ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ (Bigg Boss) ಮತ್ತೊಂದು ವಾರಾಂತ್ಯ ಬಂದಿದೆ. ಕಿಚ್ಚನ ವೀಕೆಂಡ್ ಪಂಚಾಯ್ತಿ ಶುರುವಾಗಿದೆ. ಶನಿವಾರದ ಎಪಿಸೋಡ್ಗೆ ಆಗಮಿಸಿದ್ದ ಕಿಚ್ಚ ಸುದೀಪ್ ಮನೆಯ ಸದಸ್ಯರು ವಾರಪೂರ್ತಿ ಮಾಡಿದ ಆಡಿದ ಆಟ, ಆಡಿದ ರೀತಿ ಇನ್ನಿತರೆ ವಿಚಾರಗಳನ್ನು ಇಟ್ಟುಕೊಂಡು ಚರ್ಚಿಸಿದರು. ಡ್ರೋನ್ ಪ್ರತಾಪ್ ಕಳೆದ ವಾರ ತಂಡದ ಲೀಡರ್ ಆಗಿದ್ದಾಗ ತೆಗೆದುಕೊಂಡ ನಿರ್ಣಯಗಳನ್ನು ವಿಮರ್ಶಿಸಿದ ಕಿಚ್ಚು ಸುದೀಪ್, ಚೆನ್ನಾಗಿ ಆಡಿದ ನಮ್ರತಾ ಗೌಡ ಅವರಿಗೆ ಚಪ್ಪಾಳೆ ನೀಡಿದರು.
ಪ್ರತಿ ವಾರಾಂತ್ಯದಲ್ಲಿಯೂ ಭಾನುವಾರದಂದು ಎಲಿಮಿನೇಷನ್ ಪ್ರಕ್ರಿಯೆ ಪೂರ್ಣವಾಗುತ್ತದೆಯಾದರೂ ಆ ಪ್ರಕ್ರಿಯೆ ಶನಿವಾರವೇ ಪ್ರಾರಂಭವಾಗುತ್ತದೆ. ಪ್ರತಿಬಾರಿ ನಿರ್ದಿಷ್ಟ ಕ್ರಮಾಂಕವಿಲ್ಲದೆ ಎಲಿಮಿನೇಷನ್ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದರು. ಆದರೆ ಕಳೆದ ವಾರದಿಂದ ಪಡೆದ ಮತಗಳ ಆಧಾರದಲ್ಲಿ ಎಲಿಮಿನೇಷನ್ನಿಂದ ಪಾರಾದವರ ಹೆಸರುಗಳನ್ನು ಸುದೀಪ್ ಹೇಳುತ್ತಿದ್ದಾರೆ. ಕಳೆದ ವಾರ ಡ್ರೋನ್ ಪ್ರತಾಪ್ ಅತಿ ಹೆಚ್ಚು ಮತ ಪಡೆದು ಮೊದಲು ಸೇವ್ ಆಗಿದ್ದರು. ಆದರೆ ಈ ವಾರ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ.
ಈ ವಾರ ವಿನಯ್, ಡ್ರೋನ್ ಪ್ರತಾಪ್, ನಮ್ರತಾ ಗೌಡ, ಸ್ನೇಹಿತ್, ತನಿಷಾ, ಸಂಗೀತಾ, ವರ್ತೂರು ಸಂತೋಷ್, ಮೈಖಲ್ ಅವರುಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಶನಿವಾರದ ಎಪಿಸೋಡ್ನಲ್ಲಿ ಮೂವರು ಸೇಫ್ ಆದರು. ಆ ಮೂವರ ಹೆಸರನ್ನು ಅವರು ಪಡೆದುಕೊಂಡ ಮತಗಳ ಆಧಾರದಲ್ಲಿ ನೀಡಲಾಯ್ತು. ಯಾರು ಹೆಚ್ಚು ಮತ ಪಡೆದಿದ್ದಾರೆಯೋ ಅವರ ಹೆಸರನ್ನು ಮೊದಲಿಗೆ ಘೋಷಿಸಲಾಯ್ತು. ಅದರಂತೆ ಮೊದಲು ಸುದೀಪ್ ಅವರು ಹೇಳಿದ ಹೆಸರು ವರ್ತೂರು ಸಂತೋಷ್ ಅವರದ್ದು. ಕಳೆದ ಬಾರಿ ಡ್ರೋನ್ ಅವರಿಗೆ ಹೆಚ್ಚು ಬಂದಿತ್ತು ಈ ವಾರ ವರ್ತೂರು ಸಂತೋಷ್ಗೆ ಹೆಚ್ಚು ಮತಗಳು ಬಂದು ಅವರು ಮೊದಲಿಗೆ ಸೇಫ್ ಆದರು.
ಇದನ್ನೂ ಓದಿ:ಸುದೀಪ್ ಮಾತಿಗೂ ಬೆಲೆ ಕೊಡಲಿಲ್ಲ ಬಿಗ್ ಬಾಸ್ ಮಂದಿ; ಮಿತಿ ಮೀರಿ ಇಂಗ್ಲಿಷ್ ಬಳಸಿದ್ದಕ್ಕೆ ಈಗ ಕಠಿಣ ಶಿಕ್ಷೆ
ವರ್ತೂರು ಸಂತೋಷ್ ಬಳಿಕ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿರುವುದು ನಮ್ರತಾ ಗೌಡ. ಕಳೆದ ವಾರ ಐದರ ಬಳಿಕದ ಸ್ಥಾನದಲ್ಲಿದ್ದ ನಮ್ರತಾ ಈ ವಾರ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಈ ವಾರ ಉತ್ತಮ ಪ್ರಶಸ್ತಿ ಸಹ ಪಡೆದು, ಕಿಚ್ಚನ ಚಪ್ಪಾಳೆಯನ್ನೂ ಪಡೆದಿರುವ ನಮ್ರತಾ ಹೆಚ್ವು ಮತಗಳು ಬಂದಿರುವುದನ್ನು ಸಹ ಸಖತ್ ಎಂಜಾಯ್ ಮಾಡಿದರು. ಎಲ್ಲರಿಗೂ ಧನ್ಯವಾದವನ್ನೂ ಸಹ ಹೇಳಿದರು. ಇನ್ನು ಮತಗಳ ಆಧಾರದಲ್ಲಿ ಮೂರನೇ ಸ್ಥಾನದಲ್ಲಿರುವುದು ಡ್ರೋನ್ ಪ್ರತಾಪ್. ಕಳೆದ ವಾರ ನಂಬರ್ 1 ಸ್ಥಾನದಲ್ಲಿದ್ದ ಡ್ರೋನ್ ಪ್ರತಾಪ್ ಈ ವಾರ ಮೂರನೇ ಸ್ಥಾನಕ್ಕೆ ಬಂದಿದ್ದಾರೆ.
ಇನ್ನು ವಿನಯ್ ಗೌಡ, ಸ್ನೇಹಿತ್ ಗೌಡ, ಸಂಗೀತಾ, ಮೈಖಲ್ ಹಾಗೂ ತನಿಷಾ ಅವರುಗಳು ಎಲಿಮಿನೇಷನ್ ಪಟ್ಟಿಯಲ್ಲಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಗೆ ಹೋಗಲಿದ್ದಾರೆ. ಎಲ್ಲರೂ ಗಟ್ಟಿ ಕಂಟೆಸ್ಟ್ಗಳೇ ಆಗಿದ್ದಾರೆ. ಇಷ್ಟರಲ್ಲಿ ಯಾರು ಮನೆಗೆ ಹೋಗಲಿದ್ದಾರೆ ಎಂಬುದು ನಾಳೆ ಅಂದರೆ ಭಾನುವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ