ಟ್ವಿಸ್ಟು-ಟರ್ನುಗಳ ನಡುವೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ, ಉತ್ತಮ-ಕಳಪೆ ಯಾರು?

ಪ್ರತಿ ಸ್ಪರ್ಧಿಗಳು ಪ್ರತಿ ಬಾರಿಯೂ ಕ್ಯಾಪ್ಟನ್ ಆಗಲು ಬಹಳ ಕಷ್ಟಪಡುತ್ತಾರೆ. ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದರೆ ಬಹಳ ಪರಿತಪಿಸುತ್ತಾರೆ. ಕೆಲವೊಮ್ಮೆ ಕ್ಯಾಪ್ಟನ್ ಆಗಲು ಅಡ್ಡದಾರಿಯನ್ನೂ ಸಹ ಹಿಡಿಯುವುದುಂಟು. ಈ ಬಾರಿ ಕ್ಯಾಪ್ಟೆನ್ಸಿ ಟಾಸ್ಕ್​​ನಲ್ಲಿ ಸಾಕಷ್ಟು ಟ್ವಿಸ್ಟು-ಟರ್ನುಗಳಿದ್ದವು. ಹಾಗಿದ್ದರೂ ಸಹ ಅದ್ಭುತವಾಗಿ ಆಟ ಆಡಿದ ಜಗ್ಗ ಮಮ್ಮಿ ಅವರು ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಟ್ವಿಸ್ಟು-ಟರ್ನುಗಳ ನಡುವೆ ಕ್ಯಾಪ್ಟನ್ ಆದ ಜಗ್ಗ ಮಮ್ಮಿ, ಉತ್ತಮ-ಕಳಪೆ ಯಾರು?
Bigg Boss Kannada13

Updated on: Oct 30, 2026 | 10:55 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಕನ್ನಡ ಸೀಸನ್ 13ರ ಹೊಸ ಕ್ಯಾಪ್ಟನ್
  • ಜಗ್ಗ ಮಮ್ಮಿ ಬಿಗ್​​ಬಾಸ್​​ನ ಕ್ಯಾಪ್ಟನ್ ಆಗಿದ್ದಾರೆ
  • ಮನೆಯಲ್ಲಿ ಉತ್ತಮ ಯಾರು? ಕಳಪೆ ಯಾರು?

ಬಿಗ್​​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಸಾಧನೆಗೆ ಸಮ. ಪ್ರತಿ ಸ್ಪರ್ಧಿಗಳು ಪ್ರತಿ ಬಾರಿಯೂ ಕ್ಯಾಪ್ಟನ್ ಆಗಲು ಬಹಳ ಕಷ್ಟಪಡುತ್ತಾರೆ. ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದರೆ ಬಹಳ ಪರಿತಪಿಸುತ್ತಾರೆ. ಕೆಲವೊಮ್ಮೆ ಕ್ಯಾಪ್ಟನ್ ಆಗಲು ಅಡ್ಡದಾರಿಯನ್ನೂ ಸಹ ಹಿಡಿಯುವುದುಂಟು. ಈ ಬಾರಿ ಕ್ಯಾಪ್ಟೆನ್ಸಿ ಟಾಸ್ಕ್​​ನಲ್ಲಿ ಸಾಕಷ್ಟು ಟ್ವಿಸ್ಟು-ಟರ್ನುಗಳಿದ್ದವು. ಹಾಗಿದ್ದರೂ ಸಹ ಅದ್ಭುತವಾಗಿ ಆಟ ಆಡಿದ ಜಗ್ಗ ಮಮ್ಮಿ ಅವರು ಮೊದಲ ಬಾರಿಗೆ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಕ್ಯಾಪ್ಟೆನ್ಸಿ ಓಟಕ್ಕೆ ಯಶಸ್, ಸೋನಿಕಾ, ಗಾನವಿ, ಕುಮಾರಿ, ಜಗ್ಗಮಮ್ಮಿ, ತಾಂಡವ್ ಅವರುಗಳು ಆಯ್ಕೆ ಆಗಿದ್ದಾರೆ. ಚೌಕಾಕಾರದ ಆಕೃತಿಯನ್ನು ರಚಿಸಿ ಅದರ ನಡುವಿನಿಂದ ಚೆಂಡನ್ನು ನಿಗದಿತ ಗುರಿಗೆ ಎಸೆಯುವ ಟಾಸ್ಕ್ ಅನ್ನು ನೀಡಲಾಗಿತ್ತು. ಈ ಟಾಸ್ಕ್​​ನಲ್ಲಿ ನಾಲ್ಕು ಬಾರಿ ಸತತವಾಗಿ ಗೆದ್ದ ಜಗ್ಗ ಅವರು ಯಶಸ್, ಸೋನಿಕಾ, ಗಾನವಿ, ತಾಂಡವ್ ಅವರುಗಳನ್ನು ಒಬ್ಬರ ನಂತರ ಒಬ್ಬರಂತೆ ಹೊರಗೆ ಕಳಿಸಿದರು. ಕೊನೆಗೆ ಉಳಿದಿದ್ದ ಕುಮಾರಿ. ಆದರೆ ಕುಮಾರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದ ಕಾರಣ ಅವರು ಆಡಲು ಶಕ್ತರಾಗಿರಲಿಲ್ಲ.

ಕುಮಾರಿಯ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡುವಂತೆ ಕ್ಯಾಪ್ಟನ್ ಸೌಂದರ್ಯಾಗೆ ಅವಕಾಶ ಕೊಡಲಾಯ್ತು. ಸೌಂದರ್ಯಾ ಅವರು ತಾಂಡವ್ ಅವರನ್ನು ಆಯ್ಕೆ ಮಾಡಿದರು. ಅಂತಿಮ ಟಾಸ್ಕ್ ತುಸು ಕಷ್ಟವಾಗಿಯೇ ಇತ್ತು. ಚೌಕಾಕಾರದ ದೊಡ್ಡ ಬಲೆಯನ್ನು ತಳ್ಳುತ್ತಾ ಹೋಗಿ ರಿಂಗುಗಳನ್ನು ಆಯ್ದುಕೊಂಡು ಅವನ್ನು ಗೂಟಕ್ಕೆ ಗುರಿ ನೋಡಿ ಎಸೆಯಬೇಕಿತ್ತು. ಆರಂಭದಲ್ಲಿ ಈ ಟಾಸ್ಕ್​​ನಲ್ಲಿ ತಾಂಡವ್ ಗೆಲ್ಲುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಗೆದ್ದಿದ್ದು ಜಗ್ಗ ಮಮ್ಮಿ. ಬಲೆಯನ್ನು ಉರುಳಿಸಿಕೊಂಡು ಹೋಗುವುದರಲ್ಲೂ ಮೊದಲಿಗರಾದರು, ಗುರಿ ನೋಡಿ ಎಸೆಯುವುದರಲ್ಲೂ ಮೊದಲಿಗರಾದರು. ಆ ಮೂಲಕ ಮನೆಗೆ ಕ್ಯಾಪ್ಟನ್ ಆದರು.

ಇದನ್ನೂ ಓದಿ:ಬಿಗ್​​ಬಾಸ್ ಪ್ರಶಾಂತ್ ಮಾಡೋ ಯೋಗಾಸನ ನೋಡಿ ನಗದೇ ಇರಲಾರಿರಿ: ವಿಡಿಯೋ

ಬಳಿಕ ಉತ್ತಮ ಮತ್ತು ಕಳಪೆ ಆಯ್ಕೆ ನಡೆಯಿತು. ಇಡೀ ವಾರ ಅದ್ಭುತವಾಗಿ ಪ್ರದರ್ಶನ ನೀಡಿದ, ಎಲ್ಲರನ್ನೂ ನಗಿಸಿದ ಪ್ರಶಾಂತ್ ಅವರಿಗೆ ಈ ವಾರ ಉತ್ತಮ ನೀಡಲಾಯ್ತು. ಉತ್ತಮ ನೀಡುವಾಗ ಪ್ರಶಾಂತ್ ಭಾವುಕರಾಗಿ ಅತ್ತೇ ಬಿಟ್ಟರು. ತಮ್ಮ ಈ ಉತ್ತಮ ಗೌರವವನ್ನು ತಮ್ಮ ಪತ್ನಿಗೆ ಅವರು ಅರ್ಪಿಸಿದರು. ಬಳಿಕ ಕಳಪೆಯ ಆಯ್ಕೆ ನಡೆಯಿತು. ಶಾಸ್ತ್ರಿಗೆ ಈ ವಾರ ಹೆಚ್ಚಿನ ಸಂಖ್ಯೆಯಲ್ಲಿ ಓಟುಗಳು ಬಿದ್ದ ಕಾರಣ ಶಾಸ್ತ್ರಿ ಮತ್ತೊಮ್ಮೆ ಕಳಪೆ ಆದರು. ಮತ್ತೆ ಜೈಲು ದಾರಿ ಹಿಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us