AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅನ್ನ ತಿನ್ನುವಾಗಲಾದ್ರೂ ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ’: ಕಿರಣ್ ಮೇಲೆ ಸ್ಪರ್ಧಿಗಳು ಗರಂ

ಮಾತಿನ ಕಾರಣದಿಂದಲೇ ಬಿಗ್ ಬಾಸ್ ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್​ಗಿಂತಲೂ ಹೆಚ್ಚಾಗಿ ಮಾತಿನಿಂದಲೇ ಕಿರಿಕ್ ಆಗುತ್ತಿದೆ. ಕಿರಣ್ ಶಾಸ್ತ್ರಿ ಮಾತುಗಳಿಗೆ ಪ್ರಥಮಾ ಪ್ರಸಾದ್ ಅವರು ಗರಂ ಆಗಿದ್ದಾರೆ. ಸರಿಯಾಗಿ ಮಾತನಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಕಿರಣ್ ಶಾಸ್ತ್ರಿ ತಪ್ಪು ತಿದ್ದಿಕೊಂಡಿಲ್ಲ.

‘ಅನ್ನ ತಿನ್ನುವಾಗಲಾದ್ರೂ ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ’: ಕಿರಣ್ ಮೇಲೆ ಸ್ಪರ್ಧಿಗಳು ಗರಂ
Bigg Boss Kannada Season 13Image Credit source: Colors Kannada
ಮದನ್​ ಕುಮಾರ್​
|

Updated on: Sep 09, 2026 | 10:43 PM

Share

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರವಲ್ಲದೇ ಸ್ಪರ್ಧಿಗಳ ನಡವಳಿಕೆ ಹಾಗೂ ಮಾತು ಕೂಡ ಬಹಳ ಮುಖ್ಯ ಆಗುತ್ತದೆ. ಕೆಲವು ಸ್ಪರ್ಧಿಗಳು ಮಾತನಾಡುತ್ತಿರುವ ರೀತಿಯ ಬಗ್ಗೆ ದೊಡ್ಮನೆಯಲ್ಲಿ ಅಸಮಾಧಾನ ಶುರುವಾಗಿದೆ. ಕಾಮನರ್ ಆಗಿ ಬಂದಿರುವ ಕಿರಣ್ ಶಾಸ್ತ್ರಿ ಅವರು ಆಡುತ್ತಿರುವ ಮಾತುಗಳಿಂದ ವೈಷ್ಣವಿ, ಪ್ರಥಮಾ ಪ್ರಸಾದ್, ಅವಿನಾಶ್ ಮುಂತಾದ ಸ್ಪರ್ಧಿಗಳಿಗೆ ಕಿರಿಕಿರಿ ಆಗಿದೆ. ಆದ್ದರಿಂದ ಸರಿಯಾಗಿ ಮಾತನಾಡಿ ಎಂದು ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಕಿರಣ್ ಶಾಸ್ತ್ರಿ ಇನ್ನೂ ಪೂರ್ತಿಯಾಗಿ ಬಿಗ್ ಬಾಸ್ ಮನೆಯ ಒಳಗೆ ಕಾಲಿಡುವ ಅರ್ಹತೆ ಪಡೆದಿಲ್ಲ. ವಿಮಾನಯಾನದಲ್ಲೇ ಅವರು ಉಳಿದುಕೊಂಡಿದ್ದಾರೆ. ಅವರ ಜೊತೆ ಪ್ರಥಮಾ ಪ್ರಸಾದ್, ಸೌಂದರ್ಯಾ ಶೆಟ್ಟಿ, ಅವಿನಾಶ್, ಧನುಷ್, ಲಿಖಿತ್ ಮುಂತಾದವರು ಕೂಡ ಇದ್ದಾರೆ. ಬುಧವಾರದ (ಸೆಪ್ಟೆಂಬರ್ 9) ಸಂಚಿಕೆಯಲ್ಲಿ ಮಾತಿನ ಚಕಮಕಿ ಉಂಟಾಗಿದೆ.

ಊಟ ಮಾಡುವ ಸಂದರ್ಭದಲ್ಲಿ ಕಿರಣ್ ಶಾಸ್ತ್ರಿಗೆ ಬುದ್ಧಿಮಾತು ಹೇಳಿದ್ದಾರೆ. ಆದರೆ ಅದನ್ನು ಕೇಳಿಸಿಕೊಳ್ಳಲು ಕಿರಣ್ ರೆಡಿ ಇರಲಿಲ್ಲ. ಆಗ ಅವರು ಊಟ ಮಾಡುತ್ತಿದ್ದರು. ‘ಅನ್ನ ತಿನ್ನುವಾಗಲಾದ್ರೂ ನಿಮ್ಮ ಬಾಯಲ್ಲಿ ಒಳ್ಳೆಯ ಮಾತು ಬರಲಿ’ ಎಂದು ಕಿರಣ್ ಶಾಸ್ತ್ರಿಗೆ ಪ್ರಥಮಾ ಅವರು ಖಡಕ್ ಆಗಿ ಹೇಳಿದರು. ಆದರೂ ಕೂಡ ಏನೂ ಉಪಯೋಗ ಆಗಲಿಲ್ಲ.

‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭ ಆದ ಮೊದಲ ದಿನವೇ ಪ್ರಥಮಾ ಪ್ರಸಾದ್ ಮತ್ತು ಕಿರಣ್ ಶಾಸ್ತ್ರಿ ಅವರ ನಡುವೆ ಕಿರಿಕ್ ಆಗಿತ್ತು. ದೊಡ್ಮನೆಗೆ ಕಾಲಿಡುತ್ತಿದ್ದಂತೆಯೇ ಪ್ರಥಮಾ ಅವರನ್ನು ಆಂಟಿ ಎಂದು ಕರೆಯುವ ಮೂಲಕ ಕಿರಣ್ ಅವರು ಹದ್ದು ಮೀರಿದ್ದರು. ಆ ರೀತಿ ಕರೆದಿದ್ದನ್ನು ಪ್ರಥಮಾ ಪ್ರಸಾದ್ ಅವರು ಕೂಡಲೇ ಖಂಡಿಸಿದ್ದರು.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್

ಈಗ ಕಿರಣ್ ಅವರು ಪ್ರಥಮಾ ಪ್ರಸಾದ್ ಅವರನ್ನು ಅಮ್ಮ ಎಂದು ಕರೆಯಲು ಶುರು ಮಾಡಿದ್ದಾರೆ. ‘ಆ ರೀತಿ ಕೂಡ ಕರೆಯಬೇಡಿ. ಪ್ರಥಮಾ ಮೇಡಂ ಅಥವಾ ಪ್ರಥಮಾ ಅಕ್ಕ ಅಂತ ಕರೆಯಿರಿ’ ಎಂದು ಪ್ರಥಮಾ ಅವರು ಸೂಚನೆ ನೀಡಿದ್ದಾರೆ. ಆದರೆ ಅದನ್ನು ಕಿರಣ್ ಒಪ್ಪಿಕೊಂಡಿಲ್ಲ. ಬೇಕಂತಲೇ ಅಮ್ಮ ಎಂದು ಕರೆಯುವುದನ್ನು ಮುಂದುವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್