‘ಬಿಗ್ ಬಾಸ್’ ಹೆಸರನ್ನು ದುರ್ಬಳಕೆ ಮಾಡಿಕೊಂಡ ರಾಕೇಶ್​-ಅನುಪಮಾ; ಎಲ್ಲರಿಗೂ ಶಿಕ್ಷೆ

ಬಿಗ್ ಬಾಸ್ ಆದೇಶ ಕೊಟ್ಟರೆ ಮಾತ್ರ ಅದನ್ನು ಹೇಳಬೇಕು. ಇಲ್ಲವಾದಲ್ಲಿ ಸುಖಾಸುಮ್ಮನೆ ಬಿಗ್ ಬಾಸ್ ಹೆಸರನ್ನು ಎಳೆದು ತರುವಂತಿಲ್ಲ. ಕಳೆದ ಸೀಸನ್​ನಲ್ಲಿ ಸ್ಪರ್ಧಿಗಳು ಇದೇ ರೀತಿ ಮಾಡಿ ತೊಂದರೆಗೆ ಸಿಲುಕಿದ್ದರು. ಈ ಸೀಸನ್​ನಲ್ಲಿ ಅದು ಪುನರಾವರ್ತನೆ ಆಗಿದೆ.

‘ಬಿಗ್ ಬಾಸ್’ ಹೆಸರನ್ನು ದುರ್ಬಳಕೆ ಮಾಡಿಕೊಂಡ ರಾಕೇಶ್​-ಅನುಪಮಾ; ಎಲ್ಲರಿಗೂ ಶಿಕ್ಷೆ
Edited By:

Updated on: Oct 07, 2022 | 9:39 PM

ಬಿಗ್ ಬಾಸ್ (Bigg Boss) ಮನೆ ಅಕ್ಷರಶಃ ರಣರಂಗವಾಗಿದೆ. ರಾಕೇಶ್ ಅಡಿಗ (Rakesh Adiga) ಹಾಗೂ ಅನುಪಮಾ ಗೌಡ ಮಾಡಿದ ಪ್ರಾಂಕ್​ನಿಂದ ಅನೇಕರು ತೊಂದರೆಗೆ ಸಿಲುಕುವಂತಾಗಿದೆ. ಸುಖಾಸುಮ್ಮನೆ ಪ್ರ್ಯಾಂಕ್ ಆಗಿದ್ದರೆ ಬಿಗ್ ಬಾಸ್ ಬಿಟ್ಟು ಬಿಡುತ್ತಿದ್ದರೇನೋ. ಆದರೆ, ರಾಕೇಶ್ ಹಾಗೂ ಅನುಪಮಾ ಬಿಗ್ ಬಾಸ್ ಹೆಸರನ್ನೇ ದುರ್ಬಳಕೆ ಮಾಡಿಕೊಂಡಿದ್ದರು. ಬಿಗ್ ಬಾಸ್ ಹೆಸರಲ್ಲಿ ಸುಳ್ಳು ಹೇಳಿದ್ದರು. ಇದಕ್ಕೆ ತಕ್ಕ ಶಾಸ್ತಿ ಆಗಿದೆ. ಈ ವಿಚಾರ ಸದಾ ನೆನಪಿರುವಂತೆ ಮಾಡಲು ಬಿಗ್ ಬಾಸ್ ಶಿಕ್ಷೆ ನೀಡಿದ್ದಾರೆ. ಕೊನೆಯಲ್ಲಿ ಬಿಗ್​ ಬಾಸ್​ ಟ್ವಿಸ್ಟ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಆದೇಶ ಕೊಟ್ಟರೆ ಮಾತ್ರ ಅದನ್ನು ಹೇಳಬೇಕು. ಇಲ್ಲವಾದಲ್ಲಿ ಸುಖಾಸುಮ್ಮನೆ ಬಿಗ್ ಬಾಸ್ ಹೆಸರನ್ನು ಎಳೆದು ತರುವಂತಿಲ್ಲ. ಕಳೆದ ಸೀಸನ್​ನಲ್ಲಿ ಸ್ಪರ್ಧಿಗಳು ಇದೇ ರೀತಿ ಮಾಡಿ ತೊಂದರೆಗೆ ಸಿಲುಕಿದ್ದರು. ಈ ಸೀಸನ್​ನಲ್ಲಿ ಅದು ಪುನರಾವರ್ತನೆ ಆಗಿದೆ. ಈ ಕಾರಣಕ್ಕೆ ಬಿಗ್ ಬಾಸ್ ಕಡೆಯಿಂದ ಸ್ಪರ್ಧಿಗಳಿಗೆ ಶಾಕ್ ಆಗುವಂತಹ ಘೋಷಣೆ ಆಗಿದೆ.

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅನುಪಮಾ ಗೌಡ ನೇತೃತ್ವದ ‘ವಜ್ರಕಾಯ’ ತಂಡ ಗೆದ್ದಿತ್ತು. ಈ ತಂಡದ ರಾಕೇಶ್ ಹಾಗೂ ಅನುಪಮಾ ಪ್ರಾಂಕ್ ಮಾಡುವ ನಿರ್ಧಾರಕ್ಕೆ ಬಂದರು. ‘ಕ್ಯಾಪ್ಟನ್ಸಿ ಟಾಸ್ಕ್ ಆಡೋಕೆ ನಾಲ್ಕು ಜನರನ್ನು ಆಯ್ಕೆ ಮಾಡಲು ಬಿಗ್ ಬಾಸ್ ಹೇಳಿದ್ದಾರೆ. ಯಾರು ಈ ಟಾಸ್ಕ್​ ಆಡಬೇಕು ಎಂಬುದನ್ನು ಆಯ್ಕೆ ಮಾಡಲು ಎಲ್ಲರೂ ವೋಟ್ ಮಾಡಬೇಕು’ ಎಂದು ಅನುಪಮಾ ಗೌಡ ಅನೌನ್ಸ್ ಮಾಡಿದ್ದರು. ಗುರೂಜಿ ಅವರನ್ನು ಪ್ರ್ಯಾಂಕ್ ಮಾಡೋದು ಉದ್ದೇಶ ಆಗಿತ್ತು. ಹೀಗಾಗಿ, ಯಾರೊಬ್ಬರೂ ಗುರೂಜಿಗೆ ವೋಟ್ ಹಾಕಿಲ್ಲ.

ಇದನ್ನೂ ಓದಿ
ಬಿಗ್ ಬಾಸ್ ಮನೆ ಸೇರಿದ ಒಟಿಟಿ ಸ್ಪರ್ಧಿಗಳು; ಇವರಿಗಿರುವ ಸವಾಲುಗಳು ಒಂದೆರಡಲ್ಲ
Bigg Boss Kannada Season 9: ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಡುವ 8 ಮಂದಿ ಇವರೇ..!
‘ಬಿಗ್ ಬಾಸ್ ಕನ್ನಡ ಸೀಸನ್ 9’:​ ಮನೆ ಸೇರುವ 18 ಸ್ಪರ್ಧಿಗಳ ಹೆಸರು ಲೀಕ್? ಇಲ್ಲಿದೆ ಫುಲ್ ಲಿಸ್ಟ್
‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್​ಗೆ ರೆಡಿ ಆಯ್ತು ದೊಡ್ಮನೆ; ಮನೆಯಲ್ಲಿ ಏನೇನು ಬದಲಾವಣೆ?

ಬಿಗ್ ಬಾಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಬಿಗ್ ಬಾಸ್ ಕಡೆಯಿಂದ ಶಿಕ್ಷೆ ಘೋಷಣೆ ಆಗಿದೆ. ಮನೆಯವರು ಆಯ್ಕೆ ಮಾಡಿದ ನಾಲ್ಕು ಸ್ಪರ್ಧಿಗಳನ್ನು ಕ್ಯಾಪ್ಟನ್ಸಿ ಟಾಸ್ಕ್​ಗೆ ಬಿಗ್ ಬಾಸ್ ಫೈನಲ್ ಮಾಡಿದ್ದಾರೆ. ಇದರಿಂದ ಉಳಿದವರಿಗೆ ನಿರಾಸೆ ಆಗಿದೆ. ಈ ವಿಚಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ಆಗಿದೆ. ಅಲ್ಲದೆ, ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ಹೊಸ ಎಂಟ್ರಿ; ಅಷ್ಟಕ್ಕೂ ಯಾರಿವರು?

ಆರ್ಯವರ್ಧನ್​​ಗೆ ಟಾಸ್ಕ್​​ಗೆ ಅವಕಾಶ ಸಿಕ್ಕಿಲ್ಲ. ಇದಕ್ಕೆ ಅವರು ಕೂಗಾಡಿದ್ದಾರೆ. ಸಾನ್ಯಾ ಐಯ್ಯರ್ ‘ಆಗಿದ್ದು ಆಯ್ತು. ಸೆಲೆಕ್ಟ್​ ಆದವರಿಗೆ ಶುಭಾಶಯ’ ಎಂದರು. ಇದಕ್ಕೆ ಅರುಣ್ ಸಾಗರ್​ ಸಿಟ್ಟಾಗಿದ್ದಾರೆ. ‘ಕಳೆದವಾರ ನಿಯಮ ಬ್ರೇಕ್ ಮಾಡಿದ್ದಕ್ಕೆ ಕೂಗಾಡಿದಿರಿ. ಈಗ ನಿಮ್ಮ ಬಳಿ ಕೊಚ್ಚೆ ಬಂದಾಗ ಈ ರೀತಿ ಮಾತಾಡೋದು ಸರಿ ಅಲ್ಲ’ ಎಂದು ಎಚ್ಚರಿಕೆ ನೀಡಿದರು. ಕೊನೆಯಲ್ಲಿ ಇದು ಪ್ರ್ಯಾಂಕ್ ಎಂದು ಬಿಗ್ ಬಾಸ್ ಹೇಳಿದರು.

Loading...
Unable to load recommendations.
Follow Us