ಮಲ್ಲಮ್ಮ ಬಿಗ್​​ಬಾಸ್ ಪ್ರವೇಶಕ್ಕೆ ಕಾರಣವಾಗಿದ್ದ ಉದ್ಯಮಿ ಪಲ್ಲವಿ ನಿಧನ

ಮಲ್ಲಮ್ಮ, ಬಿಗ್​​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ. ಇದ್ದಷ್ಟು ದಿನ ಬಹಳ ಚೆನ್ನಾಗಿ ಆಟ ಆಡಿದ, ಎಲ್ಲರನ್ನೂ ಮನರಂಜಿಸಿದ ಮಲ್ಲಮ್ಮ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಖುದ್ದು ಬಿಗ್​​ಬಾಸ್​​ಗೆ ಮಲ್ಲಮ್ಮನ ಆಟ ಇಷ್ಟವಾಗಿತ್ತು. ಮಲ್ಲಮ್ಮ ಎವಿಕ್ಟ್ ಆದಾಗ ಬಹು ಗೌರವದಿಂದ ಅವರನ್ನು ಕಳಿಸಿಕೊಡಲಾಗಿತ್ತು. ಆದರೆ ಮಲ್ಲಮ್ಮ ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಲು ಕಾರಣವಾಗಿದ್ದ ಉದ್ಯಮಿ ರಿಷಿ ಡಿಸೈನ್​​ ಸಂಸ್ಥೆಯ ಮಾಲಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ.

ಮಲ್ಲಮ್ಮ ಬಿಗ್​​ಬಾಸ್ ಪ್ರವೇಶಕ್ಕೆ ಕಾರಣವಾಗಿದ್ದ ಉದ್ಯಮಿ ಪಲ್ಲವಿ ನಿಧನ
Mallamma Pallavi

Updated on: Sep 20, 2026 | 8:29 PM

ಮುಖ್ಯಾಂಶಗಳು

  • ಪಲ್ಲವಿ ಲಕ್ಷ್ಮಿಕಾಂತ್ ನಿಧನ ಹೊಂದಿದ್ದಾರೆ.
  • ಬಿಗ್​​ಬಾಸ್ ಮಲ್ಲಮ್ಮನ ಮೆಂಟರ್ ಆಗಿದ್ದ ಪಲ್ಲವಿ
  • ರಿಷಿ ಡಿಸೈನ್​​ನ ಮಾಲೀಕರಾಗಿದ್ದರು ಪಲ್ಲವಿ

ಮಲ್ಲಮ್ಮ, ಬಿಗ್​​ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ. ಇದ್ದಷ್ಟು ದಿನ ಬಹಳ ಚೆನ್ನಾಗಿ ಆಟ ಆಡಿದ, ಎಲ್ಲರನ್ನೂ ಮನರಂಜಿಸಿದ ಮಲ್ಲಮ್ಮ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ಖುದ್ದು ಬಿಗ್​​ಬಾಸ್​​ಗೆ ಮಲ್ಲಮ್ಮನ ಆಟ ಇಷ್ಟವಾಗಿತ್ತು. ಮಲ್ಲಮ್ಮ ಎವಿಕ್ಟ್ ಆದಾಗ ಬಹು ಗೌರವದಿಂದ ಅವರನ್ನು ಕಳಿಸಿಕೊಡಲಾಗಿತ್ತು. ಆದರೆ ಮಲ್ಲಮ್ಮ ಬಿಗ್​​ಬಾಸ್ ಮನೆಗೆ ಪ್ರವೇಶ ಮಾಡಲು ಕಾರಣವಾಗಿದ್ದ ಉದ್ಯಮಿ ರಿಷಿ ಡಿಸೈನ್​​ ಸಂಸ್ಥೆಯ ಮಾಲಕಿ ಪಲ್ಲವಿ ಲಕ್ಷ್ಮಿಕಾಂತ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ.

ಸ್ಯಾಂಡಲ್‌ವುಡ್ ತಾರೆಯರ ನೆಚ್ಚಿನ ವಸ್ತ್ರವಿನ್ಯಾಸಕಿ ಆಗಿದ್ದ ಪಲ್ಲವಿ ಲಕ್ಷ್ಮಿಕಾಂತ್ ಅವರು ‘ರಿಷಿ ಡಿಸೈನ್’ ಸಂಸ್ಥೆಯ ಮಾಲಕಿ ಇದ್ದರು. ಪಲ್ಲವಿ ಲಕ್ಷ್ಮೀಕಾಂತ್ ಅವರು ಭಾನುವಾರ ಹಠಾತ್ತಾಗಿ ನಿಧನರಾಗಿದ್ದಾರೆ. ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಸುದ್ದಿ ಕಿರುತೆರೆ ಹಾಗೂ ಫ್ಯಾಷನ್ ಲೋಕಕ್ಕೆ ದೊಡ್ಡ ಆಘಾತ ನೀಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೂರನೇ ಸ್ಪರ್ಧಿಯಾಗಿ ಮನೆ ಪ್ರವೇಶಿಸಿ, ತಮ್ಮ ಮುಗ್ಧ ನಡವಳಿಕೆಯಿಂದ ರಾಜ್ಯದಾದ್ಯಂತ ಜನಮನ ಗೆದ್ದ ಮಲ್ಲಮ್ಮ ಅವರ ಯಶಸ್ಸಿನ ಹಿಂದೆ ಪಲ್ಲವಿ ಅವರ ಕೊಡುಗೆ ದೊಡ್ಡದಿತ್ತು. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಅವರಿಗೆ ಪಲ್ಲವಿ ಅವರು ಉಳಿದುಕೊಳ್ಳಲು ಜಾಗ ಕಲ್ಪಿಸಿ, ತಮ್ಮ ಬೊಟಿಕ್‌ನಲ್ಲೇ ಕೆಲಸವನ್ನೂ ನೀಡಿದ್ದರು. ಅವರನ್ನು ಕೇವಲ ಉದ್ಯೋಗಿಯಂತೆ ಕಾಣದೆ, ಮನೆಯ ಸದಸ್ಯೆಯಂತೆ ಪ್ರೀತಿಯಿಂದ ನೋಡಿಕೊಂಡಿದ್ದರು. ಕಿರುತೆರೆ ನಟ ಮನೋಜ್ ಕುಮಾರ್ ಜೊತೆಗೆ ಪಲ್ಲವಿ ಅವರೂ ಸೇರಿ ಮಲ್ಲಮ್ಮ ಬಿಗ್ ಬಾಸ್ ವೇದಿಕೆ ತಲುಪಲು ಬೆನ್ನೆಲುಬಾಗಿ ನಿಂತಿದ್ದರು.

ಇದನ್ನೂ ಓದಿ:‘ದಿ ಪ್ಯಾರಡೈಸ್’ ಸಿನಿಮಾ ಪ್ರಚಾರದಿಂದ ದೂರ ಉಳಿದ ನಟಿ ಖಯಾದು ಲೋಹರ್

ಮಲ್ಲಮ್ಮ ಬಿಗ್​​ಬಾಸ್ ವೇದಿಕೆ ಮೇಲೆ ಬಂದಾಗ ಹಾಗೂ ಮನೆಯಿಂದ ನಿರ್ಗಮಿಸಿದಾಗಲೂ ಸಹ ಖುದ್ದು ಕಿಚ್ಚ ಸುದೀಪ್ ಅವರು ಪಲ್ಲವಿ ಅವರನ್ನು ಅವರು ಮಲ್ಲಮ್ಮನಿಗೆ ನೀಡಿದ ನಿಸ್ವಾರ್ಥ ಬೆಂಬಲವನ್ನೂ ಕೊಂಡಾಡಿದ್ದರು. ಮಲ್ಲಮ್ಮ ಸಹ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನೀಡಿದ ಸಂದರ್ಶನಗಳಲ್ಲಿ ‘ಪಲ್ಲವಿ ಮೇಡಂ’ ಬಗ್ಗೆ ಹೆಮ್ಮೆ ಮತ್ತು ಕೃತಜ್ಞತೆಯಿಂದ ಮಾತನಾಡುತ್ತಿದ್ದರು. ತಮ್ಮ ಮೇಡಂ ಅಗಲಿದ ಸುದ್ದಿ ಮಲ್ಲಮ್ಮ ಅವರಿಗೆ ತೀವ್ರ ಆಘಾತ ತಂದಿದೆ ಎನ್ನಲಾಗಿದೆ.

ಪಲ್ಲವಿ ಅವರು ಕೇವಲ ಬೊಟಿಕ್ ಮಾಲೀಕರಾಗಿರಲಿಲ್ಲ. ಚಂದನವನದ ಹಲವು ನಟ-ನಟಿಯರು ಹಾಗೂ ಗಣ್ಯರಿಗೆ ವಸ್ತ್ರ ವಿನ್ಯಾಸ ಮಾಡುತ್ತಿದ್ದ ಪ್ರಸಿದ್ಧ ಡಿಸೈನರ್ ಅವರಾಗಿದ್ದರು. ರಿಷಿ ಡಿಸೈನ್ ಮೂಲಕ ಫ್ಯಾಷನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ನಿಧನ ವಾರ್ತೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಆಪ್ತರು ಹಾಗೂ ಚಿತ್ರರಂಗ-ಕಿರುತೆರೆಯ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us