಯೆ ಮಾಡೋಕೆ ಸಾನಿಯಾ ಸುಪಾರಿ ನೀಡಿದ್ದಾಳೆ. ಆದರೆ, ಹತ್ಯೆ ಮಾಡಲು ಸುಪಾರಿ ತೆಗೆದುಕೊಂಡ ವ್ಯಕ್ತಿಯೇ ಖೆಡ್ಡಾಗೆ ಬೀಳುವ ಸೂಚನೆ ಸಿಕ್ಕಿದೆ.

ಹಸಿರುಪೇಟೆ ಸಮೀಪ ಇರುವ ಗುಡ್ಡಕ್ಕೆ ಹರ್ಷ, ಭುವಿ, ರತ್ನಮಾಲಾ, ವರುಧಿನಿ, ಬಿಂದು ತೆರಳಿದ್ದಾರೆ. ಭುವಿಯನ್ನು ವರುಧಿನಿ ಬೆಟ್ಟದ ತುದಿಗೆ ಕರೆತಂದಿದ್ದಾಳೆ. ಅಲ್ಲಿ ಆಕೆಯನ್ನು ಮುಗಿಸಬೇಕು ಎಂದು ಸೂಚನೆ ನೀಡಿದ್ದಾಳೆ ಸಾನಿಯಾ. ಅಂತೆಯೇ ಸುಪಾರಿ ಕಿಲ್ಲರ್ ಬೆಟ್ಟದ ತುದಿಗೆ ಹೋಗಿದ್ದಾನೆ. ಸುಪಾರಿ ಕಿಲ್ಲರ್​ಗೆ ಶಾಕ್ ಆಗುವ ವಿಚಾರ ಎಂದರೆ ವರುಧಿನಿ ಬದಲು ಅಲ್ಲಿದ್ದಿದ್ದು ಹರ್ಷ!

ಭುವಿ ಬೆಟ್ಟದ ತುದಿಯಲ್ಲಿ ನಿಂತಿದ್ದಳು. ಹರ್ಷ ಅಡಗಿಕೊಂಡು ಭುವಿಯನ್ನು ಕಾಲೆಳೆಯುವ ಪ್ರಯತ್ನ ಮಾಡುತ್ತಿದ್ದ. ಆ ಸಂದರ್ಭದಲ್ಲೇ ಭುವಿಯನ್ನು ಕಿಲ್ಲರ್ ತಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ, ಭುವಿ ತನಗೆ ಗೊತ್ತಿಲ್ಲದೆ ತಾನಿದ್ದ ಜಾಗದಿಂದ ಸರಿದುಕೊಂಡಿದ್ದಳು. ಈ ಮೂಲಕ ಸಾವಿನ ದವಡೆಯಿಂದ ಪಾರಾಗಿದ್ದಳು. ಆಗ ಕಿಲ್ಲರ್ ಇನ್ನೇನು ಬೆಟ್ಟದ ತುದಿಯಿಂದ ಬೀಳುವವನಿದ್ದ. ಆದರೆ, ಅದರಿಂದ ಪಾರಾದ.

ಈ ಬೆನ್ನಲ್ಲೇ ಸಾನಿಯಾಗೆ ಸುಪಾರಿ ಕಿಲ್ಲರ್ ಕರೆ ಮಾಡಿದ್ದಾನೆ. ‘ನೀನು ಮುಗಿಸೋದಾದರೆ ಇಬ್ಬರನ್ನೂ ಮುಗಿಸು. ನನ್ನದೇನು ಅಡ್ಡಿ ಇಲ್ಲ. ಸುಮ್ಮನೆ ಕರೆ ಮಾಡಿ ತಲೆತಿನ್ನಬೇಡ’ ಎಂದಿದ್ದಾಳೆ. ಈ ಕಾರಣಕ್ಕೆ ಸುಪಾರಿ ಕಿಲ್ಲರ್ ಬೇರೆ ಮಾರ್ಗ ಕಂಡುಕೊಂಡಿದ್ದಾನೆ.

ಗುಡ್ಡದ ತುದಿಯಲ್ಲಿ ಹರ್ಷ ಹಾಗೂ ಭುವಿ ಮಾತನಾಡುತ್ತಿರುವ ವೇಳೆ ಗುಡ್ಡದ ಮೇಲಿನಿಂದ ದೊಡ್ಡ ಕಲ್ಲೊಂದು ದೂಕಿದ್ದಾನೆ ಕಿಲ್ಲರ್. ಈ ಕಲ್ಲು ಹರ್ಷ ಹಾಗೂ ಭುವಿಯ ಬಳಿಯೇ ಬರುತ್ತಿದೆ. ಮುಂದೇನಾಗುತ್ತದೆ ಎನ್ನುವ ವಿಚಾರ ನಾಳೆಯ (ಮಾರ್ಚ್​ 19) ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಈ ಮೊದಲು ಹರ್ಷನನ್ನು ಕೊಲ್ಲಲು ಪ್ಲ್ಯಾನ್ ನಡೆದಿತ್ತು. ಆಗ ಹರ್ಷ ಗುಂಡು ಹಾರಿಸಿ ಕಿಲ್ಲರ್​ನಿಂದ ತಪ್ಪಿಸಿಕೊಂಡಿದ್ದ. ಈಗ ಮತ್ತೊಂದು ಕಿಲ್ಲರ್ ಬಂದಿದ್ದಾನೆ. ಆ ಕಿಲ್ಲರ್ ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಹತ್ಯೆ ಮಾಡಲು ಬಂದಿದ್ದಾನೆ ಎನ್ನುವ ವಿಚಾರ ತಿಳಿದರೆ ಅವನನ್ನು ಹತ್ಯೆ ಮಾಡಲೂ ಹರ್ಷ ಹಿಂದೆಮುಂದೆ ನೋಡುವುದಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ

ಹರ್ಷ-ಭುವಿ ಎಂಗೇಜ್​ಮೆಂಟ್​ನಲ್ಲಿ ಕಾಣಿಸಿಕೊಂಡ ಸುಪಾರಿ ಕಿಲ್ಲರ್; ಸಾನಿಯಾಗೆ ಶುರುವಾಯ್ತು ಟೆನ್ಷನ್

Follow Us
TV9 Web
TV9 Web

TV9 Kannada

Read More
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು