ಅಸಹ್ಯವಾದ ಭಾಷೆಯಲ್ಲಿ ಮಾತನಾಡಿ ಕಳಪೆ ಪಟ್ಟ ಪಡೆದು ಜೈಲು ಸೇರಿದ ಮಂಜ

ಈ ವಾರ ಬಿಗ್ ಬಾಸ್ ಮನೆಯಲ್ಲಿ ಮಂಜ ಅವರನ್ನು ಕಳಪೆ ಎಂದು ನಿರ್ಧರಿಸಲಾಗಿದೆ. ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಕ್ಕಾಗಿ ಅವರಿಗೆ ಕಳಪೆ ಪಟ್ಟ ನೀಡಲಾಗಿದೆ. ಮನೆ ಮಂದಿ ಕುಳಿತು ನೋಡುವಂತಹ ಟಿವಿ ಕಾರ್ಯಕ್ರಮದಲ್ಲಿ ಮಂಜ ಅವರ ಭಾಷೆ ಸೂಕ್ತವಾಗಿಲ್ಲ ಎಂದು ಯಶಸ್, ಸೌಂದರ್ಯಾ, ಕಿರಣ್ ಮುಂತಾದವರು ಹೇಳಿದ್ದಾರೆ.

ಅಸಹ್ಯವಾದ ಭಾಷೆಯಲ್ಲಿ ಮಾತನಾಡಿ ಕಳಪೆ ಪಟ್ಟ ಪಡೆದು ಜೈಲು ಸೇರಿದ ಮಂಜ
Manja
Image Credit source: Colors Kannada

Updated on: Oct 09, 2026 | 10:40 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಮಂಜ ಇತ್ತೀಚಿನ ಸಂಚಿಕೆಯಲ್ಲಿ ಯಶಸ್ ಬಗ್ಗೆ ತೀರಾ ಕೆಟ್ಟ ಭಾಷೆ ಬಳಸಿ ಮಾತನಾಡಿದ್ದಾರೆ. ಮಾತಿನ ಕಾರಣದಿಂದಲೇ ಮಂಜ ಎಡವುತ್ತಿದ್ದಾರೆ. ಬಿಗ್ ಬಾಸ್ ಆಟದಲ್ಲಿ ಅವರಿಗೆ ಮಾತೇ ಮುಳುವಾಗುತ್ತಿದೆ. ಈ ವಾರ ಅವರು ಮಿತಿ ಮೀರಿ ಮಾತನಾಡಿದ್ದಾರೆ. ಆದ್ದರಿಂದ ಅವರನ್ನು ಜೈಲಿಗೆ ಕಳಿಸಲಾಗಿದೆ. ಬಿಗ್ ಬಾಸ್ ಮನೆಯ ಬಹುತೇಕರು ಸೇರಿಕೊಂಡು ಮಂಜನಿಗೆ ಕಳಪೆ ಪಟ್ಟ ನೀಡಿದ್ದಾರೆ. ಈ ಮೊದಲು ಕೂಡ ಅವರಿಗೆ ವಾರ್ನಿಂಗ್ ನೀಡಲಾಗಿತ್ತು. ಆದರೆ ಅವರು ಬದಲಾಗಿಲ್ಲ.

ಟಿವಿಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗದಂತಹ ಅಶ್ಲೀಲ ಪದಗಳನ್ನು ಮಂಜ ಬಳಸಿದ್ದಾರೆ. ಅವರಿಂದ ಮನೆಯ ಸದಸ್ಯರಿಗೆ ಬೇಸರ ಆಗಿದೆ. ಸಭ್ಯತೆಯ ಗಡಿ ಮೀರಿ ಮಂಜ ನಾಲಿಗೆ ಹರಿಬಿಟ್ಟಿರುವುದು ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಈ ವಾರ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಏನು ಮಾತನಾಡುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.

‘ಮಾತಿಗೆ ಒಂದು ಮಿತಿ ಇರಬೇಕು. ಟಿವಿ ನೋಡುವವರಿಗೆ ಮುಜುಗರ ಎನಿಸಬಾರದು. ಕೆಟ್ಟ ಮಾತು ಆಡಿದಾಗ ನಮಗೆ ಹಾಗೂ ನೋಡುವವರಿಗೆ ಬೇಸರ ಆಗುತ್ತದೆ’ ಎಂದು ಯಶಸ್ ಹೇಳಿದ್ದಾರೆ. ‘ಮಂಜನಿಂದ ಈ ಶೋನಲ್ಲಿ ಅನೇಕರ ಚಾರಿತ್ರ್ಯಹರಣ ಆಗುತ್ತಿದೆ. ಇದು ಎಲ್ಲಿಯತನಕ ಹೋಗುತ್ತದೆ ಅಂತ ಗೊತ್ತಿಲ್ಲ. ಇದಕ್ಕೆ ಬಿಗ್ ಬಾಸ್ ಒಂದು ಅಂತ್ಯ ಹಾಡಲೇಬೇಕು’ ಎಂದು ಸೌಂದರ್ಯಾ ಶೆಟ್ಟಿ ಹೇಳಿದ್ದಾರೆ.

ಮಾತಿನ ಬಗ್ಗೆ ಆಕ್ಷೇಪ ವ್ಯಕ್ತ ಆಗುತ್ತಿರುವಾಗಲೇ ಮಂಜ ಮತ್ತೆ ಅಶ್ಲೀಲವಾದ ಭಾಷೆಯಲ್ಲಿ ಮಾತು ಜಾಸ್ತಿ ಮಾಡಿದ್ದಾರೆ. ಇದನ್ನೆಲ್ಲ ಕೇಳಿಸಿಕೊಂಡ ಸಂಗೀತಾ ಭಟ್ ಅವರು ತುಂಬಾ ಹಿಂಸೆ ಅನುಭವಿಸಿದ್ದಾರೆ. ಮಂಜನ ವರ್ತನೆಯನ್ನು ಖಂಡಿಸಿ ಪ್ರಶಾಂತ್ ಕೂಡ ಕಳಪೆ ಪಟ್ಟ ಕೊಟ್ಟಿದ್ದಾರೆ. ಒಟ್ಟಾರೆ ಇಡೀ ಮನೆಗೆ ಮಂಜನ ಅಸಭ್ಯ ಭಾಷೆಯಿಂದ ಕಿರಿಕಿರಿ ಆಗುತ್ತಿದೆ.

ಇದನ್ನೂ ಓದಿ: ‘ಮಂಜು ಈ ವಾರ ಎಲಿಮಿನೇಟ್ ಫಿಕ್ಸ್’; ವಿಶೇಷ ಅಧಿಕಾರ ಬಳಸ್ತಾರಾ ಸುದೀಪ್?

ಮಂಜ ಸಾಧ್ಯವಾದಷ್ಟು ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ‘ನಾನು ಇರುವುದೇ ಹೀಗೆ’ ಎಂದು ಹೇಳಿದ್ದಾರೆ. ಅವರ ಈ ಉದ್ಧಟತನಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಳ್ಳುವುದು ಗ್ಯಾರಂಟಿ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಮಂಜನ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us