AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರೂ ದಡ್ಡರೆ’, ಟಾಸ್ಕ್ ಹಾಳುಮಾಡಿದ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್

ಈ ಸೀಸನ್​​ನಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೂಲ್ಸ್ ಅನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೆ ಆಟವಾಡುತ್ತಿದ್ದಾರೆ, ಗೊಂದಲಗಳನ್ನು ಮಾಡಿಕೊಂಡು, ಪರಸ್ಪರ ವಾದ-ವಿವಾದದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವಾರವಂತೂ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಟಾಸ್ಕ್ ರದ್ದಾಗಿದೆ. ಕೆಲ ವಾರದ ಹಿಂದೆ ಸಹ ಇದೇ ಕಾರಣಕ್ಕೆ ಟಾಸ್ಕ್ ಅನ್ನು ರದ್ದು ಮಾಡಲಾಗಿತ್ತು. ಈಗ ಮತ್ತೆ ಇದೇ ಕಾರಣಕ್ಕೆ ಟಾಸ್ಕ್ ರದ್ದು ಮಾಡಲಾಯ್ತು.

‘ಎಲ್ಲರೂ ದಡ್ಡರೆ’, ಟಾಸ್ಕ್ ಹಾಳುಮಾಡಿದ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್
Sudeep Kichcha
ಮಂಜುನಾಥ ಸಿ.
|

Updated on: Oct 17, 2026 | 10:49 PM

Share

ಮುಖ್ಯಾಂಶಗಳು

  • ವೀಕೆಂಡ್ ಎಪಿಸೋಡಿನಲ್ಲಿ ಕಿಚ್ಚನ ಕ್ಲಾಸ್
  • ಕಿಚ್ಚನ ಕ್ಲಾಸ್​​ಗೆ ಸುಸ್ತಾದ ಸ್ಪರ್ಧಿಗಳು
  • ಟಾಸ್ಕ್ ಹಾಳು ಮಾಡಿದ ಸ್ಪರ್ಧಿಗಳು

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವೀಕೆಂಡ್ ಎಪಿಸೋಡ್ ಚಾಲ್ತಿಯಲ್ಲಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವೀಕೆಂಡ್ ಎಪಿಸೋಡ್ ತುಸು ಶಾಂತವಾಗಿ ನಡೆಯಿತು. ಕಳೆದ ವೀಕೆಂಡ್ ಎಪಿಸೋಡ್​​ನಲ್ಲಿ ಸುದೀಪ್ ಹಲವು ಸ್ಪರ್ಧಿಗಳಿಗೆ ಕಠಿಣವಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಈ ವಾರವೂ ಕ್ಲಾಸ್ ತೆಗೆದುಕೊಂಡರಾದರೂ ಕಳೆದ ವಾರದಷ್ಟು ಇಂಟೆನ್ಸ್ ಆಗಿರಲಿಲ್ಲ. ಆದರೆ ಹೇಳಬೇಕಾದುದನ್ನು ಸುದೀಪ್ ಅವರು ಗಂಭೀರವಾಗಿ ಸ್ಪರ್ಧಿಗಳಿಗೆ ಮನದಟ್ಟು ಮಾಡಿಸಿದರು. ವಿಶೇಷವಾಗಿ ಧನುಶ್, ಪ್ರಶಾಂತ್, ಕಾವ್ಯಾ, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ತೆಗೆದುಕೊಂಡರು. ಅದರಲ್ಲೂ ಈ ಬಾರಿ ರೂಲ್ಸ್ ಅನ್ನು ಫಾಲೋ ಮಾಡದೇ ಇರುವ ಬಗ್ಗೆ, ನಿಯಮಗಳನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೇ ಇರುವ ಬಗ್ಗೆ ಸುದೀಪ್ ಟೀಕೆ ಮಾಡಿದರು.

ಈ ಸೀಸನ್​​ನಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪದೇ ಪದೇ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ರೂಲ್ಸ್ ಅನ್ನು ಸರಿಯಾಗಿ ಅರ್ಥ ಸಹ ಮಾಡಿಕೊಳ್ಳದೆ ಆಟವಾಡುತ್ತಿದ್ದಾರೆ, ಗೊಂದಲಗಳನ್ನು ಮಾಡಿಕೊಂಡು, ಪರಸ್ಪರ ವಾದ-ವಿವಾದದಲ್ಲಿ ಸಮಯ ಕಳೆಯುತ್ತಿದ್ದಾರೆ. ಈ ವಾರವಂತೂ ನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಟಾಸ್ಕ್ ರದ್ದಾಗಿದೆ. ಕೆಲ ವಾರದ ಹಿಂದೆ ಸಹ ಇದೇ ಕಾರಣಕ್ಕೆ ಟಾಸ್ಕ್ ಅನ್ನು ರದ್ದು ಮಾಡಲಾಗಿತ್ತು. ಈಗ ಮತ್ತೆ ಇದೇ ಕಾರಣಕ್ಕೆ ಟಾಸ್ಕ್ ರದ್ದು ಮಾಡಲಾಯ್ತು.

ಈ ಬಗ್ಗೆ ಶನಿವಾರದ ಎಪಿಸೋಡಿನಲ್ಲಿ ಮಾತನಾಡಿದ ಸುದೀಪ್, ಈ ಬಗ್ಗೆ ಸ್ಪರ್ಧಿಗಳನ್ನು ಟೀಕೆ ಮಾಡಿದರು. ‘ನಿಮಗೆ ರೂಲ್ಸ್ ಅರ್ಥ ಆಗುವುದಿಲ್ಲವಾ, ಪದೇ ಪದೇ ಬಿಗ್​ಬಾಸ್ ಹೇಳಿರುತ್ತಾರೆ ನಿಯಮ ಅರ್ಥ ಮಾಡಿಕೊಳ್ಳಿ ಎಂದು ಆದರೆ ನಿಮಗೆ ಸರಳವಾಗಿರುವ ನಿಯಮಗಳೇ ಅರ್ಥ ಆಗುತ್ತಿಲ್ಲ. ಅದು ಮಾತ್ರವೇ ಅಲ್ಲದೆ, ನಿಯಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಲ್ಲದೆ ಅದರ ಬಗ್ಗೆ ವಾದ ಬೇರೆ ಮಾಡ್ತೀರ, ತಪ್ಪಾಗಿ ಅರ್ಥೈಸಿಕೊಂಡಿರುವುದರಲ್ಲಿ ಪ್ರತಿ ಬಾರಿಯೂ ಕ್ರಿಯಾಶೀಲತೆ ಪ್ರದರ್ಶಿಸುತ್ತಿದ್ದೀರ. ನಿಮಗೆಲ್ಲ ಆಸ್ಕರ್ ಕೊಡಬೇಕು’ ಎಂದು ಸುದೀಪ್ ಟೀಕೆ ಮಾಡಿದರು.

ಇದನ್ನೂ ಓದಿ:ಬಿಗ್​​ಬಾಸ್: ಎಷ್ಟು ಚಂದ ಹಾಡು ಹಾಡ್ತಾರೆ ತಾಂಡವ್, ವಿಡಿಯೋ ನೋಡಿ

ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತೀರ, ತಪ್ಪು ನಿಯಮವನ್ನೇ ಸರಿ ಎಂದು ವಾದಿಸುತ್ತೀರ ಎಂದು ಟೀಕೆ ಮಾಡಿದ ಸುದೀಪ್, ಗಾನವಿ ಮತ್ತು ಕಾವ್ಯಾ ಅವರು ಉಸ್ತುವಾರಿ ಆಗಿದ್ದಾಗ ಮಾಡಿದ ತಪ್ಪುಗಳನ್ನು ಟೀಕೆ ಮಾಡಿದರು. ಗಾನವಿ ಮತ್ತು ಕಾವ್ಯಾ ಅವರನ್ನು ಅವರು ತೆಗೆದುಕೊಂಡ ನಿರ್ಣಯಗಳಿಗೆ ಟೀಕೆ ಮಾಡಿದರು. ‘ನೀವು ತೆಗೆದುಕೊಂಡ ಕೆಟ್ಟ ನಿರ್ಣಯಗಳಿಂದಾಗಿ ಆಟವೇ ಹಾಳಾಯ್ತು, ಕೆಲವು ಆಟಗಾರರಿಗೆ ಆಟ ಆಡಲು ಸಹ ಅವಕಾಶ ಸಿಗಲಿಲ್ಲ’ ಎಂದರು ಸುದೀಪ್.

ನೀವುಗಳು ಅದೆಷ್ಟು ಕೆಟ್ಟದಾಗಿ ನಿಯಮಗಳನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದರೆ ಇನ್ನು ಮುಂದೆ ನಿಮಗೆ ‘ಲೆಮನ್ ಸ್ಪೂನ್’, ‘ಗೋಣಿಚೀಲದ ಓಟ’, ಕಾಲಿಗೆ ದಾರಾ ಕಟ್ಟಿಕೊಂಡು ಓಡುವುದು ಇಂಥಹ ಆಟಗಳನ್ನಷ್ಟೇ ಆಡಿಸಬೇಕು. ನಿಮಗೆ ಟಾಸ್ಕ್ ಆಡಿಸುವುದು ಸರಿಯಲ್ಲ’ ಎಂದು ಸುದೀಪ್ ಗರಂ ಆಗಿ ಹೇಳಿದರು. ಸೀಸನ್ನಲ್ಲಿ ಒಬ್ಬರೋ-ಇಬ್ಬರೊ ದಡ್ಡರಾಗಿದ್ದರೆ ಓಕೆ, ಎಲ್ಲರೂ ದಡ್ಡರೆ, ಒಳಗೆ ಡ್ರಾಮಾ ಕ್ಲಾಸ್ ನಡೀತಿದ್ಯ? ಎಂದು ಸುದೀಪ್ ಸಿಟ್ಟು ಹೊರಹಾಕಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More