‘ಬಿಗ್ ಬಾಸ್’ನಲ್ಲಿ ಯಾವ ಸ್ಪರ್ಧಿ ಉಳಿಯಬೇಕು, ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ನಿರ್ಧರಿಸೋದು ವೀಕ್ಷಕರು. ವೋಟಿಂಗ್ ಆಧಾರದ ಮೇಲೆ ಪ್ರತಿ ವಾರದ ಎಲಿಮಿನೇಷನ್ ನಡೆಯುತ್ತದೆ. ಆದರೆ, ಅನೇಕರಿಗೆ ಈ ಪ್ರಕ್ರಿಯೆ ಮೇಲೆ ನಂಬಿಕೆ ಇಲ್ಲ. ಈ ಕಾರಣದಿಂದಲೇ ಬಿಗ್ ಬಾಸ್ (Bigg Boss) ಸ್ಕ್ರಿಪ್ಟೆಡ್, ಇದು ಫೇಕ್ ಶೋ ಎಂದೆಲ್ಲ ಆರೋಪ ಹೊರಿಸಿದ್ದಿದೆ. ‘ಬಿಗ್ ಬಾಸ್ ಹಿಂದಿ ಸೀಸನ್ 17’ ಎಲಿಮಿನೇಟ್ ಸ್ಪರ್ಧಿ ಅನುರಾಗ್ ಧೋಬಾಲ್ ಇದೇ ರೀತಿಯ ಆರೋಪ ಮಾಡಿದ್ದಾರೆ.
ಮೊದಲ ದಿನ ಅನುರಾಗ್ ಅವರು ಬಿಗ್ ಬಾಸ್ಗೆ ಬಂದರು. ಅವರು ಈಗ ಎಲಿಮಿನೇಟ್ ಆಗಿದ್ದಾರೆ. ಮಾಧ್ಯಮಗಳಿಗೆ ಸಂದರ್ಶನ ನಿಡುತ್ತಿರುವ ಅವರು ಹಲವು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ‘ನಾನು ಮನೆಯಲ್ಲಿ ಖಿನ್ನತೆಗೆ ಒಳಗಾಗಿದ್ದೆ. ನಿರಂತರವಾಗಿ ಅಳುತ್ತಿದೆ. ನಾನು ಮೊದಲ ದಿನದಿಂದಲೂ ಮನೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಏನು ಮಾಡಲೇ ಇಲ್ಲ ಎನ್ನುವ ಮಾತನ್ನು ಕೇಳಬೇಕಾಯಿತು’ ಎಂದು ಬೇಸರ ಹೊರಹಾಕಿದ್ದಾರೆ ಅನುರಾಗ್.
‘ಫಿನಾಲೆಯಲ್ಲಿ ಯಾರು ಗೆಲ್ಲಬೇಕು ಅನ್ನೋದು ಮೊದಲೇ ಫಿಕ್ಸ್ ಆಗಿರುತ್ತದೆ. ತಮಗೆ ಇಷ್ಟವಾದ ಸ್ಪರ್ಧಿಗಳನ್ನು ಅವರು ಗೆಲ್ಲಿಸುತ್ತಾರೆ. ಪ್ರೇಕ್ಷಕರ ವೋಟ್ ಮೇಲೆ ಎಲಿಮಿನೇಷನ್ ನಡೆಯುವುದಿಲ್ಲ ಅನ್ನೋದು ನನಗೆ ಗೊತ್ತಾಗಿದೆ’ ಎಂದು ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ಬಿಗ್ ಬಾಸ್ನಲ್ಲಿ ಕಳಪೆ ಪಟ್ಟ ಪಡೆದ ಮೈಕಲ್
‘ಬಿಗ್ ಬಾಸ್ ಮನೆ ಒಳಗೆ ಹೋಗುವ ಸಂದರ್ಭದಲ್ಲಿ ಇದೊಂದು ರಿಯಾಲಿಟಿ ಶೋ ಎಂದುಕೊಂಡಿದ್ದೆ. ಆದರೆ, ಇದರಲ್ಲಿ ಯಾವುದೂ ನಿಜವಿಲ್ಲ’ ಎಂದಿದ್ದಾರೆ ಅವರು. ಈ ಮೊದಲು ಕೂಡ ಅನೇಕ ಸ್ಪರ್ಧಿಗಳು ಈ ರೀತಿಯ ಆರೋಪ ಮಾಡಿದ್ದಿದೆ. ಕನ್ನಡದಲ್ಲಿ ಒಟಿಟಿ ಹಾಗೂ ಟಿವಿ ಸೀಸನ್ಗೆ ಬಂದಿದ್ದ ಆರ್ಯವರ್ಧನ್ ಗುರೂಜಿ ಕೂಡ ಇದೇ ರೀತಿಯ ಆರೋಪ ಮಾಡುತ್ತಾ ಬರುತ್ತಿದ್ದಾರೆ.
ಸದ್ಯ, ‘ಬಿಗ್ ಬಾಸ್ ಹಿಂದಿ ಸೀಸನ್ 17’ರಲ್ಲಿ ಮುನಾವರ್ ಫಾರೂಕಿ, ವಿಕ್ಕಿ ಜೈನ್, ಅಂಕಿತಾ ಲೋಖಂಡೆ ಮೊದಲಾದವರು ಸ್ಪರ್ಧೆಯಲ್ಲಿದ್ದಾರೆ. ಈ ತಿಂಗಳಾಂತ್ಯಕ್ಕೆ ಹಿಂದಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ