ಅರಸಿಗೆ ಕಣ್ಣೀರು ಹಾಕಿಸಿದ ಸೇವಕರು, ಅಶ್ವಿನಿ ಗೌಡ ಅತ್ತಿದ್ದು ಏಕೆ?
Bigg Boss Kannada season 12: ಬಿಗ್ಬಾಸ್ ಮನೆಯಲ್ಲಿ ಪ್ರಸ್ತುತ 18 ಮಂದಿ ಸದಸ್ಯರಿದ್ದಾರೆ. ಎಲ್ಲರೂ ಒಬ್ಬರಿಗಿಂತಲೂ ಒಬ್ಬರು ಭಿನ್ನ. ಕಳೆದೊಂದು ವಾರದ ಆಟ ಗಮನಿಸಿದರೆ ಅಶ್ವಿನಿ ಗೌಡ, ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದರು. ರಾಜಮಾತೆಯಾಗಿ ಚೆನ್ನಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆದರೆ ಅವರು ಸಹ ನಿನ್ನೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಅವರಿಗೆ ಕಣ್ಣೀರು ಹಾಕಿಸಿದ್ದು ಯಾರು?

ಬಿಗ್ಬಾಸ್ ಕನ್ನಡ ಸೀಸನ್ 12ರ ಮೊದಲ ವಾರಾಂತ್ಯದ ಪಂಚಾಯಿತಿ ಬಳಿಕ ಮನೆಯ ಸ್ಪಷ್ಟವಾಗಿ ಒಡೆದು ಎರಡು ಹೋಳಾಗಿದೆ. ಜಂಟಿಗಳು ಹಾಗೂ ಒಂಟಿಗಳು ಎಂದು ಮೊದಲೇ ಸ್ಪರ್ಧಿಗಳನ್ನು ಬಿಗ್ಬಾಸ್ ವಿಂಗಡಿಸಿದ್ದರು. ಆದರೆ ವಾರದ ಪಂಚಾಯಿತಿ ಬಳಿಕ ನಡೆದ ಕೆಲವು ಘಟನೆಗಳು ಎರಡು ಗುಂಪುಗಳನ್ನು ಸ್ಪಷ್ಟವಾಗಿ ಬೇರ್ಪಡಿಸಿದೆ. ಎರಡೂ ಗುಂಪುಗಳ ನಡುವೆ ಜೋರಾದ ವಾಗ್ದಾಳಿ, ಜಗಳಗಳು ಸಹ ನಡೆದಿವೆ. ಕಳೆದೊಂದು ವಾರದ ಆಟ ಗಮನಿಸಿದರೆ ಅಶ್ವಿನಿ ಗೌಡ, ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೆ ಅವರು ಸಹ ನಿನ್ನೆ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಅವರಿಗೆ ಕಣ್ಣೀರು ಹಾಕಿಸಿದ್ದು ಯಾರು?
ಬಿಗ್ಬಾಸ್ ಮನೆಯಲ್ಲಿ ಜಂಟಿಗಳು-ಒಂಟಿಗಳ ನಡುವೆ ಮನೆ ಗೆಲಸದ ವಿಷಯಕ್ಕೆ ತಿಕ್ಕಾಟ ಆರಂಭವಾಗಿದೆ. ಜಂಟಿಗಳು ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಒಂಟಿಗಳಿಗೆ ಬಿಗ್ಬಾಸ್ ಶಿಕ್ಷೆ ನೀಡಿದ್ದಾರೆ. ಆದರೆ ಇದರಿಂದ ಸಿಟ್ಟಿಗೆದ್ದ ಒಂಟಿಗಳು ಜಂಟಿಗಳ ಶಿಸ್ತು ಉಲ್ಲಂಘನೆ ಇನ್ನಿತರೆ ವಿಷಯಗಳಿಗೆ ಅವರೊಟ್ಟಿಗೆ ಜಗಳವಾಡಿದರು. ಬಳಿಕ ಕೆಲಸದ ವಿಷಯ ಬಂದಾಗ ಜಂಟಿಗಳು ತಾವು ಅಡುಗೆ ಮಾಡುವುದಿಲ್ಲ ಇನ್ನಿತರೆ ಕೆಲಸಗಳನ್ನು ಮಾಡುವುದಿಲ್ಲವೆಂದು ಹೇಳಿದರು.
ಈ ಬಗ್ಗೆ ಜೋರಾದ ವಾಗ್ವಾದ ನಡೆಯಿತು. ವಾಗ್ವಾದದ ಮುನ್ನೆಲೆಯಲ್ಲಿ ಇದ್ದಿದ್ದ ಅಶ್ವಿನಿ ಗೌಡ, ಜಾನ್ಹವಿ ಮತ್ತು ಜಂಟಿಗಳ ಕಡೆಯಿಂದ ಮಂಜು ಭಾಷಿಣಿ. ಜೋರು ಜಗಳ ನಡೆಯುತ್ತಿದ್ದ ಸಮಯದಲ್ಲಿಯೂ ಸಹ ಗಿಲ್ಲಿ ಮಾತ್ರ ತಮಾಷೆ ಮಾಡುತ್ತಾ ಆರಾಮವಾಗಿದ್ದ. ಅಶ್ವಿನಿ ಗೌಡ ಅವರು ಜಂಟಿಗಳೊಟ್ಟಿಗೆ ಜಗಳವಾಡುತ್ತಿದ್ದ ಸಮಯದಲ್ಲಿ ಮಂಜು ಭಾಷಿಣಿ ಅವರು ‘ಅಯ್ಯೋ ನನಗೆ ಹುಷಾರಿಲ್ಲ’ ಎಂದು ಕೆಮ್ಮಿದಂತೆ ನಟಿಸಿದರು ಇದು ಅಶ್ವಿನಿ ಗೌಡಗೆ ಬೇಸರ ತರಿಸಿತು.
ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಿರುತೆರೆ ನಟಿ ಮಂಜು ಭಾಷಿಣಿ
ಆ ನಂತರ ಧನುಶ್ ಜೊತೆ ಮಾತನಾಡುತ್ತಾ ಅಶ್ವಿನಿ ಅವರು, ‘ನನಗೆ ಕಳೆದ ಮೂರು ತಿಂಗಳಿನಿಂದಲೂ ಹುಷಾರಿಲ್ಲ. ಪ್ರತಿ ರಾತ್ರಿ ನಾನು ಕೆಮ್ಮುತ್ತಿದ್ದೇನೆ. ನನ್ನ ಆರೋಗ್ಯದ ವಿಷಯವನ್ನು ಇವರು ತಮಾಷೆ ಮಾಡುತ್ತಾರೆ ಎಂದು ಹೇಳುತ್ತಾ ಅತ್ತೇ ಬಿಟ್ಟರು. ಬಳಿಕ ಕಾಕ್ರೂಚ್ ಸುಧಿ, ಧನುಶ್ ಇನ್ನಿತರರು ಅವರಿಗೆ ಸಮಾಧಾನ ಮಾಡಿದರು.
ಬಳಿಕ ಮಂಜು ಭಾಷಿಣಿ ಸಹ ಬಂದು, ಅಶ್ವಿನಿ ಅವರಲ್ಲಿ ನೇರವಾಗಿಯೇ ಕ್ಷಮೆ ಕೇಳಿದರು. ನಾನು ತಮಾಷೆ ಮಾಡಿದೆ ಆದರೆ ನಿಮಗೆ ನೋವುಂಟು ಮಾಡಬೇಕು ಎಂಬುದು ನನ್ನ ಉದ್ದೇಶ ಆಗಿರಲಿಲ್ಲ. ನಿಮಗೆ ನೋವುಂಟು ಮಾಡುವ ಉದ್ದೇಶ ನನಗೆ ಇದ್ದಿದ್ದರೆ ನಿಮಗೆ ಆರೋಗ್ಯ ಸರಿಯಿಲ್ಲ ಎಂದಾಗ ನಾನು ಸೇವೆ ಮಾಡುತ್ತಿರಲಿಲ್ಲ ಎಂದರು. ಆದರೆ ಅಶ್ವಿನಿ, ಮಂಜು ಭಾಷಿಣಿ ಅವರ ಕ್ಷಮೆಯನ್ನು ಸ್ವೀಕರಿಸಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




