ಕಿರುತೆರೆ ನಟನ ವಿರುದ್ಧ ಕೇಳಿ ಬಂತು 2 ಕೋಟಿ ರೂಪಾಯಿ ವಂಚನೆ ಆರೋಪ; ದಾಖಲಾಯ್ತು ಕೇಸ್

ಸಂತ್ರಸ್ತೆಯೊಬ್ಬರು ಮಹಾರಾಷ್ಟ್ರದ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅವರು ದೂರಿರುವ ಪ್ರಕಾರ, ಕರಣವೀರ್​ಗೆ ಈ ಮಹಿಳೆ ಹಣ ನೀಡಿದ್ದರು. ಇದಕ್ಕೆ ಶೇ.2.5 ಬಡ್ಡಿ ನೀಡುವುದಾಗಿ ಕರಣ್​ವೀರ್ ಮಾತು ನೀಡಿದ್ದರು.

ಕಿರುತೆರೆ ನಟನ ವಿರುದ್ಧ ಕೇಳಿ ಬಂತು 2 ಕೋಟಿ ರೂಪಾಯಿ ವಂಚನೆ ಆರೋಪ; ದಾಖಲಾಯ್ತು ಕೇಸ್
ಕರಣ್​​ವೀರ್ ಹಾಗೂ ಅವರ ಪತ್ನಿ
Edited By:

Updated on: Jun 15, 2022 | 3:20 PM

ಸೆಲೆಬ್ರಿಟಿಗಳಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಕೆಲ ಸೆಲೆಬ್ರಿಟಿಗಳು ಗೊತ್ತಿಲ್ಲದೆ ಮಾಡಿದ ತಪ್ಪಿನಿಂದ ಪೇಚಿಗೆ ಸಿಲುಕುತ್ತಾರೆ. ಇನ್ನೂ ಕೆಲವರು ಗೊತ್ತಿದ್ದೂ ತಪ್ಪು ಮಾಡುತ್ತಾರೆ. ಏನೂ ಮಾಡದೇ ತೊಂದರೆಗೆ ಸಿಲುಕಿಕೊಳ್ಳುವವರೂ ಇದ್ದಾರೆ. ಈಗ ಹಿಂದಿ ಕಿರುತೆರೆ ನಟ, ಬಿಗ್ ಬಾಸ್ (Bigg Boss) ಖ್ಯಾತಿಯ ಕರಣ್​ವೀರ್ ಬೊಹ್ರಾ (Karanvir Bohra) ಅವರು ಇದೇ ರೀತಿಯ ವಿವಾದದಲ್ಲಿ ಸಿಲುಕಿಕೊಳ್ಳುವ ಸೂಚನೆ ಸಿಕ್ಕಿದೆ. 1.99 ಕೋಟಿ ರೂಪಾಯಿ ವಂಚಿಸಿರುವುದಾಗಿ 40 ವರ್ಷದ ಮಹಿಳೆ ಆರೋಪಿಸಿದ್ದಾರೆ. ಇದರಿಂದ ಕರಣ್​​ವೀರ್​ಗೆ ಸಂಕಷ್ಟ ಎದುರಾಗುವ ಸೂಚನೆ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯೊಬ್ಬರು ಮಹಾರಾಷ್ಟ್ರದ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅವರು ದೂರಿರುವ ಪ್ರಕಾರ, ಕರಣವೀರ್​ಗೆ ಈ ಮಹಿಳೆ ಹಣ ನೀಡಿದ್ದರು. ಇದಕ್ಕೆ ಶೇ.2.5 ಬಡ್ಡಿ ನೀಡುವುದಾಗಿ ಕರಣ್​ವೀರ್ ಮಾತು ನೀಡಿದ್ದರು. ಕರಣ್​​ವೀರ್​ 1 ಕೋಟಿ ರೂಪಾಯಿಯನ್ನು ಮಾತ್ರ ಹಿಂದಿರುಗಿಸಿದ್ದಾರೆ. ಉಳಿದ 1.99 ಕೋಟಿ ರೂಪಾಯಿ ಹಣವನ್ನು ಕರಣ್​ವೀರ್ ಹಿಂದಿರುಗಿಸಬೇಕಿದೆ.

‘ನಾನು ಹಣ ಕೇಳಿದರೆ ಕರಣ್​ವೀರ್ ಹಾಗೂ ಅವರ ಪತ್ನಿ ತೀಜೆ ಸಿಧು ಅವರು ಉತ್ತರಿಸಿಲ್ಲ. ನನ್ನನ್ನು ಶೂಟ್ ಮಾಡುವ ಬೆದರಿಕೆ ಒಡ್ಡಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ
ಕಿರುತೆರೆ ಜಗತ್ತಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ ನೋಡಿ; ಒಂದು ದಿನಕ್ಕೆ ಎಷ್ಟು ಲಕ್ಷ?
ತಪ್ಪು ಮಾಡಿದ ಸಾನಿಯಾಗೆ ಹರ್ಷನ ಎಚ್ಚರಿಕೆ; ಬಿಸಿ ತಟ್ಟಿದ್ದು ಮಾತ್ರ ವರುಧಿನಿಗೆ
Anupama Gowda: ‘ರಾಜಾ ರಾಣಿ 2’ ಶೋಗೆ ಅನುಪಮಾ ಗೌಡ ಯಾಕೆ ನಿರೂಪಕಿ ಆಗಿಲ್ಲ? ಫ್ಯಾನ್ಸ್ ಪ್ರಶ್ನೆಗೆ ನೇರ ಉತ್ತರ ನೀಡಿದ ನಟಿ
ಮತ್ತೆ ಕೊರೊನಾ ಭೀತಿ; ಖ್ಯಾತ ಹಿರಿಯ ಕಿರುತೆರೆ ನಟಿ ಕೊವಿಡ್​ಗೆ ಬಲಿ

ಈ ದೂರಿನ ವಿಚಾರವನ್ನು ಪೊಲೀಸರು ಖಚಿತಪಡಿಸಿದ್ದಾರೆ. ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೀಘ್ರವೇ ಕರಣ್​ವೀರ್ ಹಾಗೂ ಅವರ ಪತ್ನಿಯ ಹೇಳಿಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.

ಕೆಲ ಸಮಯದ ಹಿಂದೆ ಕರಣ್​​ವೀರ್ ಹಾಗೂ ಅವರ ಪತ್ನಿ ಸುದ್ದಿಯಲ್ಲಿದ್ದರು. ಈ ದಂಪತಿ ತಮ್ಮ ಮಕ್ಕಳನ್ನು ಕೆನಡಾದಲ್ಲಿ ಬೆಳೆಸುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದಕ್ಕೆ ಕೆಲವರು ಟೀಕೆ ಮಾಡಿದ್ದರು. ಆದರೆ, ಈ ಬಗ್ಗೆ ಈ ದಂಪತಿ ತಲೆಕೆಡಿಸಿಕೊಂಡಿಲ್ಲ.

ಕರಣವೀರ್ ಅವರು ‘ಶರಾರತ್​’, ‘ಕಸೌಟಿ ಜಿಂದಿ ಕೆ’ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡರು. ಕಂಗನಾ ರಣಾವತ್ ಹೋಸ್ಟ್ ಮಾಡಿದ್ದ ‘ಲಾಕಪ್’ ಶೋನಲ್ಲಿ ಕರಣ್​ವೀರ್ ಸ್ಪರ್ಧಿಯಾಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.