AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈಟ್ ಆಫ್ ಆದಾಗ ತಪ್ಪು ಮಾಡಿದ ಬಿಗ್ ಬಾಸ್ ಮನೆ ಮಂದಿ; ಚೈತ್ರಾ, ಮಾನಸಾಗೆ ಶಿಕ್ಷೆ

ಬಿಗ್ ಬಾಸ್​ ಮನೆಯಲ್ಲಿ ದಿನದಿನವೂ ಹೊಸ ಹೊಸ ಟ್ವಿಸ್ಟ್​ಗಳು ಇರುತ್ತವೆ. ಈ ವಾರ ದೊಡ್ಮನೆಯಲ್ಲಿ ಕೆಲವರು ಲೈಟ್ ಆಫ್ ಆದಾಗ ಮಾಡಿದ ತಪ್ಪಿನಿಂದಾಗಿ ಮಾನಸಾ ಮತ್ತು ಚೈತ್ರಾ ಕುಂದಾಪುರ ಅವರಿಗೆ ಶಿಕ್ಷೆ ನೀಡಲಾಗಿದೆ. ಕುಟುಂಬದವರಿಂದ ಬರಬೇಕಿದ್ದ ಸಂದೇಶವನ್ನು ತಡೆ ಹಿಡಿಯಲಾಗಿದೆ. ಇದರಿಂದಾಗಿ ಚೈತ್ರಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಲೈಟ್ ಆಫ್ ಆದಾಗ ತಪ್ಪು ಮಾಡಿದ ಬಿಗ್ ಬಾಸ್ ಮನೆ ಮಂದಿ; ಚೈತ್ರಾ, ಮಾನಸಾಗೆ ಶಿಕ್ಷೆ
ಬಿಗ್ ಬಾಸ್​ ಕನ್ನಡ ಸೀಸನ್​ 11
ಮದನ್​ ಕುಮಾರ್​
|

Updated on: Nov 01, 2024 | 10:11 PM

Share

ಒಮ್ಮೆ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಕಾಲಿಟ್ಟ ಬಳಿಕ ಅವರಿಗೆ ಹೊರಜಗತ್ತಿನ ಸಂಪರ್ಕ ಕಡಿತ ಆಗುತ್ತದೆ. ಫ್ಯಾಮಿಲಿಯವರಿಂದ ಕೂಡ ಸಂಪರ್ಕ ಇರುವುದಿಲ್ಲ. ತೀರಾ ಅಪರೂಪಕ್ಕೆ ಮಾತ್ರ ಕುಟುಂಬದವರ ಜೊತೆ ಮಾತನಾಡುವ ಅಥವಾ ಪತ್ರ ಪಡೆಯುವ ಅವಕಾಶ ಇರುತ್ತದೆ. ಹಾಗಂತ ಆ ಅವಕಾಶ ಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಕಷ್ಟಪಡಬೇಕು. ಇತ್ತೀಚೆಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಆ ಟಾಸ್ಕ್ ಆಡುವಾಗ ಬೇರೆಯವರು ತಪ್ಪು ಮಾಡಿದ್ದರಿಂದ ಚೈತ್ರಾ ಕುಂದಾಪುರ ಮತ್ತು ಮಾಸನಾ ಅವರಿಗೆ ಕುಟುಂಬದವರ ಸಂದೇಶ ಮಿಸ್ ಆಗಿದೆ.

ಆಟದ ನಿಯಮ ಹೀಗಿತ್ತು. ಬಝರ್ ಆದಾಗ ಬಿಗ್ ಬಾಸ್ ಮನೆಗೆ ಹೊರಗಿನವರು ಬಂದು ಡಿಸ್ಟರ್ಬ್​ ಮಾಡುತ್ತಾರೆ. ಆದರೆ ಸ್ಪರ್ಧಿಗಳು ಯಾರೂ ಕೂಡ ಪ್ರತಿಕ್ರಿಯಿಸುವಂತಿಲ್ಲ. ಸ್ಪೀಕರ್​, ಟಿವಿಯಲ್ಲಿ ಏನೇ ಬಂದರೂ ಅದಕ್ಕೆ ರಿಯಾಕ್ಟ್ ಮಾಡಬಾರದು. ಆದರೆ ಅದರ ಜೊತೆಗೆ ಇನ್ನೊಂದು ಟ್ವಿಸ್ಟ್​ ಸಹ ನೀಡಲಾಯಿತು. ಏಕಾಏಕಿ ಲೈಟ್ ಆಫ್​ ಮಾಡಲಾಯಿತು. ಆಗ ಕೆಲವರು ತಪ್ಪು ಮಾಡಿದರು.

ಏನದು ತಪ್ಪು? ಲೈಟ್​ ಆಫ್​ ಆದಾಗ ಪ್ರತಿಕ್ರಿಯಿಸಿದ್ದು. ಹೌದು, ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ, ಮಧ್ಯಾಹ್ನ ಅಥವಾ ಸಂಜೆ ಲೈಟ್​ ಆಫ್​ ಆಗುವುದಿಲ್ಲ. ರಾತ್ರಿ ಲೈಟ್ ಆಫ್ ಆದಾಗ ಮಲಗಬೇಕು. ಆದರೆ ಶುಕ್ರವಾರದ ಎಪಿಸೋಡ್​ನಲ್ಲಿ ತುಸು ಮುಂಚೆಯೇ ಲೈಟ್ ಆಫ್​ ಆದಾಗ ಬಹುತೇಕರಿಗೆ ಶಾಕ್ ಆಯಿತು. ‘ಈಗಲೇ ಮಲಗಬೇಕಾ’ ಎಂದು ಪ್ರತಿಕ್ರಿಯೆ ನೀಡಿದರು. ಈ ತಪ್ಪಿನಿಂದಾಗಿ ಮಾಸನಾ ಮತ್ತು ಚೈತ್ರಾ ಅವರಿಗೆ ಸಿಗಬೇಕಿದ್ದ ಮನೆಯವರ ಸಂದೇಶವನ್ನು ಬಿಗ್ ಬಾಸ್ ಕ್ಯಾನ್ಸಲ್ ಮಾಡಿದರು.

ಇದನ್ನೂ ಓದಿ: ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ: ಮಾನಸಾಗೆ ನೇರವಾಗಿ ಹೇಳಿದ ಐಶ್ವರ್ಯಾ

ಕೆಲವು ವಾರಗಳ ಹಿಂದೆ ಮಾಸನಾ ಅವರಿಗೆ ಪತಿ ತುಕಾಲಿ ಸಂತೋಷ್ ಅವರಿಂದ ಫೋನ್ ಕರೆ ಬಂದಿತ್ತು. ಆದರೆ ಚೈತ್ರಾ ಅವರಿಗೆ ಈ ರೀತಿಯ ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಅವರಿಗೆ ಈ ಬಾರಿ ಕೂಡ ಸಂದೇಶ ಮಿಸ್ ಆಗಿದ್ದಕ್ಕೆ ಸಖತ್ ದುಃಖ ಆಗಿದೆ. ಒಬ್ಬರೇ ಕುಳಿತು ಅವರು ಕಣ್ಣೀರು ಸುರಿಸಿದ್ದಾರೆ. ಅದೇ ರೀತಿ ಧನರಾಜ್​ ಕೂಡ ಹಿಂದಿನ ಸುತ್ತಿನಲ್ಲಿ ಅವಕಾಶ ಕಳೆದುಕೊಂಡರು. ಅವರು ಸಹ ಮಗುವನ್ನು ನೆನಪಿಸಿಕೊಂಡು ಜೋರಾಗಿ ಅತ್ತರು. ಅವರನ್ನು ಸಮಾಧಾನ ಮಾಡಲು ಇನ್ನುಳಿದವರು ಪ್ರಯತ್ನಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.