ಸಂಗೀತಾ ಮಾಲೀಕತ್ವ ಟೀಕಿಸಿದ ಮೈಖಲ್, ಆಡಲ್ಲವೆಂದು ಹೊರಟ ತುಕಾಲಿ ಸಂತು

|

Updated on: Dec 21, 2023 | 11:44 PM

Bigg Boss: ಸಂಗೀತಾ ಶೃಂಗೇರಿ, ತಮ್ಮ ಕಠುವಾದ ಮಾತು, ವರ್ತನೆಯಿಂದ ಮನೆಯಲ್ಲಿ ಒಂಟಿಯಾಗಿದ್ದಾರೆ. ಗುರುವಾರದ ಎಪಿಸೋಡ್​ನಲ್ಲಿ ಮೈಖಲ್ ಹಾಗೂ ತುಕಾಲಿ, ಸಂಗೀತಾ ವಿರುದ್ಧ ಸಿಡಿದೆದ್ದರು.

ಸಂಗೀತಾ ಮಾಲೀಕತ್ವ ಟೀಕಿಸಿದ ಮೈಖಲ್, ಆಡಲ್ಲವೆಂದು ಹೊರಟ ತುಕಾಲಿ ಸಂತು
Follow us on

ಸಂಗೀತಾ ಶೃಂಗೇರಿ (Sangeetha Sringeri) ಬಿಗ್​ಬಾಸ್ (BiggBoss) ಮನೆಯಲ್ಲಿ ಒಂಟಿ ಆಗಿದ್ದಾರೆ. ನಾನು ಯಾರಿಗೂ ಏನು ಮಾಡಿಲ್ಲ ಎಂದು ಪದೇ ಪದೇ ಹೇಳುವ ಸಂಗೀತಾ, ತಮ್ಮ ಕಠುವಾದ ಮಾತು, ನಡೆಗಳಿಂದಲೇ ಮನೆಯ ಬಹುತೇಕ ಸದಸ್ಯರನ್ನು, ಅದರಲ್ಲಿಯೂ ಆಪ್ತ ಗೆಳೆಯರಾಗಿದ್ದ ಕಾರ್ತಿಕ್ ಹಾಗೂ ತನಿಷಾರನ್ನು ಕಳೆದುಕೊಂಡಿದ್ದಾರೆ. ಇದೀಗ ತಂಡದ ಮಾಲೀಕತ್ವ ಪಡೆದುಕೊಂಡಿದ್ದ ಸಂಗೀತಾ, ಅಲ್ಲಿಯೂ ಸಹ ತಮ್ಮ ಸ್ಪರ್ಧಿಗಳ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ತನಿಷಾ ಹಾಗೂ ಸಂಗೀತಾಗೆ ತಲಾ 11 ಸಾವಿರ ಪಾಯಿಂಟ್ಸ್ ನೀಡಿ ತಂಡವನ್ನು ಖರೀದಿಸುವಂತೆ ಬಿಗ್​ಬಾಸ್ ಹೇಳಿದ್ದರು. ಸಂಗೀತಾ ಭಾರಿ ಕಡಿಮೆ ಮೊತ್ತಕ್ಕೆ ತಮ್ಮ ತಂಡವನ್ನು ಖರೀದಿಸಿ ತಾವು ಭಾರಿ ಮೊತ್ತವನ್ನೇ ಉಳಿಸಿಕೊಂಡರು. ಅದು ಮಾತ್ರವೇ ಅಲ್ಲದೆ, ಟಾಸ್ಕ್ ಗೆದ್ದಾಗ ಬಂದ ಮೊತ್ತದಲ್ಲಿಯೂ ದೊಡ್ಡ ಶೇರ್ ಉಳಿಸಿಕೊಂಡರು. ಅದಕ್ಕೆ ನೀಡಿದ ಕಾರಣಗಳು ಕೆಲ ಸ್ಪರ್ಧಿಗಳಿಗೆ ಸಮಂಜಸ ಎನಿಸಿರಲಿಲ್ಲ. ತನಿಷಾ ತಂಡದಲ್ಲಿಯೂ ಕೆಲವರಿಗೆ ಅಸಮಾಧಾನ ಇತ್ತು.

ಇದೇ ಕಾರಣಕ್ಕೆ ಗುರುವಾರದ ಎಪಿಸೋಡ್​ನಲ್ಲಿ ಬಹಿರಂಗ ಚರ್ಚೆಯನ್ನು ಬಿಗ್​ಬಾಸ್ ಏರ್ಪಡಿಸಿದ್ದರು. ಈ ವೇಳೆ ಮೈಖಲ್ ಹಾಗೂ ಸಂಗೀತಾ ನಡುವೆ ಬಿಸಿ-ಬಿಸಿ ಚರ್ಚೆ ನಡೆಯಿತು. ಸಂಗೀತಾ, ತನ್ನ ಆಟಗಾರರಿಗೆ ಅನ್ಯಾಯ ಮಾಡಿದ್ದಾರೆ, ‘ನಾನು ನಿಮಗೆ ಸ್ಕ್ರೀನ್ ಸ್ಪೇಸ್’ ಕೊಡುತ್ತಿದ್ದೇನೆ ಎಂಬ ಅತ್ಯಂತ ಕೆಟ್ಟ ಕಾರಣ ನೀಡಿ ನಮಗೆಲ್ಲ ಕಡಿಮೆ ಮೊತ್ತ ನೀಡಿದ್ದಾರೆ. ಮಾತ್ರವಲ್ಲದೆ, ಕೆಟ್ಟದಾಗಿ ಆಡಿದರೆ ಕೊಟ್ಟ ಹಣ ವಾಪಸ್ ಪಡೆಯುತ್ತೇನೆ ಎಂದು ಸಹ ಹೇಳಿದ್ದಾರೆ. ಇದೆಲ್ಲ ದುರ್ಬುದ್ಧಿಯ ವ್ಯವಹಾರ ಎಂದು ವಾದಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ಸ್ಪರ್ಧಿಗಳ ಹರಾಜು ಯಾರಿಗೆ ಎಷ್ಟು ಹಣ?

ನಾವೇನು ಜೀತದಾಳುಗಳಾ, ಚಿಲ್ಲರೆ ಕಾಸು ಕೊಡಲು, ಸ್ಕ್ರೀನ್ ಸ್ಪೇಸ್ ಕೊಡಲು ಸಂಗೀತಾನೇ ಈ ಮನೆಯಲ್ಲಿ ಕ್ಯಾಮೆರಾ ಇಟ್ಟು, ನಮ್ಮನ್ನೆಲ್ಲ ಆಡಿಸುತ್ತಿದ್ದಾರಾ ಎಂದು ಏರಿದ ದನಿಯಲ್ಲಿ ಮಾತನಾಡಿದರು. ಅಲ್ಲದೆ, ತಮ್ಮ ತಂಡದಲ್ಲಿ ಅವಿನಾಶ್ ಕಳಪೆ ಆಟ ಆಡಿದ ಎಂಬ ಸಂಗೀತಾರ ಹೇಳಿಕೆಯನ್ನು ಸಹ ತೀವ್ರವಾಗಿ ಖಂಡಿಸಿದರು. ಅವಿನಾಶ್ ಒಳ್ಳೆಯ ಆಟ ಆಡಿದ್ದಾನೆಂದು, ಉದ್ದೇಶಪೂರ್ವಕವಾಗಿ ಅವನಿಗೆ ಕಳಪೆ ನೀಡಲಾಗಿದೆ ಎಂದು ತುಕಾಲಿ ಸಂತು, ವಿನಯ್ ಸಹ ಅನುಮೋದಿಸಿದರು.

ಆ ಬಳಿಕ ಹರಾಜು ನಡೆದು, ಮೈಖಲ್ ತನಿಷಾ ತಂಡಕ್ಕೆ ಸೇರಿದರೆ, ತುಕಾಲಿ ಸಂಗೀತಾ ತಂಡಕ್ಕೆ ಬಂದರು. ಬಳಿಕ ನಡೆದ ಚಿತ್ರ-ವಿಚಿತ್ರ ಟಾಸ್ಕ್​ನಲ್ಲಿ ತನಿಷಾ ತಂಡ ಗೆದ್ದಿತು, ತುಕಾಲಿ ಸರಿಯಾಗಿ ಆಡದ ಕಾರಣ ಸಂಗೀತಾ ತಂಡ ಸೋತಿತು. ಆಟದ ಬಳಿಕ ಕ್ರೀಡಾ ಸ್ಪೂರ್ತಿ ಮರೆತು, ತುಕಾಲಿಗೆ ಕೈ ಕೊಡಲಿಲ್ಲ ಸಂಗೀತಾ, ಇದು ತುಕಾಲಿಗೆ ಬೇಸರವಾಗಿ ಅದನ್ನು ಇತರರೊಡನೆ ಹಂಚಿಕೊಂಡರು, ಇದೇ ವಿಷಯವಾಗಿ ತುಕಾಲಿ ಹಾಗೂ ಸಂಗೀತಾ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ಅತಿರೇಕಕ್ಕೆ ಹೋದಾಗ ನಾನು ನಿಮ್ಮೊಂದಿಗೆ ಆಟವಾಡುವುದಿಲ್ಲ ಎಂದು ಸಿಟ್ಟಿನಲ್ಲಿ ಹೇಳಿದರು ತುಕಾಲಿ.

ಬಳಿಕ ನಡೆದ ಟಬ್​ ಟಾಸ್ಕ್​ನಲ್ಲಿ ಸಂಗೀತಾ, ತುಕಾಲಿಯನ್ನು ಹೊರಗಿಟ್ಟರು. ಹೊರಗಿಡುವಾಗ, ಆಗಲೆ ನೀವೇ ಹೇಳಿದರಲ್ಲ, ನಾನು ಆಡಲ್ಲ ಎಂದು ಅದಕ್ಕೆ ನಿಮ್ಮನ್ನು ಹೊರಗಿಡುತ್ತಿದ್ದೇನೆ ಎಂದರು. ಇದು ತುಕಾಲಿಯನ್ನು ಕೆರಳಿಸಿತು. ಡ್ರಮ್ ಉರುಳಿಸುವ ಟಾಸ್ಕ್​ನಲ್ಲಿ ಸಂಗೀತಾ ತಂಡ ಸೋತಿತಾದರೂ, ತನಿಷಾ ತಂಡ ನಿಯಮ ಮೀರಿದೆ ಎಂದು ಬಿಗ್​ಬಾಸ್ ಹೇಳಿದ್ದು, ಶುಕ್ರವಾರದ ಎಪಿಸೋಡ್​ನಲ್ಲಿ ಏನಾಗಲಿದೆ ಎಂಬುದು ತಿಳಿಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ