ಬಿಗ್ ಬಾಸ್ ಮನೆಯಲ್ಲಿರುವ ಚೈತ್ರಾ ಕುಂದಾಪುರ ಅವರು ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಮನೆಯ ಹೊರಗೆ ಚರ್ಚೆಯಲ್ಲಿ ಇದ್ದ ಅವರು, ಮನೆ ಒಳಗೂ ಚರ್ಚೆಯ ಕೇಂದ್ರ ಬಿಂದು ಆಗಿದ್ದಾರೆ. ಈಗ ಚೈತ್ರಾ ಕುಂದಾಪುರ ಅವರಿಗೆ ಗ್ರಹಚಾರ ಕೈಕೊಟ್ಟ ಭಾವನೆ ಕಾಡುತ್ತಿದೆ. ಅವರು ಕಳಪೆ ಪಡೆದು ಸತತ ಎರಡನೇ ಬಾರಿ ಜೈಲು ಸೇರಿದ್ದಾರೆ. ಈ ಸೀಸನ್ನಲ್ಲಿ ಜೈಲು ಸೇರಿದ್ದು ಮೂರನೇ ಬಾರಿ. ಈ ಬಾರಿ ಅವರ ಕಾಲಿಗೆ ಬಿಸಿ ಗಂಜಿ ಬಿದ್ದಿದೆ. ಇದರಿಂದ ಅವರು ಸಾಕಷ್ಟು ನೊಂದುಕೊಂಡಿದ್ದಾರೆ. ‘ಗ್ರಹಚಾರ ಕೆಟ್ಟಾಗ ಹೀಗೆ ಆಗೋದು’ ಎಂದು ಅವರು ಹೇಳಿದ್ದಾರೆ.
ಚೈತ್ರಾ ಕುಂದಾಪುರ ಅವರು ಈ ಬಾರಿಯ ಗೇಮ್ನಲ್ಲಿ ಉಸ್ತುವಾರಿ ಮಾಡಿದ್ದರು. ಈ ವೇಳೆ ಅವರು ಸಾಕಷ್ಟು ತಪ್ಪು ಮಾಡಿದ್ದರು. ಅವರು ಸಾಕಷ್ಟು ಮೋಸ ಮಾಡಿದ ಆರೋಪ ಕೇಳಿ ಬಂತು. ಈ ಕಾರಣಕ್ಕೆ ಅವರಿಗೆ ಕಳಪೆ ಪಟ್ಟ ನೀಡಲಾಯಿತು. ಈ ಕಳಪೆ ಪಟ್ಟ ಪಡೆದ ಅವರು ಜೈಲಿಗೆ ಹೋಗಿದ್ದಾರೆ. ಜೈಲು ಸೇರಿದ ಸ್ಪರ್ಧಿಗಳಿಗೆ ಗಂಜಿ ನೀಡಲಾಗುತ್ತದೆ. ಅದೇ ರೀತಿ ಚೈತ್ರಾ ಕುಂದಾಪುರ ಅವರಿಗೆ ರಾಗಿ ಗಂಜಿ ನೀಡಲಾಗಿತ್ತು. ಆದರೆ ಈ ವೇಳೆ ಎಡವಟ್ಟು ಸಂಭವಿಸಿದೆ.
ಚೈತ್ರಾ ಕುಂದಾಪುರ ಅವರು ಗಂಜಿ ಹಿಡಿದು ಕುಳಿತಿದ್ದರು. ಈ ವೇಳೆ ಗಂಜಿ ಕಾಲ ಮೇಲೆ ಚೆಲ್ಲಿದೆ. ಈ ವೇಳೆ ನೋವು ತಡೆಯಲಾರದೇ ಚೈತ್ರಾ ಕುಂದಾಪುರ ಅವರು ಒದ್ದಾಡಿದ್ದಾರೆ. ‘ಗ್ರಹಚಾರ ಕೆಟ್ಟಾಗ ಹೀಗೆ ಆಗುತ್ತದೆ’ ಎಂದು ಚೈತ್ರಾ ಅವರು ಹೇಳಿಕೊಂಡಿದ್ದಾರೆ. ಅವರು ಓಡೋಡಿ ಹೋಗಿ ಕಾಲಿಗೆ ತಣ್ಣೀರು ಹಾಕಿಕೊಂಡರು. ಈ ಘಟನೆ ಅವರಿಗೆ ಸಾಕಷ್ಟು ನೋವು ತಂದಿದೆ.
ಇದನ್ನೂ ಓದಿ: ತಳ್ಳಿ ಆ ಬಳಿಕ ಕ್ಷಮೆ ಕೇಳಿದ ರಜತ್; ತೂಕದ ಮಾತನಾಡಿದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರಿಗೆ ಪದೇ ಪದೇ ಹಿನ್ನಡೆ ಉಂಟಾಗುತ್ತಿದೆ. ಅವರು ಈ ಮೊದಲು ಸುದೀಪ್ ಅವರಿಂದ ಬೈಸಿಕೊಂಡಾಗ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು. ಆ ಬಳಿಕ ಅವರು ನಿರ್ಧಾರ ಬದಲಿಸಿಕೊಂಡಿದ್ದರು. ಅವರು ಮೂರು ಬಾರಿ ಕಳಪೆ ಪಟ್ಟ ಪಡೆದಿದ್ದಾರೆ. ಈ ವಾರ ಎಲಿಮಿನೇಷನ್ ಇಲ್ಲದ ಕಾರಣ ಯಾರೂ ಔಟ್ ಆಗುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.