ಹನುಮಂತನಿಗೆ ಪ್ರ್ಯಾಂಕ್ ಮಾಡಿದ ಬಿಗ್ ಬಾಸ್; ಎಲ್ಲರೂ ಶಾಕ್ 

| Updated By: ರಾಜೇಶ್ ದುಗ್ಗುಮನೆ

Updated on: Nov 08, 2024 | 7:05 AM

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಹನುಮಂತ, ತಮ್ಮ ಮುಗ್ಧತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಕ್ಯಾಪ್ಟನ್ ಆಗಿದ್ದರೂ ಕ್ಯಾಪ್ಟನ್ ರೂಂ ಬಳಸದ ಕಾರಣ, ಬಿಗ್ ಬಾಸ್ ಇದೇ ವಿಚಾರವನ್ನು ಪ್ರಾಂಕ್ ಮಾಡಿದರು.

ಹನುಮಂತನಿಗೆ ಪ್ರ್ಯಾಂಕ್ ಮಾಡಿದ ಬಿಗ್ ಬಾಸ್; ಎಲ್ಲರೂ ಶಾಕ್ 
ಬಿಗ್ ಬಾಸ್
Follow us on

ದೊಡ್ಮನೆ ಆಟದಲ್ಲಿ ಸಾಮಾನ್ಯವಾಗಿ ಎಲ್ಲ ಸ್ಪರ್ಧಿಗಳು ಬಿಗ್ ಬಾಸ್ ಬಳಿ ಮನವಿ ಮಾಡುತ್ತಾರೆ. ಬಿಗ್ ಬಾಸ್ ಇದೊಂದು ನಡೆಸಿಕೊಡಿ, ಅದೊಂದು ನಡೆಸಿಕೊಡಿ ಎಂದು ಮನವಿ ಮಾಡುತ್ತಾರೆ. ಆದರೆ, ಈ ಬಾರಿ ಅಚ್ಚರಿಯ ಘಟನೆ ಒಂದು ನಡೆದಿದೆ. ಬಿಗ್ ಬಾಸ್ ಕಡೆಯಿಂದ ಹನುಮಂತನಿಗೆ ವಿಶೇಷ ಮನವಿ ಬಂದಿದೆ. ಇದನ್ನು ಕೇಳಿ ಎಲ್ಲರಿಗೂ ಅಚ್ಚರಿ ಆಗಿತ್ತು. ಆ ಬಳಿಕ ಇದು ಪ್ರ್ಯಾಂಕ್ ಅನ್ನೋದು ಗೊತ್ತಾಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ವೈಲ್ಡ್​ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಹನುಮಂತ. ತಮ್ಮ ಮುಗ್ಧತೆಯಿಂದ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಆಟ ಅನೇಕರಿಗೆ ಇಷ್ಟ ಆಗುತ್ತಿದೆ. ಅವರು ಅಂದುಕೊಂಡಷ್ಟು ಮುಗ್ಧರಲ್ಲ ಎಂದು ಕೆಲವರು ಕೊಂಕು ತೆಗೆದಿದ್ದು ಇದೆ. ಆದರೆ, ಅವರು ಗೇಮ್​​ ಎನ್ನುವ ವಿಚಾರ ಬಂದಾಗ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಅವರ ಒಂದು ನಡೆ ಬಿಗ್ ಬಾಸ್​ಗೆ ಇಷ್ಟವಾಗಿಲ್ಲ. ಇದನ್ನೇ ಇಟ್ಟುಕೊಂಡು ಬಿಗ್ ಬಾಸ್ ಪ್ರ್ಯಾಂಕ್ ಮಾಡಿದ್ದಾರೆ.

ಹನುಮಂತ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಸಾಮಾನ್ಯವಾಗಿ ಕ್ಯಾಪ್ಟನ್ ಆದ ಬಳಿಕ ಎಲ್ಲರೂ ಕ್ಯಾಪ್ಟನ್ ರೂಂ ಬಳಕೆ ಮಾಡುತ್ತಾರೆ. ಆದರೆ, ಹನುಮಂತ ಇದಕ್ಕೆ ಭಿನ್ನ. ಅವರು ಕ್ಯಾಪ್ಟನ್ ರೂಂ ಬಳಕೆ ಮಾಡುತ್ತಿರಲಿಲ್ಲ. ರೋಂ ಅಷ್ಟೊಂದು ಐಷಾರಾಮಿ ಆಗಿ ಇದ್ದರೂ ಅವರು ಸೋಫಾ ಬಳಿ ಬಂದು ಮಲಗುತ್ತಿದ್ದರು.

ಈ ಕಾರಣಕ್ಕೆ ಬಿಗ್ ಬಾಸ್ ಒಂದು ವಿಶೇಷ ಮನವಿ ಮಾಡಿದರು. ‘ಹನುಮಂತ ನಿಮ್ಮ ಕ್ಯಾಪ್ಟನ್ಸಿ ಅವಧಿ ಮುಗಿದಿದೆ’ ಎಂದು ಬಿಗ್ ಬಾಸ್ ಹೇಳಿದರು. ‘ಬಿಗ್ ಬಾಸ್ ಒಂದು ಫೋಟೋ ತೆಗೆಯಿರಿ ಪೋಸ್ ಕೊಡ್ತೀನಿ’ ಎಂದರು ಹನುಮಂತ. ‘ನೀವು ಕ್ಯಾಪ್ಟನ್ ಆದಾಗ ಗಂಭೀರ ನಿರ್ಧಾರ ತೆಗೆದುಕೊಂಡಿದ್ದಿರಿ. ಕ್ಯಾಪ್ಟನ್ ರೂಂನಲ್ಲಿ ಲುಂಗಿ ಇಟ್ಟಿದ್ದೀರಿ. ಕ್ಯಾಪ್ಟನ್​ ರೂಂನ ಒಂದೇ ಒಂದು ದಿನ ಬಳಸಿಲ್ಲ. ಇಂದು ರಾತ್ರಿ ನಿಮಗೋಸ್ಕರ ಕ್ಯಾಪ್ಟನ್​ ರೂಂ ತೆರೆದಿರುತ್ತದೆ. ಅದನ್ನು ಬಳಸಿ. ಭಯವಾದರೆ ಹುಲಿಯನ್ನು (ಧನರಾಜ್) ಕರೆದುಕೊಂಡು ಹೋಗಿ’ ಎಂದರು ಬಿಗ್ ಬಾಸ್. ಆಗ ಧನರಾಜ್ ಹಾಗೂ ಹನುಮಂತ ಖುಷಿಯಿಂದ ಕುಣಿದರು.

ಇದನ್ನೂ ಓದಿ: ಈ ವಾರ ಬಿಗ್ ಬಾಸ್​ನಲ್ಲಿ 7 ಮಂದಿ ನಾಮಿನೇಟ್; ಯಾರಿಗೆ ಕಾದಿದೆ ಗೇಟ್​ಪಾಸ್​?

ಆ ಬಳಿಕ ‘ಹೇಗಿತ್ತು ಜೋಕ್’ ಎಂದು ಬಿಗ್ ಬಾಸ್ ಕೇಳಿದಾಗ ಎಲ್ಲರೂ ನಕ್ಕರು. ಇದು ಪ್ರ್ಯಾಂಕ್ ಅನ್ನೋದು ಆ ಬಳಿಕ ಗೊತ್ತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:03 am, Fri, 8 November 24