AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ಬಿಗ್​ಬಾಸ್, ಮನೆಯೊಳಗೆ ಸ್ಟಾರ್ ನಟರು, ಮೊದಲ ದಿನವೇ ಎಲಿಮಿನೇಷನ್

Bigg Boss: ಕಳೆದ ಸೀಸನ್​ನಲ್ಲಿ ಭಾರಿ ಯಶಸ್ಸು ಪಡೆದುಕೊಂಡಿದ್ದ ಬಿಗ್​ಬಾಸ್ ತೆಲುಗಿನ ಹೊಸ ಸೀಸನ್ ಆರಂಭ ಆಗುತ್ತಿದೆ. ತೆಲುಗು ಸೀಸನ್ 08ರ ಪ್ರೋಮೊ ಇಂದು ಬಿಡುಗಡೆ ಆಗಿದ್ದು, ದೊಡ್ಡ ಸ್ಟಾರ್ ನಟ-ನಟಿಯರು ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ.

ಶುರುವಾಯ್ತು ಬಿಗ್​ಬಾಸ್, ಮನೆಯೊಳಗೆ ಸ್ಟಾರ್ ನಟರು, ಮೊದಲ ದಿನವೇ ಎಲಿಮಿನೇಷನ್
ಮಂಜುನಾಥ ಸಿ.
|

Updated on:Sep 01, 2024 | 12:57 PM

Share

ಮತ್ತೆ ಬಿಗ್​ಬಾಸ್​ ಋತು ಪ್ರಾರಂಭವಾಗಿದೆ. ಮೊದಲನೆಯದಾಗಿ ತೆಲುಗು ಬಿಗ್​ಬಾಸ್ ಆರಂಭವಾಗಿದ್ದು, ತೆಲುಗು ಬಿಗ್​ಬಾಸ್ ಸೀಸನ್ 8ರ ಪ್ರೋಮೊ ಬಿಡುಗಡೆ ಆಗಿದ್ದು, ಕಳೆದ ವರ್ಷಕ್ಕಿಂತಲೂ ಭಿನ್ನವಾಗಿ ಈ ವರ್ಷದ ಬಿಗ್​ಬಾಸ್ ತೆಲುಗು ಮೂಡಿಬರಲಿದೆ ಎಂಬುದು ಪ್ರೋಮೊದಿಂದ ತಿಳಿದು ಬರುತ್ತಿದೆ. ಮತ್ತೊಂದು ವಿಶೇಷವೆಂದರೆ ಪ್ರೋಮೋ ನಲ್ಲಿ ತೋರಿಸಿರುವಂತೆ ತೆಲುಗಿನ ಕೆಲವು ಸ್ಟಾರ್ ನಟ-ನಟಿಯರು ಸಹ ಬಿಗ್​ಬಾಸ್ ಮನೆಯೊಳಗೆ ಹೋಗಿದ್ದಾರೆ. ಮಾತ್ರವಲ್ಲದೆ ಬಿಗ್​ಬಾಸ್ ಪ್ರಾರಂಭವಾದ ಮೊದಲ ದಿನವೇ ಎಲಿಮಿನೇಷನ್ ಸಹ ನಡೆದಿದೆ.

ತೆಲುಗು ಬಿಗ್​ಬಾಸ್ ಸೀಸನ್ 8 ರ ಪ್ರೋಮೊ ಇದೀಗ ಬಿಡುಗಡೆ ಆಗಿದೆ. ಈ ಹಿಂದಿನ ಕೆಲ ಸೀಸನ್​ಗಳಂತೆ ಈ ಸೀಸನ್ ಅನ್ನೂ ಸಹ ಅಕ್ಕಿನೇನಿ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ. ಕಳೆದ ಸೀಸನ್ ಭಾರಿ ಯಶಸ್ಸು ಗಳಿಸಿತ್ತು. ಬಿಗ್​ಬಾಸ್​ ಟಿಆರ್​ಪಿಯ ಹಳೆಯ ದಾಖಲೆಗಳನ್ನು ಮುರಿದು ಹಾಕಿತ್ತು. ಅದೇ ಕಾರಣಕ್ಕೆ ಈ ಬಾರಿ ಇನ್ನಷ್ಟು ವಿಶೇಷವಾಗಿ ಹಾಗೂ ಭಿನ್ನ-ಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ದು ತರಲಾಗಿದೆ. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸ್ಪರ್ಧಿಗಳ ಮುಖವನ್ನು ತೋರಿಸಿಲ್ಲವಾದರು. ಉದ್ಘಾಟನೆ ದಿನ ಬಂದಿರುವ ಕೆಲವು ಸ್ಟಾರ್ ನಟ-ನಟಿಯರನ್ನು ತೋರಿಸಲಾಗಿದೆ.

ಪ್ರೋಮೋನಲ್ಲಿ ಸ್ಪರ್ಧಿಗಳ ಕಾಲುಗಳನ್ನು ಮಾತ್ರವೇ ತೋರಿಸಲಾಗಿದೆ. ಆದರೆ ನಾಗಾರ್ಜುನ ಹೇಳಿರುವಂತೆ ಈ ಬಾರಿ ಯಾವುದೇ ಸ್ಪರ್ಧಿ ಒಂಟಿಯಾಗಿ ಮನೆಯ ಒಳಗೆ ಹೋಗುವಂತಿಲ್ಲ ಬದಲಿಗೆ ಎಲ್ಲರೂ ಜಂಟಿಯಾಗಿಯೇ ಹೋಗಬೇಕಿದೆ. ಇದರಿಂದಾಗಿ ಕೆಲವರಿಗೆ ಸಮಸ್ಯೆ ಆಗಲಿದೆ. ಒಂಟಿಯಾಗಿ ಒಳಗೆ ಹೋಗಲು ಯತ್ನಿಸಿದ ಕೆಲವರನ್ನು ನಾಗಾರ್ಜುನ ತಡೆದಿದ್ದಾರೆ ಸಹ.

ಇದನ್ನೂ ಓದಿ:Bigg Boss OTT: ಬಿಗ್​ಬಾಸ್ 3 ಗೆದ್ದ ಸನಾ, ಸಹ ಸ್ಪರ್ಧಿಗಳಿಂದ ವಿರೋಧ

ಮತ್ತೊಂದು ವಿಶೇಷತೆಯೆಂದರೆ ಮೊದಲ ದಿನ ದೊಡ್ಡ ತಾರಾಗಣವೇ ಬಿಗ್​ಬಾಸ್ ಮನೆ ಸೇರಿಕೊಂಡಿದೆ. ನಟ ನಾನಿ, ಪ್ರಿಯಾಂಕಾ ಮೋಹನ್ ಅವರುಗಳು ಬಿಗ್​ಬಾಸ್ ಶೋಗೆ ಆಗಮಿಸಿದ್ದಾರೆ. ಅವರಿಬ್ಬರನ್ನೂ ಒಂದು ವಾರ ಮನೆಯೊಳಗೆ ಇರುವಂತೆ ನಾಗಾರ್ಜುನ ಮನವಿ ಮಾಡಿದ್ದಾರೆ. ಕೊನೆಗೆ ಇಬ್ಬರೂ ಸಹ ಕೊರಳಿಗೆ ಮೈಕ್ ನೇತು ಹಾಕಿಕೊಂಡು ಬಿಗ್​ಬಾಸ್ ಮನೆ ಒಳಗೆ ಹೋಗಿದ್ದಾರೆ. ಅದಾದ ಬಳಿಕ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಬಂದಿದ್ದಾರೆ. ಅವರ ಹಿಂದೆಯೇ ನಟಿ ನಿವೇತಾ ಥಾಮಸ್ ಅವರುಗಳನ್ನು ಸಹ ಬಿಗ್​ಬಾಸ್ ಮನೆಯ ಒಳಗೆ ಕಳಿಸಲಾಗಿದೆ.

ರಾಣಾ ದಗ್ಗುಬಾಟಿಯನ್ನು ಆರು ದಿನಕ್ಕೆ ನಿವೇತಾ ಅನ್ನು ಐದಿ ದಿನಕ್ಕೆ ಬಿಗ್​ಬಾಸ್ ಮನೆಯ ಒಳಗೆ ನಾಗಾರ್ಜುನ ಕಳಿಸಿದ್ದಾರೆ. ಆದರೆ ನಿಜಕ್ಕೂ ಅವರು ಅಷ್ಟು ದಿನಗಳ ಕಾಲ ಒಳಗೆ ಇರಲಿದ್ದಾರೆಯೇ ತಿಳಿಯದು. ಒಳಗೆ ಹೋಗಿರುವ ನಟ ರಾಣಾ ದಗ್ಗುಬಾಟಿ ಮತ್ತು ನಟ ನಾನಿ ಹಾಗೂ ನಿವೇತಾ ಅವರುಗಳು ಸ್ಪರ್ಧಿಗಳನ್ನು ಚೆನ್ನಾಗಿ ಕಾಲೆಳೆದಿದ್ದಾರೆ. ‘ಈಗ ನಗುತ್ತಿದ್ದೀರಿ ಮುಂದೆ ಏನಾಗುತ್ತೀರೋ’ ಎಂದು ನಾನಿ ತಮಾಷೆ ಮಾಡಿದ್ದಾರೆ. ಬಳಿಕ ಪ್ರೋಮೋದ ಕೊನೆಯಲ್ಲಿ ನಿರ್ದೇಶಕರೊಬ್ಬರು ಬಿಗ್​ಬಾಸ್ ಮನೆ ಒಳಗೆ ಹೋಗಿ ಮೊದಲ ದಿನದಿಂದಲೇ ಎಲಿಮಿನೇಷನ್ ಪ್ರಾರಂಭವಾಗಿದೆ ಒಬ್ಬರನ್ನು ಹೊರಗೆ ಕರೆದುಕೊಂಡು ಹೋಗಲಿದ್ದೇನೆ ಎಂದು ಶಾಕ್ ನೀಡಿದ್ದಾರೆ. ಅಂದಹಾಗೆ ಇಂದು (ಸೆಪ್ಟೆಂಬರ್ 1) ರಂದು ಸಂಜೆ ಏಳು ಗಂಟೆಗೆ ಬಿಗ್​ಬಾಸ್ ತೆಲುಗು ಸೀಸನ್ 8 ಪ್ರಾರಂಭವಾಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Sun, 1 September 24

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ