ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಬೇಡವಾದ ಚೈತ್ರಾ ಕುಂದಾಪುರ; ಇದು ಹೀನಾಯ ಸ್ಥಿತಿ

‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಚೈತ್ರಾ ಕುಂದಾಪುರ ಅವರು ಸ್ಪರ್ಧಿಸುತ್ತಿದ್ದಾರೆ. ಎಲ್ಲ ವಾರದಂತೆ ಕಳೆದ ವಾರ ಕೂಡ ಅವರ ನಾಮಿನೇಟ್ ಆಗಿ ನಂತರ ಬಚಾವ್ ಆಗಿದ್ದರು. ಈಗ ಅವರು ಯಾರಿಗೂ ಬೇಡವಾದ ಸ್ಪರ್ಧಿ ಆಗಿದ್ದಾರೆ. ಗುರುವಾರದ (ಅಕ್ಟೋಬರ್​ 31) ಸಂಚಿಕೆಯಲ್ಲಿ ಅದಕ್ಕೆ ಸಾಕ್ಷಿ ಸಿಕ್ಕಿದೆ. ಆ ಕುರಿತು ಇಲ್ಲಿದೆ ಹೆಚ್ಚಿನ ವಿವರ..

ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಬೇಡವಾದ ಚೈತ್ರಾ ಕುಂದಾಪುರ; ಇದು ಹೀನಾಯ ಸ್ಥಿತಿ
ಚೈತ್ರಾ ಕುಂದಾಪುರ
Follow us
ಮದನ್​ ಕುಮಾರ್​
|

Updated on: Oct 31, 2024 | 10:22 PM

ದಿನ ಕಳೆದಂತೆಲ್ಲ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ವ್ಯಕ್ತಿತ್ವಗಳು ಬಯಲಾಗುತ್ತಿವೆ. ಮೊದಲಿಗೆ ಇದ್ದ ಹುಸಿ ಬಾಂಧವ್ಯಗಳು ಈಗ ಉಳಿದಿಲ್ಲ. ಏನೇ ಇದ್ದರೂ ನೇರವಾಗಿ ಮುಖಕ್ಕೆ ಹೊಡೆದಂತೆ ಮಾತನಾಡುವುದನ್ನು ಎಲ್ಲರೂ ರೂಢಿಸಿಕೊಂಡಿದ್ದಾರೆ. ಈ ಮೊದಲು ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಹನುಮಂತ ಕೂಡ ಈಗ ಏಟಿಗೆ ತಿರುಗೇಟು ಕೊಟ್ಟು ಆಟ ಆಡುತ್ತಿದ್ದಾರೆ. ಬರೀ ತಂತ್ರಗಾರಿಕೆ ಮಾತ್ರವಲ್ಲದೇ ಟಾಸ್ಕ್​ಗಳಲ್ಲಿ ಕೂಡ ಉತ್ತಮವಾಗಿ ಆಡಬೇಕು. ಅದಕ್ಕಾಗಿ ತಂಡಗಳನ್ನು ಮಾಡಬೇಕು. ಅ.31ರ ಎಪಿಸೋಡ್​ನಲ್ಲಿ ಟೀಮ್ ಮಾಡುವಾಗ ಚೈತ್ರಾ ಕುಂದಾಪುರ ಅವರನ್ನು ಯಾರೂ ಕೂಡ ಆಯ್ಕೆ ಮಾಡಿಕೊಂಡಿಲ್ಲ.

ಹೊಸ ಟಾಸ್ಕ್​ ಸಲುವಾಗಿ ಎರಡು ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದರು. ಭವ್ಯಾ ಮತ್ತು ಗೌತಮಿ ಜಾಧವ್ ಅವರು ಎರಡು ಟೀಮ್​ಗಳನ್ನು ಆಯ್ಕೆ ಮಾಡಿಕೊಂಡರು. ಟೀಮ್ ಮಾಡುವಾಗ ಎಲ್ಲರೂ ಆಯ್ಕೆಯಾಗಿ ಕೊನೆಯಲ್ಲಿ ಉಳಿದುಕೊಂಡಿದ್ದು ಚೈತ್ರಾ ಕುಂದಾಪುರ! ಇನ್ನೇನು ಬೇರೆ ಆಪ್ಷನ್ ಇಲ್ಲದೇ ಅಂತಿಮವಾಗಿ ಗೌತಮಿಯ ಟೀಮ್​ಗೆ ಚೈತ್ರಾ ಅವರ ಹೋಗಬೇಕಾಯಿತು.

ಹೊರಗಡೆ ಇದ್ದಾಗ ಮಾತುಗಾರಿಕೆಯಿಂದ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೇವಲ ಮಾತು ಉಪಯೋಗಕ್ಕೆ ಬರುವುದಿಲ್ಲ. ‘ನನಗೆ ಮಾತನಾಡಲು ಬಿಟ್ಟರೆ ಬೇರೇನೋ ಗೊತ್ತಿಲ್ಲ’ ಎಂದು ಚೈತ್ರಾ ಅವರೇ ಕೆಲವು ಬಾರಿ ದೊಡ್ಮನೆಯಲ್ಲಿ ಹೇಳಿಕೊಂಡಿದ್ದುಂಟು. ಆದರೆ ಮಾತಿನಿಂದಲೇ ಅವರು ಹಿನ್ನಡೆ ಕೂಡ ಅನುಭವಿಸಿದ್ದಾರೆ. ‘ಅವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳಲ್ಲ’ ಎಂಬ ಕಾರಣದಿಂದಲೇ ಅನೇಕರು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ ಉದಾಹರಣೆ ಕೂಡ ಇದೆ.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ

ಟೀಮ್​ ಮಾಡುವಾಗ ತಮ್ಮನ್ನು ಯಾರೂ ಕೂಡ ಸೆಲೆಕ್ಟ್​ ಮಾಡಿಕೊಳ್ಳಲಿಲ್ಲ ಎಂಬುದನ್ನು ಚೈತ್ರಾ ಅವರು ನಿಜಕ್ಕೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಇದು ಒಂದು ಇಂಡಿಕೇಷನ್​. ಮುಂದಿನ ದಿನಗಳಲ್ಲಿ ಮಾತು ಮತ್ತು ಆಟದ ಶೈಲಿ ಬದಲಿಸಿಕೊಂಡರೆ ಮಾತ್ರ ಚೈತ್ರಾ ಅವರಿಗೆ ಅನುಕೂಲ ಆಗಬಹುದು. ಇಲ್ಲದಿದ್ದರೆ ಅವರು ಯಾರಿಗೂ ಬೇಡದವರಾಗಿಯೇ ಡೋಂಜರ್​ ಝೋನ್​ಗೆ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಕ್ಷಣಾರ್ಧದಲ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್​ವೆಲ್
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು