ಬಹುತೇಕ ಘಟಾನುಘಟಿಗಳು ನಾಮಿನೇಟ್; ಈ ವಾರ ಡಬಲ್ ಎಲಿಮಿನೇಷನ್?
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಹೆಚ್ಚಿದೆ. ಹಿಂದಿನ ಸೀಸನ್‌ಗಳಲ್ಲಿ ಡಬಲ್ ಎಲಿಮಿನೇಷನ್ ಪದ್ಧತಿ ಇತ್ತು. ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಮೊದಲಾದವರು ನಾಮಿನೇಟ್ ಆಗಿದ್ದಾರೆ. ಈ ವಾರದ ಡಬಲ್ ಎಲಿಮಿನೇಷನ್ ನಡೆದರೆ ಯಾರೆಲ್ಲ ಹೊರಗೆ ಹೋಗುತ್ತಾರೆ ಎಂಬುದು ಕುತೂಹಲಕಾರಿ ವಿಷಯ ಆಗಿದೆ.
ಕನ್ನಡ ಬಿಗ್ ಬಾಸ್ನ ಪ್ರತಿ ಸೀಸನ್ನಲ್ಲಿ ಒಮ್ಮೆಯಾದರೂ ಡಬಲ್ ಎಲಿಮಿನೇಷನ್ ನಡೆಸಲಾಗುತ್ತದೆ. ಈ ರೀತಿ ಡಬಲ್ ಎಲಿಮಿನೇಷನ್ ನಡೆಸುವಾಗ ಅದರ ಹಿಂದಿನ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಕಳೆದ ವಾರ ಯಾವುದೇ ಕಾರಣ ನೀಡದೆ ಎಲಿಮಿನೇಷನ್ ನಡೆಸಿಲ್ಲ. ಇದು ಸಾಕಷ್ಟು ಅನುಮಾನ ಮೂಡಿಸಿದೆ. ಈ ವಾರ ಡಬಲ್ ಎಲಿಮಿನೇಷನ್ ನಡೆಯೋದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭಿನ್ನವಾಗಿ ನಾಮಿನೇಷನ್ ನಡೆಸಲಾಗಿದೆ. ಕಳೆದ ಸೀಸನ್ನ ಸ್ಪರ್ಧಿಗಳು ಬಂದು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಕಾರ್ತಿಕ್ ಮಹೇಶ್, ನಮ್ರತಾ ಗೌಡ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್ ಮೊದಲಾದವರು ದೊಡ್ಮನೆ ಒಳಗೆ ಬಂದಿದ್ದರು. ಅವರುಗಳ ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
ಬಿಗ್ ಬಾಸ್ ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ, ಚೈತ್ರಾ ಹಾಗೂ ಮೋಕ್ಷಿತಾ ನಾಮಿನೇಟ್ ಲಿಸ್ಟ್ನಲ್ಲಿ ಇದ್ದಾರೆ. ಈ ಪೈಕಿ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಧನರಾಜ್, ಶಿಶಿರ್ ಹಾಗೂ ಚೈತ್ರಾಗೆ ಹೆಚ್ಚಿನ ಭಯ ಇದೆ.
ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದೇ ಎನ್ನುವ ಪ್ರಶ್ನೆಯೂ ಕಾಡಿದೆ. ಸದ್ಯ ದೊಡ್ಮನೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಎಲಿಮಿನೇಷನ್ ನಡೆದರೆ ದೊಡ್ಮನೆಯ ಸ್ಪರ್ಧಿಗಳ ಸಂಖ್ಯೆ 10ಕ್ಕೆ ಇಳಿಕೆ ಆಗಲಿದೆ. ಆ ಬಳಿಕ ಆಟ ಮತ್ತಷ್ಟು ದುರ್ಗಮ ಆಗಲಿದೆ.
ಇದನ್ನೂ ಓದಿ: ಸ್ವಿಮ್ಮಿಂಗ್ಪೂಲ್ನಲ್ಲಿ ಬಿದ್ದ ಐಶ್ವರ್ಯಾನ ರಕ್ಷಿಸಿದ ತ್ರಿವಿಕ್ರಂ; ಉರಿದು ಹೋದ ಭವ್ಯಾ ಎಕ್ಸ್ಪ್ರೆಷನ್ ನೋಡಿ
ಐಶ್ವರ್ಯಾ ಅವರದ್ದು ಅದೃಷ್ಟ ಎಂದೇ ಹೇಳಬಹುದು. ಎರಡು ವಾರಗಳ ಹಿಂದೆ ಅವರು ಎಲಿಮಿನೇಟ್ ಆಗೋದು ಬಹುತೇಕ ಖಚಿತ ಆಗಿತ್ತು. ಆದರೆ, ಅವರು ಜಸ್ಟ್ ಮಿಸ್ ಆದರು. ಶೋಭಾ ಶೆಟ್ಟಿ ಹೊರಕ್ಕೆ ಹೋಗಿ ಇವರನ್ನು ಉಳಿಸಿದರು. ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರ ಅವರು ನಾಮಿನೇಟ್ ಆಗಿಯೇ ಇಲ್ಲ. ಹೀಗಾಗಿ, ಅವರು ಮೂರು ವಾರ ಹೆಚ್ಚುವರಿಯಾಗು ಬಿಗ್ ಬಾಸ್ ಮನೆಯಲ್ಲಿ ಮುಂದುವರಿಯೋದು ಖಚಿತವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Wed, 11 December 24