ಬಿಗ್ ಬಾಸ್ ವೀಕೆಂಡ್​ ಎಲಿಮಿನೇಷನ್​ನಲ್ಲಿ ಈ ಬಾರಿಯೂ ಇರಲಿದೆ ದೊಡ್ಡ ಟ್ವಿಸ್ಟ್​?

ಎರಡು ವಾರಗಳ ಹಿಂದೆ ಆರ್ಯವರ್ಧನ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಯಿತು. ಆ ವಾರ ಬಿಗ್ ಬಾಸ್​ನಲ್ಲಿ ವೋಟಿಂಗ್ ಲೈನ್​ಗಳು ಓಪನ್ ಇರಲಿಲ್ಲ. ಆರ್ಯವರ್ಧನ್ ಅವರು ಮನೆಯ ಬಾಗಿಲವರೆಗೆ ತೆರಳಿ ದೊಡ್ಮನೆಗೆ ಮರಳಿದರು.

ಬಿಗ್ ಬಾಸ್ ವೀಕೆಂಡ್​ ಎಲಿಮಿನೇಷನ್​ನಲ್ಲಿ ಈ ಬಾರಿಯೂ ಇರಲಿದೆ ದೊಡ್ಡ ಟ್ವಿಸ್ಟ್​?
ಸುದೀಪ್
Edited By:

Updated on: Nov 26, 2022 | 5:10 PM

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಸಾಕಷ್ಟು ಗಮನ ಸೆಳೆಯುತ್ತಿದೆ. ಕಳೆದ ಎರಡು ವಾರಗಳಿಂದ ಬಿಗ್ ಬಾಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ನೀಡಲಾಗುತ್ತಿದೆ. ಈಗಾಗಲೇ ಕಳೆದ ಎರಡು ವೀಕೆಂಡ್​ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಾಗೂ ಮನೆ ಮಂದಿಗೆ ಸರ್​ಪ್ರೈಸ್ ಸಿಕ್ಕಿದೆ. ಈ ವಾರ ಹೊಸ ಟ್ವಿಸ್ಟ್ ಕೊಡಲು ಬಿಗ್ ಬಾಸ್ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಆ ಟ್ವಿಸ್ಟ್ ಏನು ಎಂಬುದನ್ನು ನೋಡುವ ಕುತೂಹಲ ವೀಕ್ಷಕರಲ್ಲಿದೆ.

ಎರಡು ವಾರಗಳ ಹಿಂದೆ ಆರ್ಯವರ್ಧನ್ ಅವರನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಮಾಡಲಾಯಿತು. ಆ ವಾರ ಬಿಗ್ ಬಾಸ್​ನಲ್ಲಿ ವೋಟಿಂಗ್ ಲೈನ್​ಗಳು ಓಪನ್ ಇರಲಿಲ್ಲ. ಆರ್ಯವರ್ಧನ್ ಅವರು ಮನೆಯ ಬಾಗಿಲವರೆಗೆ ತೆರಳಿ ದೊಡ್ಮನೆಗೆ ಮರಳಿದರು. ಕಳೆದ ವಾರ ದೀಪಿಕಾ ದಾಸ್ ಅವರನ್ನು ಎಲಿಮಿನೇಟ್ ಮಾಡಲಾಯಿತು. ಅವರನ್ನು ಸೀಕ್ರೆಟ್ ರೂಂನಲ್ಲಿ ಇಡಲಾಗಿತ್ತು. ಈ ವಾರ ಮತ್ತೆ ಅವರು ಬಿಗ್ ಬಾಸ್ ಮನೆ ಸೇರಿದ್ದಾರೆ. ಎರಡು ವಾರದಲ್ಲಿ ಎರಡು ಸರ್​ಪ್ರೈಸ್ ನೀಡಲಾಗಿದೆ. ಈ ವಾರವೂ ಎಲಿಮಿನೇಷನ್ ವಿಚಾರದಲ್ಲಿ ಟ್ವಿಸ್ಟ್ ಇರಲಿದೆ ಎನ್ನಲಾಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಸಾಮಾನ್ಯವಾಗಿ ಪ್ರತಿ ವಾರ ಎಲಿಮಿನೇಷನ್​ಗೆ ನಾಮಿನೇಷನ್ ಮಾಡುವ ಆಯ್ಕೆಯನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಆದರೆ, ಈ ವಾರ ಬಿಗ್ ಬಾಸ್ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕಳೆದ ಕೆಲ ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 12 ಇದೆ. ಇದನ್ನು 10ಕ್ಕೆ ಇಳಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ. ಈ ವಾರ ಇಬ್ಬರು ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆಯಂತೆ.

ಇದನ್ನೂ ಓದಿ
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಪ್ರತಿ ಸೀಸನ್​ನಲ್ಲಿ ಒಮ್ಮೆಯಾದರೂ ಡಬಲ್ ಎಲಿಮಿನೇಷನ್ ನಡೆಯುತ್ತದೆ. ಹೊಸ ಸೀಸನ್​ನಲ್ಲಿ ಈಗಾಗಲೇ ಸ್ಪರ್ಧಿಗಳು 60 ದಿನಕ್ಕಿಂತಲೂ ಹೆಚ್ಚು ಮನೆಯಲ್ಲಿ ಸಮಯ ಕಳೆದಿದ್ದಾರೆ. ಹೀಗಾಗಿ, ಈ ಸಂದರ್ಭದಲ್ಲಿ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ನಾಳೆ (ನವೆಂಬರ್ 27) ಈ ಪ್ರಶ್ನೆಗೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ವೈಲ್ಡ್ ಕಾರ್ಡ್​ ಎಂಟ್ರಿ ಬಗ್ಗೆ ವೀಕ್ಷಕರಿಗೆ ಮೂಡಿದೆ ಅನುಮಾನ

ಬಿಗ್ ಬಾಸ್ ಮನೆಯಲ್ಲಿ ಸದ್ಯ ಅರುಣ್ ಸಾಗರ್, ಅಮೂಲ್ಯ ಗೌಡ, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ, ದೀಪಿಕಾ ದಾಸ್, ದಿವ್ಯಾ ಉರುಡುಗ, ಕಾವ್ಯಶ್ರೀ ಗೌಡ, ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಪ್ರಶಾಂತ್ ಸಂಬರ್ಗಿ, ವಿನೋದ್ ಗೊಬ್ಬರಗಾಲ ಆಟ ಆಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:27 pm, Sat, 26 November 22