ನಟಿ ಐಶ್ವರ್ಯಾ ಸಿಂಧೋಗಿ ಅವರು ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆಗಿದ್ದಾರೆ. 13 ವಾರಗಳ ಕಾಲ ಟಫ್ ಸ್ಪರ್ಧೆ ನೀಡಿದ್ದ ಅವರ ಆಟ ಇಂದು (ಡಿ.29) ಅಂತ್ಯವಾಗಿದೆ. ತಂದೆ-ತಾಯಿ ಇಲ್ಲದ ಹುಡುಗಿ ಎಂಬ ಕಾರಣಕ್ಕೆ ಐಶ್ವರ್ಯಾ ಅವರು ಆಗಾಗ ಕುಗ್ಗುತ್ತಿದ್ದರು. ಅಂಥ ಎಲ್ಲ ಸಂದರ್ಭಗಳಲ್ಲಿ ಬಿಗ್ ಬಾಸ್ ಕಡೆಯಿಂದ ಐಶ್ವರ್ಯಾಗೆ ಪ್ರೀತಿಯ ಸಂದೇಶ ಬಂದಿತ್ತು. ಅವರು ಎಲಿಮಿನೇಟ್ ಆಗುವಾಗಲೂ ಅವರಿಗೆ ಎಮೋಷನಲ್ ಆದ ಮಾತುಗಳನ್ನು ಬಿಗ್ ಬಾಸ್ ಹೇಳಿದರು. ‘ಹೋಗಿ ಬಾ ಮಗಳೇ’ ಎನ್ನುವ ಮೂಲಕ ಐಶ್ವರ್ಯಾ ಅವರನ್ನು ಬಿಗ್ ಬಾಸ್ ಇನ್ನಷ್ಟು ಎಮೋಷನಲ್ ಆಗಿಸಿದರು.
ಈ ವಾರ ಡೇಂಜರ್ ಝೋನ್ಲ್ಲಿ ಐಶ್ವರ್ಯಾ ಮತ್ತು ಮೋಕ್ಷಿತಾ ಇದ್ದರು. ಅಂತಿಮವಾಗಿ ಐಶ್ವರ್ಯಾ ಎಮಿಲಿನೇಟ್ ಆದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಐಶ್ವರ್ಯಾಗೆ ಒಂದು ಪತ್ರ ಬಂತು. ಆ ಪತ್ರ ಓದುತ್ತಿದ್ದಂತೆಯೇ ಅವರು ಕಣ್ಣೀರು ಹಾಕಲು ಆರಂಭಿಸಿದರು. ‘ಪತ್ರದ ಮೂಲಕ ಸುಂದರವಾಗಿ ವಿದಾಯ ಹೇಳಿದ್ದಕ್ಕೆ ಧನ್ಯವಾದಗಳು. ಅಂದು ವಾಯ್ಸ್ ನೋಟ್ ಕಳಿಸಿದ್ರಿ. ನಾನು ಮುದುಕಿ ಆದರೂ ಇವರೆಲ್ಲ ನನ್ನ ಕುಟುಂಬದವರಾಗಿ ಇರುತ್ತಾರೆ. 13 ವಾರ ನಾನು ಘಟಾನುಘಟಿಗಳ ಜೊತೆಗೆ ಇದ್ದು ಫೈಟ್ ಮಾಡಿದ್ದೇನೆ ಎಂಬುದಕ್ಕೆ ನನಗೆ ಹೆಮ್ಮೆ ಇದೆ. ಲವ್ ಯೂ ಬಿಗ್ ಬಾಸ್. ಮೋಕ್ಷಿತಾ ಚೆನ್ನಾಗಿ ಆಡು. ನಿನ್ನನ್ನು ನಾನು ಫೈನಲ್ನಲ್ಲಿ ನೋಡಬೇಕು’ ಎಂದು ಹೇಳುವ ಮೂಲಕ ಐಶ್ವರ್ಯಾ ಅವರು ಎಲ್ಲರಿಗೂ ವಿದಾಯ ಹೇಳಿದರು.
ವೇದಿಕೆಗೆ ಬಂದು ಸುದೀಪ್ ಜೊತೆ ಐಶ್ವರ್ಯಾ ಮಾತನಾಡಿದರು. ‘ಆರಂಭದಲ್ಲಿ ಇದ್ದ ಎನರ್ಜಿ ಕಡಿಮೆ ಆಯಿತು. ಅದೇ ತಪ್ಪಾಯಿತು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದು ನನ್ನ ಮನೆಯೇ ಅನಿಸಿತು. ನನಗೆ ಒಂದು ಫ್ಯಾಮಿಲಿ ಸಿಕ್ಕಿದೆ. 3 ತಿಂಗಳು ನಾನು ಬಿಗ್ ಬಾಸ್ ಮನೆಯಲ್ಲಿ ಬದುಕಿದ್ದಕ್ಕೆ ನನಗೆ ಸಾರ್ಥಕ ಎನಿಸಿದೆ. ಬಿಗ್ ಬಾಸ್ ಮನೆ ನನಗೆ ದೇವಸ್ಥಾನ. ಅದರಲ್ಲಿ ಸುದೀಪ್ ಅವರು ದೇವರ ರೀತಿ. ನನ್ನನ್ನು ಇಷ್ಟಪಡುವ ಕರ್ನಾಟಕದ ಜನತೆಗೆ ಧನ್ಯವಾದ. ಯಾರೂ ಇಲ್ಲ ಎಂಬ ಫೀಲಿಂಗ್ ಬಂದಿಲ್ಲ. ಇನ್ಮುಂದೆ ಬರುವುದೂ ಇಲ್ಲ’ ಎಂದು ಐಶ್ವರ್ಯಾ ಅವರು ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕಡೆಯಿಂದ ಚೈತ್ರಾಗೆ ಸಿಕ್ತು ಎಂದೂ ಮರೆಯಲಾಗದ ಗಿಫ್ಟ್
‘ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕು. ಯಾವ ಪಾತ್ರವಾದರೂ ಪರವಾಗಿಲ್ಲ’ ಎಂದು ಐಶ್ವರ್ಯಾ ಅವರು ಸುದೀಪ್ ಎದುರು ತಮ್ಮ ಆಸೆಯನ್ನು ಹೇಳಿಕೊಂಡರು. ಮುಂದಿನ ದಿನಗಳಲ್ಲಿ ಅವರಿಗೆ ಅಂಥ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.