AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಮನಿಸಿ: ಬಿಗ್​​ಬಾಸ್ ಆಡಿಷನ್​​ಗೆ ವಿಡಿಯೋ ಕಳಿಸುವವರೇ ಈ ಸೂಚನೆ ಪಾಲಿಸಿ

Bigg Boss Kannada: ಕಲರ್ಸ್ ವಾಹಿನಿಯು ಸಾಮಾನ್ಯರು ತಮ್ಮ ಎಂಟ್ರಿ ಕಳಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ಆಡಿಷನ್ ವಿಡಿಯೋ ಮಾಡಿ ಅದನ್ನು ಕಲರ್ಸ್ ವಾಹಿನಿ ಸೂಚಿಸಿರುವ ಲಿಂಕ್​​ಗೆ ಕಳಿಸಬೇಕು, ಕೇವಲ ಇನ್​​ಸ್ಟಾಗ್ರಾಂನಲ್ಲಿ ಅಪ್​​ಲೋಡ್ ಮಾಡಿದರೆ ಸಾಲದು. ಆದರೆ ಆಡಿಷನ್ ವೇಳೆ ಸಾಕಷ್ಟು ಜನ ವಾಹಿನಿ ಹೇಳಿರುವ ನಿಯಮಗಳನ್ನು ಮರೆತು ಆಡಿಷನ್ ವಿಡಿಯೋ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ವಾಹಿನಿಯೂ ಮತ್ತೊಮ್ಮೆ ನಿಯಮಗಳನ್ನು ನೆನಪಿಸಿದೆ.

ಗಮನಿಸಿ: ಬಿಗ್​​ಬಾಸ್ ಆಡಿಷನ್​​ಗೆ ವಿಡಿಯೋ ಕಳಿಸುವವರೇ ಈ ಸೂಚನೆ ಪಾಲಿಸಿ
Bigg Boss Kannada
ಮಂಜುನಾಥ ಸಿ.
|

Updated on:Jun 13, 2026 | 10:20 PM

Share

ಬಿಗ್​​ಬಾಸ್ ಕನ್ನಡದ (Bigg Boss Kannada) ಹೊಸ ಸೀಸನ್ ಈ ಬಾರಿ ತುಸು ಮುಂಚಿತವಾಗಿಯೇ ಶುರು ಆಗಲಿದೆ. ಅದು ಮಾತ್ರವೇ ಅಲ್ಲದೆ, ಈ ಬಾರಿ ಬಿಗ್​​ಬಾಸ್ ಕನ್ನಡಕ್ಕೆ ಸೆಲೆಬ್ರಿಟಿಗಳ ಜೊತೆಗೆ ಜನಸಾಮಾನ್ಯರ ಎಂಟ್ರಿಗೂ ಅವಕಾಶ ನೀಡಲಾಗಿದ್ದು, ಇದಕ್ಕಾಗಿ ಜನ ಅರ್ಜಿ ಸಲ್ಲಿಸಿ, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಬೇಕಿದೆ. ಕಲರ್ಸ್ ವಾಹಿನಿಯು ಸಾಮಾನ್ಯರು ತಮ್ಮ ಎಂಟ್ರಿ ಕಳಿಸಲು ವಿಶೇಷ ವ್ಯವಸ್ಥೆಯನ್ನು ಮಾಡಿದ್ದು, ಆಡಿಷನ್ ವಿಡಿಯೋ ಮಾಡಿ ಅದನ್ನು ಕಲರ್ಸ್ ವಾಹಿನಿ ಸೂಚಿಸಿರುವ ಲಿಂಕ್​​ಗೆ ಕಳಿಸಬೇಕು, ಕೇವಲ ಇನ್​​ಸ್ಟಾಗ್ರಾಂನಲ್ಲಿ ಅಪ್​​ಲೋಡ್ ಮಾಡಿದರೆ ಸಾಲದು. ಆದರೆ ಆಡಿಷನ್ ವೇಳೆ ಸಾಕಷ್ಟು ಜನ ವಾಹಿನಿ ಹೇಳಿರುವ ನಿಯಮಗಳನ್ನು ಮರೆತು ಆಡಿಷನ್ ವಿಡಿಯೋ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ವಾಹಿನಿಯೂ ಮತ್ತೊಮ್ಮೆ ನಿಯಮಗಳನ್ನು ನೆನಪಿಸಿದೆ.

ಕಲರ್ಸ್ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಆಡಿಷನ್ ವಿಡಿಯೋ ಮಾಡುವಾಗ ಕಡ್ಡಾಯವಾಗಿ ನಾಲ್ಕು ಹಂತಗಳನ್ನು ಪಾಲಿಸಲೇ ಬೇಕು ಎಂದು ವಾಹಿನಿ ಹೇಳಿದೆ. ಆ ಹಂತಗಳು ಇಂತಿವೆ, ‘ವಿಡಿಯೋ ಮಾಡುವಾಗ ನಿಮ್ಮ ವಿಶೇಷತೆ ಏನು? ಬಿಗ್​​ಬಾಸ್​​ನಲ್ಲಿ ಭಾಗವಿಸಲು ನೀವು ಏಕೆ ಸೂಕ್ತ ವ್ಯಕ್ತಿ? ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು? ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ.

‘ಬಿಗ್​​ಬಾಸ್, ಪ್ರತಿಭೆ, ಆತ್ಮವಿಶ್ವಾಸ, ಟ್ಯಾಲೆಂಟ್ ಅನ್ನು ತೋರಿಸಲು ಸೂಕ್ತವಾದ ವೇದಿಕೆ. ಇಲ್ಲಿಗೆ ಅರ್ಹತೆ ಪಡೆಯಲು ನೀವೆಷ್ಟು ಸೂಕ್ತವಾದ ವ್ಯಕ್ತಿ ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ವಾಹಿನಿ ಹೇಳಿದೆ. ಮುಂದುವರೆದು, ‘ಬಿಗ್​​ಬಾಸ್ ಆಡಿಷನ್​​ನಲ್ಲಿ ಭಾಗವಹಿಸಲು ಜನ ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್ ವಿಡಿಯೋ ಕಳಿಸುವಾಗ ನಾಲ್ಕು ಹಂತಗಳನ್ನು ಮರೆಯುವುದು ಬೇಡ’ ಎಂದು ವಾಹಿನಿ ಮನವಿ ಮಾಡಿದೆ.

ಇದನ್ನೂ ಓದಿ:ಮತ್ತೆ ತೆಲುಗಿಗೆ ಹೊರಟ ರುಕ್ಮಿಣಿ ವಸಂತ್, ಸ್ಟಾರ್ ನಟನ ಸಿನಿಮಾ

ಬಿಗ್​​ಬಾಸ್ ನಲ್ಲಿ ಭಾಗವಹಿಸಲು ಸಾಮಾನ್ಯ ಜನರು ಆಡಿಷನ್ ನೀಡಬೇಕಿದೆ. ಈ ಹಿಂದೆ ಕೆಲ ಬಾರಿ ಸಾಮಾನ್ಯರನ್ನು ಬಿಗ್​​ಬಾಸ್​​ಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ಶೋನಲ್ಲಿ ಗಮನ ಸೆಳೆದ ಸಾಮಾನ್ಯರು ತುಸು ಕಡಿಮೆಯೇ. ಕಳೆದ ಬಾರಿ ಗಿಲ್ಲಿ ಗೆಲ್ಲುವ ಮೂಲಕ ಗ್ರಾಮೀಣ ಪ್ರತಿಭೆಗಳು ಶೋಗೆ ಕಳೆ ತಂದುಕೊಡುತ್ತಾರೆಂಬುದನ್ನು ಗಮನಿಸಿರುವ ಬಿಗ್​​ಬಾಸ್, ಈ ಬಾರಿ ಸಾಮಾನ್ಯರನ್ನು ಶೋಗೆ ಕರೆದುಕೊಂಡು ಬರುವ ನಿರ್ಧಾರ ಕೈಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:19 pm, Sat, 13 June 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಬಿಡದಿ ಟೌನ್​ಶಿಪ್​​ ಯೋಜನೆ ಲೂಟಿ ಸ್ಕೀಮ್​​​ ಡೌಟೇ ಬೇಡ: ಕುಮಾರಸ್ವಾಮಿ
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!