‘ನಿಮ್ಮಿಂದ ಟಿಆರ್​ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್

|

Updated on: Nov 17, 2024 | 7:57 AM

Bigg Boss Kannada: ಬಿಗ್​ಬಾಸ್ ಕನ್ನಡ ಶೋ, ಹೆಚ್ಚು ಟಿಆರ್​ಪಿ ಪಡೆಯುತ್ತದೆ. ಆದರೆ ಈ ಸೀಸನ್​ನಲ್ಲಿ ಕೆಲ ಸ್ಪರ್ಧಿಗಳು, ನಮ್ಮಿಂದಲೇ ಟಿಆರ್​ಪಿ ಎಂಬಂತೆ ಮಾತನಾಡಿದ್ದಾರೆ. ಆದರೆ ಸುದೀಪ್, ಸ್ಪರ್ಧಿಗಳ ಆ ಭ್ರಮೆಯನ್ನು ದೂರ ಮಾಡಿದ್ದಾರೆ.

‘ನಿಮ್ಮಿಂದ ಟಿಆರ್​ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್
Follow us on

ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಟಿಆರ್​ಪಿ ಪಡೆವ ಶೋ ಎಂದರೆ ಅದು ಬಿಗ್​ಬಾಸ್​ ಕನ್ನಡ ಶೋ. ಈ ರಿಯಾಲಿಟಿ ಶೋ ಪ್ರಾರಂಭ ಆಗಿ ಅಂತ್ಯವಾಗುವ ಮೂರು ತಿಂಗಳ ವರೆಗೆ ಬಹುತೇಕ ಟಿಆರ್​ಪಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಆದರೆ ಇದೀಗ ಕೆಲವು ಬಿಗ್​ಬಾಸ್​ ಸ್ಪರ್ಧಿಗಳು ನಮ್ಮಿಂದಲೇ ಶೋಗೆ ಇಷ್ಟೋಂದು ಟಿಆರ್​ಪಿ ಬರುತ್ತದೆ ಎಂಬ ಭ್ರಮೆಯಲ್ಲಿರುತ್ತಾರೆ. ಈ ಸೀಸನ್​ನಲ್ಲಿ ಕೆಲ ಸ್ಪರ್ಧಿಗಳು ಈ ಬಗ್ಗೆ ಮಾತನಾಡಿದ್ದಾರೆ ಸಹ. ಆದರೆ ಸುದೀಪ್ ಟಿಆರ್​ಪಿ ವಿಷಯವನ್ನು ವಿವರವಾಗಿ ವಿವರಿಸಿ ಭ್ರಮೆ ದೂರ ಮಾಡಿದ್ದಾರೆ. ಮತ್ತು ಸ್ಪರ್ಧಿಗಳಿಂದ ಟಿಆರ್​ಪಿ ಅಲ್ಲ ಎಂದು ಹೇಳಿದ್ದಾರೆ.

ಕಳೆದ ವಾರ ಯಾರೂ ಎಲಿಮಿನೇಟ್ ಆಗಿರಲಿಲ್ಲ. ಆದರೆ ಭಾನುವಾರದ ಎಪಿಸೋಡ್ ಬಳಿಕ ಭವ್ಯಾ, ಇನ್ನೇನು ಎಲಿಮಿನೇಟ್ ಆಗುತ್ತಾರೆ ಎನ್ನುವಂತೆ ಬಾಗಿಲಿನವರೆಗೆ ಹೋಗಿ ವಾಪಸ್ಸಾದರು. ಭವ್ಯಾ ಎಲಿಮಿನೇಷನ್ ವರೆಗೆ ಹೋಗಿದ್ದು ಭವ್ಯಾ ಸೇರಿದಂತೆ ಮನೆಯವರಿಗೆ ಶಾಕ್ ಆಯ್ತು. ಆದರೆ ಭವ್ಯಾ ಸೇಫ್ ಆದ ಬಳಿಕ ಚೇಂಜಿಂಗ್ ರೂಂನಲ್ಲಿ ಮಾತನಾಡಿದ್ದ ಅನುಷಾ, ಭವ್ಯಾ, ಚೈತ್ರಾ ಅವರುಗಳು ಟಿಆರ್​ಪಿ ವಿಷಯ ಮಾತನಾಡಿದ್ದರಂತೆ. ನಮ್ಮಿಂದ ಒಳ್ಳೆಯ ಟಿಆರ್​ಪಿ ಸಿಗುತ್ತೆ ಹಾಗಾಗಿ ಬೇಗ ಹೊರಗೆ ಕಳಿಸಲ್ಲ ಎಂದು ಭವ್ಯಾ ಹೇಳಿದ್ದರಂತೆ. ಇದರ ಬಗ್ಗೆ ಸುದೀಪ್ ಶನಿವಾರದ ಶೋನಲ್ಲಿ ಮಾತನಾಡಿದರು.

‘ಸ್ಪರ್ಧಿಗಳು, ಸ್ಪರ್ಧಿಗಳಾಗಿ ಮಾತ್ರವೇ ಇರಿ. ನೀವ್ಯಾಕೆ ಶೋನ ನಿರ್ದೇಶಕ, ಮಾರ್ಕೆಟಿಂಗ್ ವ್ಯಕ್ತಿ ಆಗಲು ಹೋಗುತ್ತೀರಿ. ಈ ಚಾನೆಲ್ ವರ್ಷಪೂರ್ತಿ ಟಿಆರ್​ಪಿಯಲ್ಲಿ ಟಾಪ್​ನಲ್ಲಿರುತ್ತದೆ. ಹಲವಾರು ಶೋಗಳು, ಕಲಾವಿದರು ಇದಕ್ಕೆ ಕಾರಣ ಆಗಿದ್ದಾರೆ. ನಮ್ಮಿಂದಲೇ ಟಿಆರ್​ಪಿ ಬರುತ್ತಿದೆ ಎಂಬುದನ್ನು ತಲೆಯಿಂದ ತೆಗೆದು ಹಾಕಿ. ಒಂದೊಮ್ಮೆ ಸ್ಪರ್ಧಿಗಳಿಂದ ಟಿಆರ್​ಪಿ ಬರುವುದಿದ್ದರೆ 17 ಸ್ಪರ್ಧಿಗಳಿರುತ್ತಾರೆ, ಒಬ್ಬೊಬ್ಬರೇ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಿದ್ದಂತೆ ಟಿಆರ್​ಪಿ ಸಹ ಇಳಿಯಬೇಕಿತ್ತು ಅಲ್ಲವೆ, ಸ್ಪರ್ಧಿಗಳಿಂದ ಟಿಆರ್​ಪಿ ಇದ್ದರೆ ಆಯಾ ಸ್ಪರ್ಧಿ ಹೊರಗೆ ಹೋಗುತ್ತಿದ್ದಂತೆ ಟಿಆರ್​ಪಿ ಸಹ ಇಳಿಯಬೇಕಿತ್ತಲ್ಲ, ಏಕೆ ಇಳಿಯುತ್ತಿಲ್ಲ? ಬದಲಿಗೆ ಜನ ಕಡಿಮೆ ಆದಷ್ಟು ಟಿಆರ್​ಪಿ ಹೆಚ್ಚಾಗುತ್ತಲೇ ಹೋಗುತ್ತಿದೆ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ:ಸುದೀಪ್ ‘ಬಿಗ್ ಬಾಸ್’ ಕಂಬ್ಯಾಕ್​ಗೆ ಸಿಕ್ತು ಭರ್ಜರಿ ಟಿಆರ್​ಪಿ; ಎರಡಂಕಿ ದಾಟಿದ ‘ಪುಟ್ಟಕ್ಕನ ಮಕ್ಕಳು’ ಟಿವಿಆರ್

ಮನೆಯಲ್ಲಿ ಸ್ಪರ್ಧಿಗಳು ಜಗಳ ಮಾಡುವುದು, ಸ್ಟ್ರಾಟಜಿ ಮಾಡುವುದು ಇದೆಲ್ಲ ಓಕೆ, ಆದರೆ ಮನೆಯವ ಮಾತಿನಿಂದ ಶೋನ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತಿದೆ ಎಂದಾಗ ನಾನು ನೇರವಾಗಿ ಮಾತನಾಡಿಯೇ ಆಡುತ್ತೇನೆ ಎಂದ ಸುದೀಪ್, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬ ಬಗ್ಗೆ ಮಾತನಾಡುತ್ತಾ, ಕಳೆದ ವಾರ ಎಲಿಮಿನೇಷನ್ ರೌಂಡ್ ಇರಲಿಲ್ಲ ಎಂಬುದು ನಿಮಗೆ ಗೊತ್ತಿರಲಿಲ್ಲ. ಆದರೆ ಜನರಿಗೆ ಅದು ಮೊದಲೇ ಗೊತ್ತಿತ್ತು. ನಾವು ಮುಚ್ಚು ಮರೆ ಮಾಡಿರಲಿಲ್ಲ. ಏಕೆಂದರೆ ಕಳೆದ ವಾರ ವೋಟಿಂಗ್ ಲೈನ್ ಓಪನ್ ಆಗಿರಲೇ ಇಲ್ಲ. ಮತ ಹಾಕದೆ ಯಾರೂ ಎಲಿಮಿನೇಟ್ ಆಗುವುದಿಲ್ಲ. ಜನರಿಗೆ ಅದು ಮೊದಲೇ ಗೊತ್ತಿತ್ತು. ಟಿಆರ್​ಪಿಗಾಗಿ ಮಾಡಿದ್ದಲ್ಲ, ಅಥವಾ ಟಿಆರ್​ಪಿಗಾಗಿ ಯಾರನ್ನೋ ಉಳಿಸಿಕೊಳ್ಳುವ ಪ್ಲಾನ್ ಸಹ ಅದಲ್ಲ’ ಎಂದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ