AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ

ನಾವು ನಮ್ಮ ಜೀವನದಲ್ಲಿ ಯಾವ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆಯೋ ಅದೇ ರೀತಿ ನಮ್ಮ ಜೀವನ ಇರುತ್ತದೆ. ಅದಕ್ಕಾಗಿಯೇ ಒಳ್ಳೆಯವರ ಸಹವಾಸದಲ್ಲಿರಬೇಕು, ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಕೊಳ್ಳಬೇಕು ಎಂದು ಹಿರಿಯರು ಕಿವಿಮಾತು ಹೇಳೋದು. ಹೀಗೆ ಒಳ್ಳೆಯ ಅಭ್ಯಾಸಗಳು ನಮ್ಮ ಜೀವನ ವನ್ನು ಬೆಳಗುವಂತೆ ಕೆಲವೊಂದು ಅಭ್ಯಾಸಗಳು ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಆಚಾರ್ಯ ಚಾಣಕ್ಯರ ಪ್ರಕಾರ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ನಾಶ ಮಾಡುತ್ತವೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ನಾಲ್ಕು ತಪ್ಪುಗಳು ವ್ಯಕ್ತಿಯ ಜೀವನವನ್ನೇ ಹಾಳು ಮಾಡುತ್ತವೆ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on:Jul 27, 2026 | 9:17 PM

Share

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತನ್ನ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಹೌದು ಶ್ರೀಮಂತಿಕೆ ಗಳಿಸುವುದು ಹೇಗೆ, ಯಶಸ್ಸನ್ನು ಸಾಧಿಸಲು ಏನು ಮಾಡಬೇಕು, ದಾಂಪತ್ಯ ಜೀವನ ಸುಖಕರವಾಗಿರಲು ಏನು ಮಾಡಬೇಕು, ಎಂತಹ ಸ್ನೇಹಿತರನ್ನು ಆಯ್ಕೆ ಮಾಡಬೇಕು ಹೀಗೆ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಅವರು ವ್ಯಕ್ತಿಯ ಈ ಕೆಲವೊಂದು ಅಭ್ಯಾಸಗಳು ಆತನ ಜೀವನವನ್ನೇ ಸಂಪೂರ್ಣವಾಗಿ ಹಾಳು ಮಾಡುತ್ತದೆ ಎಂದಿದ್ದಾರೆ.  ಹಾಗಿದ್ರೆ ಯಾವೆಲ್ಲಾ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಹಾಳು ಮಾಡುತ್ತದೆ, ಯಶಸ್ಸನ್ನು ಸಾಧಿಸಲು ಯಾವೆಲ್ಲಾ ಅಭ್ಯಾಸಗಳನ್ನು ಬದಲಾಯಿಸಬೇಕು  ಎಂಬುದನ್ನು ನೋಡೋಣ ಬನ್ನಿ.

ವ್ಯಕ್ತಿಯ ಜೀವನವನ್ನು ಹಾಳು ಮಾಡುವ ಅಭ್ಯಾಸಗಳು:

ಸೋಮಾರಿತನ: ಆಚಾರ್ಯ ಚಾಣಕ್ಯರ ಪ್ರಕಾರ ಸೋಮಾರಿತನವು ವ್ಯಕ್ತಿಯ ದೊಡ್ಡ ಶತ್ರುವಾಗಿದ್ದು, ಇದು  ಜೀವನದ ಪ್ರಗತಿಗೆ ಅಡ್ಡಿಯಾಗುತ್ತದೆ. ಸೋಮಾರಿತನವಿದ್ದರೆ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ, ಈ ಒಂದು ಅಭ್ಯಾಸದಿಂದ ಸಂಪೂರ್ಣ ಜೀವನವೇ ಹಾಳಾಗುತ್ತದೆ. ಆದ್ದರಿಂದ, ಜೀವನವನ್ನು ಹಾಳು ಮಾಡುವ ಈ ಅಭ್ಯಾಸವನ್ನು ತ್ಯಜಿಸಿ. ಸೋಮಾರಿತನವನ್ನು ಬದಿಗಿಟ್ಟು, ಶ್ರದ್ಧೆಯಿಂದ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ.

ಯೋಚಿಸದೆ ವರ್ತಿಸುವುದು: ಯಾವುದೇ ಕೆಲಸವನ್ನು ಸಹ ಯೋಚಿಸದೆ ಕೈಗೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಯೋಚಿಸದೆ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ, ಯೋಚಿಸದೆ ಯಾವುದೇ ಕಾರ್ಯವನ್ನು ಕೈಗೊಳ್ಳುವುದರಿಂದ ಅದರಿಂದ ತೊಂದರೆಗಳಾಗುವುದೇ ಹೆಚ್ಚು. ಇದು ಜೀವನದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ಆದ್ದರಿಂದ ಎಂದಿಗೂ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಇದನ್ನೂ ಓದಿ: ಈ ರೀತಿಯ ಜನರು ಮೋಸ ಹೋಗ್ತಾರೆ ಎನ್ನುತ್ತಾರೆ ಚಾಣಕ್ಯ

ಕೆಟ್ಟವರ ಸಹವಾಸ: ಕೆಟ್ಟವರ ಸಹವಾಸ ಒಳ್ಳೆಯದಲ್ಲ. ಈ ಸಹವಾಸ ದೋಷವು ಜೀವನವನ್ನು ಸರ್ವನಾಶ ಮಾಡುತ್ತದೆ. ಹೌದು ಕೆಟ್ಟವರ ಜೊತೆ ಸೇರಿದಾಗ ಅವರ ಕೆಟ್ಟ ಅಭ್ಯಾಸಗಳನ್ನೇ ನಾವು ಅಳವಡಿಸಿಕೊಳ್ಳುತ್ತೇವೆ. ಇದರಿಂದ ಜೀವನದಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ಹಾಗಾಗಿ ಕೆಟ್ಟವರ ಸಹವಾಸದಿಂದ ದೂರವಿರಿ, ಒಳ್ಳೆಯರು ಹಾಗೂ ಸಕಾರಾತ್ಮಕ ಮನೋಭಾವವಿರುವ ಜನರೊಂದಿಗೆ ಬೆರೆಯಿರಿ.

ಸಮಯ ವ್ಯರ್ಥ ಮಾಡುವುದು: ಸಮಯ ವ್ಯರ್ಥ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ಚಾಣಕ್ಯ. ಕಠಿಣ ಪರಿಶ್ರಮದ ಮೂಲಕ ಕಳೆದುಹೋದ ಹಣವನ್ನು ಮರುಪಡೆಯಬಹುದು, ಆದರೆ ಒಮ್ಮೆ ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಂದಿಗೂ ಸಮಯವನ್ನು ವ್ಯರ್ಥ ಮಾಡಬೇಡಿ. ಸಮಯ ವ್ಯರ್ಥ ಮಾಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಅಭ್ಯಾಸವಿರುವವರ ಸಂಪೂರ್ಣ ಜೀವನವೇ ಹಾಳಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 pm, Mon, 27 July 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ