ವೀಕೆಂಡ್ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು? ಕಾರಣವೇನು?

Bigg Boss: ಈ ವಾರ ನಡೆದ ಟಾಸ್ಕ್​ಗಳಲ್ಲಿ ಕೆಲವು ಸ್ಪರ್ಧಿಗಳು ಹದ್ದು ಮೀರಿ ವರ್ತಿಸಿದ್ದಾರೆ. ಕೆಲವರಿಗೆ ನ್ಯಾಯವಾಗಿದೆ, ಕೆಲವರಿಗೆ ಅನ್ಯಾಯವಾಗಿದೆ. ಹಾಗಾಗಿ ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್​ ಏನು ಹೇಳಲಿದ್ದಾರೆ ಎಂದು ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ. ಆದರೆ ಈ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಬರುವುದಿಲ್ಲ ಎನ್ನಲಾಗುತ್ತಿದೆ.

ವೀಕೆಂಡ್ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು? ಕಾರಣವೇನು?
Follow us
ಮಂಜುನಾಥ ಸಿ.
|

Updated on: Dec 22, 2023 | 9:53 PM

ವಾರಗಳು ಕಳೆದಂತೆ ಕನ್ನಡ ಬಿಗ್​ಬಾಸ್ (BiggBoss) ಕುತೂಹಲ ಹೆಚ್ಚಿಸಿಕೊಳ್ಳುತ್ತಿದೆ. ಸ್ಪರ್ಧಿಗಳ ನಡುವಿನ ಕೆಮಿಸ್ಟ್ರಿ ಬದಲಾಗುತ್ತಿದೆ. ಹಿಂದೆ ಗೆಳೆಯರಾಗಿದ್ದವರು-ವೈರಿಗಳಾಗಿದ್ದಾರೆ, ವೈರಿಗಳು-ಗೆಳೆಯರಾಗಿದ್ದಾರೆ. ಎಲಿಮಿನೇಟ್ ಆಗದೆ ಮನೆಯಲ್ಲಿ ಉಳಿದುಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ವಾರ ಮನೆಯಲ್ಲಿ ಸಾಕಷ್ಟು ಗಲಾಟೆ-ಜಗಳಗಳು ನಡೆದಿವೆ. ಹಲವರು ಹಲವು ತಪ್ಪುಗಳನ್ನು ಮಾಡಿದ್ದಾರೆ. ಹಾಗಾಗಿ ಈ ಬಾರಿಯ ವೀಕೆಂಡ್ ಪಂಚಾಯ್ತಿಯ ಮೇಲೆ ವೀಕ್ಷಕರ ನಿರೀಕ್ಷೆ ಇದೆ. ಆದರೆ ಈ ಬಾರಿ ವೀಕೆಂಡ್ ಪಂಚಾಯ್ತಿಗೆ ಸುದೀಪ್ ಬರುವುದಿಲ್ಲ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಪ್ರತಿ ಶನಿವಾರ ಹಾಗೂ ಭಾನುವಾರ ಸುದೀಪ್ ಬಂದು ಆ ವಾರ ಸ್ಪರ್ಧಿಗಳು ಮಾಡಿದ ತಪ್ಪು-ಒಪ್ಪುಗಳ ಬಗ್ಗೆ ಮಾತನಾಡುತ್ತಾರೆ. ಉತ್ತಮವಾಗಿ ಆಡಿದವರಿಗೆ ಚಪ್ಪಾಳೆ ನೀಡುತ್ತಾರೆ, ಕೆಟ್ಟದಾಗಿ ಆಡಿದವರಿಗೆ ಬುದ್ಧಿವಾದ ಹೇಳುತ್ತಾರೆ. ಮನೆಯಲ್ಲಿ ಆದ ತಪ್ಪುಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಸ್ಪರ್ಧಿಗಳನ್ನು ತುಸು ನಗಿಸಿ, ತುಸು ಬುದ್ಧಿ ಹೇಳುತ್ತಾರೆ. ಕೊನೆಗೆ ಭಾನುವಾರ ಒಬ್ಬರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುತ್ತಾರೆ. ಆದರೆ ಈ ವಾರ ಇದೆಲ್ಲ ನಡೆಯುವುದಿಲ್ಲ ಎನ್ನಲಾಗುತ್ತಿದೆ.

ಶನಿವಾರ ಅಂದರೆ ಡಿಸೆಂಬರ್ 23ರಂದು ಕಿಚ್ಚು ಸುದೀಪ್ ಮುಂದಾಳತ್ವದಲ್ಲಿ ನಡೆಯುತ್ತಿರುವ ಸಿಸಿಎಲ್ ಪ್ರಾರಂಭವಾಗುತ್ತಿದೆ. ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಸೇರಿದಂತೆ ಚಿತ್ರರಂಗ ಹಾಗೂ ಕ್ರಿಕೆಟ್ ಲೋಕದ ಹಲವು ತಾರೆಗಳು ಆಗಮಿಸಲಿದ್ದಾರೆ. ಹಾಗಾಗಿ ಶುಕ್ರವಾರದಿಂದಲೇ ಸುದೀಪ್ ಬಹಳ ಬ್ಯುಸಿಯಾಗಿರಲಿದ್ದಾರೆ ಎನ್ನಲಾಗುತ್ತಿದ್ದು, ಬಿಗ್​ಬಾಸ್ ಶೂಟಿಂಗ್​ಗೆ ಗೈರಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಶುಕ್ರವಾರವೇ ಚಿತ್ರೀಕರಣವನ್ನು ಮುಗಿಸಿರುವ ಸಾಧ್ಯೆತೆಯೂ ಇದೆಯಾದರೂ, ಶುಕ್ರವಾರದ ಸಂಜೆ ಲೈವ್​ನಲ್ಲಿ ಸ್ಪರ್ಧಿಗಳು ಸಾಮಾನ್ಯ ಧಿರಿಸಿನಲ್ಲಿಯೇ ಇದ್ದಿದ್ದು ಕಂಡು ಬಂದಿತು, ಅಲ್ಲದೆ ಜೈಲು ಸೇರಿರುವ ಸಂಗೀತಾ ಇನ್ನೂ ಜೈಲಿನಲ್ಲಿಯೇ ಇದ್ದ ದೃಶ್ಯಗಳನ್ನು ಸಹ ಲೈವ್​​ನಲ್ಲಿ ತೋರಿಸಲಾಗಿದೆ. ಹಾಗಾಗಿ ಶುಕ್ರವಾರ ಸುದೀಪ್ ಎಪಿಸೋಡ್​ನ ಚಿತ್ರೀಕರಣ ನಡೆದಿರುವುದು ಅನುಮಾನ.

ಸುದೀಪ್ ಸಾಮಾನ್ಯವಾಗಿ ವೀಕೆಂಡ್ ಎಪಿಸೋಡ್​ಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಬೇರೆ ಭಾಷೆಗಳಲ್ಲಿ ಮುಖ್ಯ ನಿರೂಪಕರು ಗೈರಾದಾಗ ಮತ್ತೊಬ್ಬ ಅತಿಥಿ ನಟರನ್ನು ಕರೆತಂದು ನಿರೂಪಣೆ ಮಾಡಿಸಿದ್ದಿದೆ. ಆದರೆ ಕನ್ನಡ ಬಿಗ್​ಬಾಸ್​ನಲ್ಲಿ ಈವರೆಗೆ ಹಾಗಾಗಿಲ್ಲ. ಹಾಗಾಗಿ ಈ ಬಾರಿ ಸುದೀಪ್ ಇಲ್ಲದೆ ವೀಕೆಂಡ್ ಎಪಿಸೋಡ್ ಹೇಗೆ ನಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ