Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗೆದ್ದ ಹಣದಲ್ಲಿ ಅರ್ಧವನ್ನೂ ನೀಡಿಲ್ಲ’; ಬಿಗ್ ಬಾಸ್ ವಿನ್ನರ್​ ಬೇಸರದ ಮಾತು

ಶಿವ ಠಾಕ್ರೆ ಅವರು ಈ ಮೊದಲು ‘ರೋಡಿಸ್’ ರಿಯಾಲಿಟಿ ಶೋ ಮೂಲಕ ಹಿಂದಿ ಹಾಗೂ ಮರಾಠಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದರು. ಅವರು ಮರಾಠಿಯ ‘ಬಿಗ್ ಬಾಸ್ ಸೀಸನ್ 2’ರಲ್ಲಿ ಭಾಗಿ ಆಗಿ ವಿನ್ ಆದರು. 25 ಲಕ್ಷ ರೂಪಾಯಿ ವಿನ್ನಿಂಗ್ ಮೊತ್ತ ನಿಗದಿ ಮಾಡಲಾಗಿತ್ತು. ಶಾಕಿಂಗ್ ವಿಚಾರ ಎಂದರೆ ಇದರಲ್ಲಿ ಅರ್ಧಕ್ಕೂ ಕಡಿಮೆ ಮೊತ್ತವನ್ನು ಕಟ್ ಮಾಡಿ ನೀಡಲಾಗಿದೆ.

‘ಗೆದ್ದ ಹಣದಲ್ಲಿ ಅರ್ಧವನ್ನೂ ನೀಡಿಲ್ಲ’; ಬಿಗ್ ಬಾಸ್ ವಿನ್ನರ್​ ಬೇಸರದ ಮಾತು
ಬಇಗ್ ಬಾಸ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 15, 2024 | 7:59 AM

‘ಬಿಗ್ ಬಾಸ್’ (Bigg Boss) ರಿಯಾಲಿಟಿ ಶೋ ಗೆದ್ದರೆ ಜೀವನ ಸೆಟಲ್ ಆಗುತ್ತದೆ ಅನ್ನೋದು ಅನೇಕರ ನಂಬಿಕೆ. ಏಕೆಂದರೆ ಗೆದ್ದವರಿಗೆ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ. ಇಷ್ಟು ದೊಡ್ಡ ಮೊತ್ತದ ಹಣ ಸಿಕ್ಕರೆ ಜೀವನದಲ್ಲಿ ಸುಲಭದಲ್ಲಿ ಸೆಟಲ್ ಆಗಬಹುದು ಅನ್ನೋದು ಅನೇಕರ ನಂಬಿಕೆ. ಆದರೆ, ಗೆದ್ದ ಹಣ ಸಂಪೂರ್ಣವಾಗಿ ವಿನ್ನರ್​ಗೆ ಸೇರುತ್ತಿಲ್ಲ. ‘ಬಿಗ್ ಬಾಸ್ ಮರಾಠಿ ಸೀಸನ್ 2’ರ ವಿನ್ನರ್ ಶಿವ್ ಠಾಕ್ರೆ ಅವರು ಈ ರೀತಿಯ ಆರೋಪ ಮಾಡಿದ್ದಾರೆ. ಅವರ ಹೇಳಿಕೆ ಶಾಕಿಂಗ್ ಎನಿಸಿದೆ.

ಶಿವ ಠಾಕ್ರೆ ಅವರು ಈ ಮೊದಲು ‘ರೋಡಿಸ್’ ರಿಯಾಲಿಟಿ ಶೋ ಮೂಲಕ ಹಿಂದಿ ಹಾಗೂ ಮರಾಠಿ ಕಿರುತೆರೆ ಲೋಕದಲ್ಲಿ ಹೆಸರು ಮಾಡಿದರು. ಅವರು ಮರಾಠಿಯ ‘ಬಿಗ್ ಬಾಸ್ ಸೀಸನ್ 2’ರಲ್ಲಿ ಭಾಗಿ ಆಗಿ ವಿನ್ ಆದರು. 25 ಲಕ್ಷ ರೂಪಾಯಿ ವಿನ್ನಿಂಗ್ ಮೊತ್ತ ನಿಗದಿ ಮಾಡಲಾಗಿತ್ತು. ಶಾಕಿಂಗ್ ವಿಚಾರ ಎಂದರೆ ಇದರಲ್ಲಿ ಅರ್ಧಕ್ಕೂ ಕಡಿಮೆ ಮೊತ್ತವನ್ನು ಕಟ್ ಮಾಡಿ ನೀಡಲಾಗಿದೆ. ಇದು ಅವರಿಗೆ ಶಾಕಿಂಗ್ ಎನಿಸಿದೆ.

‘ಗೆದ್ದವರಿಗೆ 25 ಲಕ್ಷ ರೂಪಾಯಿ ಮೊತ್ತವನ್ನು ನಿಗದಿ ಮಾಡಲಾಗಿತ್ತು. ಅಂತಿಮ ಘೋಷಣೆಗೂ ಎರಡು ಗಂಟೆ ಮೊದಲು 17 ಲಕ್ಷ ರೂಪಾಯಿ ಸಿಗಲಿದೆ ಎಂದು ತಿಳಿಸಿದರು. ಆ ಬಳಿಕ ಅಕೌಂಟ್​ಗೆ ಬಂದಿದ್ದು 11 ಲಕ್ಷ ರೂಪಾಯಿ. ಬಟ್ಟೆ, ಹಾಗೂ ತಂದೆ-ತಾಯಿ ಬಂದಿದ್ದರ ವಿಮಾನದ ಟಿಕೆಟ್ ಖರ್ಚನ್ನು ನಮ್ಮದೇ ಹಣದಿಂದ ತೆಗೆದುಕೊಳ್ಳಲಾಗಿತ್ತು’ ಎಂದಿದ್ದಾರೆ ಶಿವ್ ಠಾಕ್ರೆ. ಇದು ಅನೇಕರಿಗೆ ಬೇಸರ ತರಿಸಿದೆ. ರಿಯಾಲಿಟಿ ತಿಳಿದ ಬಳಿಕ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.

ಮನಿಶಾ ರಾಣಿ ಕಥೆಯೂ ಇದೇ..

‘ಝಲಕ್​ ದಿಕ್ಲಾಜಾ 11’ ಶೋನ ವಿನ್ನರ್ ಮನಿಶಾ ರಾಣಿ ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ. ‘ಝಲಕ್​ ದಿಕ್ಲಾಜಾ ವಿನ್ನಿಂಗ್ ಮೊತ್ತ ಇನ್ನೂ ಬಂದಿಲ್ಲ. ಗೆದ್ದ ಹಣದಲ್ಲಿ ಅರ್ಧದಷ್ಟು ಕಟ್ ಮಾಡುತ್ತಾರೆ. ನನ್ನ ಜೀವನದಲ್ಲಿ ದುಡ್ಡಿನ ಮಳೆ ಆಗುತ್ತಿದೆ ಎಂದು ಜನರು ಅಂದುಕೊಂಡಿರುತ್ತಾರೆ. ಕೋಟ್ಯದಿಪತಿಗಳ ಜೊತೆ ಸುತ್ತಾಡುವವರಿಗೆ ಮಾತ್ರ ಅದು ಸಾಧ್ಯ. ನಾನು ಕೋಟ್ಯಧಿಪತಿ ಅಲ್ಲ, ನನಗೆ ಬಾಯ್​ಫ್ರೆಂಡ್ ಕೂಡ ಇಲ್ಲ’ ಎಂದಿದ್ದಾರೆ ಮನಿಶಾ ರಾಣಿ.

ಇದನ್ನೂ ಓದಿ: ಸುಳ್ಳಾಯ್ತು ಊಹೆ: ಬರಲ್ಲ ‘ಬಿಗ್ ಬಾಸ್ ಒಟಿಟಿ’ ಸೀಸನ್​; ಇಲ್ಲಿದೆ ಕಾರಣ

ಮನಿಶಾ ರಾಣಿ ಅವರು ರಿಯಾಲಿಟಿ ಶೋಗಳ ಮೂಲಕ ಜನರಿಗೆ ಹತ್ತಿರ ಆಗಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ‘ಬಿಗ್ ಬಾಸ್ ಹಿಂದಿ ಒಟಿಟಿ 2’ನಲ್ಲಿ ಅವರು ನಟಿಸಿದ್ದರು.  ಇತ್ತೀಚೆಗೆ ‘ಕನ್ನಡ ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಕಾರ್ತಿಕ್ ಮಹೇಶ್ ಅವರು ಕೂಡ ಪೂರ್ತಿ ಹಣ ಬಂದಿಲ್ಲ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ