ಬಿಗ್ ಬಾಸ್ (Bigg Boss) ಮನೆಗೆ ವೈಲ್ಡ್ ಕಾರ್ಡ್ ಮೂಲಕ ಯಾರನ್ನಾದರೂ ಕರೆ ತರುವುದು ವಾಡಿಕೆ. ಸದ್ಯ, ‘ಬಿಗ್ ಬಾಸ್ ಕನ್ನಡ ಸೀಸನ್ 9’ 57 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈಗಾಗಲೇ ಅರ್ಧ ಶೋ ಪೂರ್ಣಗೊಂಡಿದೆ. ಇನ್ನು ಒಂದೂವರೆ ತಿಂಗಳಲ್ಲಿ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ 11 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ನಡೆಯುತ್ತಿದೆ. ಸ್ಪರ್ಧಿಗಳು ಕಡಿಮೆ ಆದಂತೆಲ್ಲ ಆಟ ಕಠಿಣ ಆಗುತ್ತಿದೆ. ಆದಾಗ್ಯೂ, ವೈಲ್ಡ್ ಕಾರ್ಡ್ನ ಯಾವುದೇ ಸೂಚನೆ ಇಲ್ಲ. ಈಗ ಬಿಗ್ ಬಾಸ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ವೀಕ್ಷಕರಿಗೆ ಕುತೂಹಲ ಮೂಡಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಪ್ರತಿ ಸೀಸನ್ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇದ್ದೇ ಇರುತ್ತದೆ. ಕಳೆದ ಬಾರಿ ಒಂದೇ ವಾರ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಎಂಟ್ರಿ ಪಡೆದಿದ್ದರು. ಈ ವರ್ಷ ಅರ್ಧ ಸೀಸನ್ ಮುಗಿದರೂ ಯಾರೊಬ್ಬರೂ ಬಿಗ್ ಬಾಸ್ ಮನೆ ಒಳಗೆ ಬಂದಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ವೀಕ್ಷಕರು ಕಾಡುತ್ತಿದೆ.
ಪ್ರತಿ ಸೀಸನ್ನಲ್ಲಿ ಸಾಮಾನ್ಯವಾಗಿ 16 ಸ್ಪರ್ಧಿಗಳು ಮನೆ ಒಳಗೆ ಹೋಗುತ್ತಾರೆ. ಆ ಪೈಕಿ ಎಲ್ಲರೂ ಹೊಸಬರೇ ಆಗಿರುತ್ತಿದ್ದರು. ಆದರೆ, ಈ ಬಾರಿ 18 ಸ್ಪರ್ಧಿಗಳು ಮನೆ ಒಳಗೆ ಎಂಟ್ರಿ ಪಡೆದಿದ್ದರು. ಈ ಪೈಕಿ 9 ಮಂದಿ ಮಾತ್ರ ಹೊಸಬರಾಗಿದ್ದರು. ಇನ್ನು, 9 ಮಂದಿ ಹಳೆ ಸ್ಪರ್ಧಿಗಳೇ ಇದ್ದರು. ಈ ಕಾರಣಕ್ಕೆ ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ಯಾವುದೇ ವೈಲ್ಡ್ ಕಾರ್ಡ್ ಎಂಟ್ರಿ ಇಲ್ಲದೆ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: Deepika Das: ಬಿಗ್ ಬಾಸ್ನಿಂದ ದೀಪಿಕಾ ದಾಸ್ ಎಲಿಮಿನೇಟ್; 2ನೇ ಚಾನ್ಸ್ನಲ್ಲೂ ಮುಗ್ಗರಿಸಿದ ಸೀರಿಯಲ್ ನಟಿ
ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ದಿವ್ಯಾ ಉರುಡುಗ, ವಿನೋದ್ ಗೊಬ್ಬರಗಾಲ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ, ಅಮೂಲ್ಯ ಗೌಡ, ಅನುಪಮಾ ಗೌಡ, ಕಾವ್ಯಾ ಗೌಡ ಸದ್ಯ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಒಂದೊಮ್ಮೆ ವೈಲ್ಡ್ ಕಾರ್ಡ್ ಮೂಲಕ ಯಾರಾದರೂ ಎಂಟ್ರಿ ಪಡೆದರೆ ಆಟದ ಮಜ ಮತ್ತಷ್ಟು ಹೆಚ್ಚಲಿದೆ.