ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿದ್ದ ಸಮಯದಲ್ಲಿ ಸುದೀಪ್ ಅವರು ಮಾಡಿದ ಭವಿಷ್ಯವಾಣಿ ನಿಜವಾಗಿದೆ. ಅವರು ಒಬ್ಬ ಸಂಸ್ಕಾರವಂತ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ. ಅವರು ದೇವಸ್ಥಾನದ ಅರ್ಚಕರಂತೆ ಕಂಡು ಬಂದಿದೆ. ಅವರ ವಿವಾಹದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ ಕುಂದಾಪುರ
ಮದುವೆ ವಿಚಾರದಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತಿನಂತೆ ನಡೆದುಕೊಂಡ ಚೈತ್ರಾ ಕುಂದಾಪುರ

Updated on: May 09, 2025 | 7:04 AM

ಚೈತ್ರಾ ಕುಂದಾಪುರ (Chaithra Kundapura) ಅವರು ಈಗ ವರನ ಪರಿಚಯಿಸಿದ್ದಾರೆ. ತುಂಬಾನೇ ಸಂಸ್ಕಾರವಂತ ವ್ಯಕ್ತಿಯನ್ನು ಚೈತ್ರಾ ವಿವಾಹ ಆಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಸುದೀಪ್ ಅವರು ಹೇಳಿದಂತೆ ಚೈತ್ರಾ ಅವರು ನಡೆದುಕೊಂಡಿದ್ದಾರೆ ಎಂಬುದು ವಿಶೇಷ. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋನ ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಚೈತ್ರಾ ಕುಂದಾಪುರ ಅವರು ಸ್ಪರ್ಧೆ ಮಾಡಿದ್ದರು. ಈ ವೇಳೆ ಅವರು ಭರ್ಜರಿಯಾಗಿ ಗಮನ ಸೆಳೆದರು. ಅವರು ಮಾಡಿಕೊಂಡ ವಿವಾದಗಳು ಕೂಡ ಹಲವು. ಹಲವು ಬಾರಿ ಸುದೀಪ್ ಅವರೇ ಸಿಟ್ಟಾಗಿದ್ದರು. ಆ ರೀತಿಯಲ್ಲಿ ಚೈತ್ರಾ ಎಲ್ಲರನ್ನೂ ಕೆರಳಿಸಿದ್ದರು. ವೇದಿಕೆ ಮೇಲೆ ಸುದೀಪ್ ಅವರು ಚೈತ್ರಾ ಅವರ ಕಾಲೆಳೆಯುವಾಗ ಒಂದು ಮಾತನ್ನು ಹೇಳಿದ್ದರು. ಈ ಮಾತು ಈಗ ನಿಜವಾಗಿದೆ.

ಇದನ್ನೂ ಓದಿ
ಶಾರುಖ್ ಮೋಸ ಮಾಡಿದರೆ...; ಗೌರಿ ಖಾನ್ ಬೋಲ್ಡ್ ಉತ್ತರ ಮೆಚ್ಚಲೇಬೇಕು
ಈ ವಿಲನ್ ನಿಜ ಜೀವನದಲ್ಲಿ ನಾಲ್ಕು ಮದುವೆ ಆದರು, ನಂತರ ಬೀದಿಗೆ ಬಂದರು
‘ನಿನ್ನ ದೇಹ ನೀನೇ ನಿರ್ಧರಿಸು’; ದೀಪಿಕಾಗೆ ನೇರವಾಗಿ ಹೇಳಿದ್ದ ರಣವೀರ್ ಸಿಂಗ್
ಅನುಷ್ಕಾ ಕೈಗೆ ಮುತ್ತು; ಕೊಹ್ಲಿನ ಜೋಕರ್ ಎಂದಿದ್ದ ರಾಹುಲ್​​ನ ವಿಡಿಯೋ ವೈರಲ್

‘ಮದುವೆ ಆಗಿದ್ಯಾ? ಇಲ್ಲ ಅಲ್ವಾ? ನೀವು ಯಾಕೆ ದೇವರಿಗೆ ಸಮರ್ಪಣೆ ಮಾಡಿಕೊಂಡಂತ ವ್ಯಕ್ತಿಯನ್ನು ಮದುವೆ ಆಗಬಾರದು? ಏನೇ ಆದರೂ ದೇವರೇ ಎಂದು ಹೋಗಿ ಕುಳಿತುಕೊಳ್ಳುತ್ತಾ ಇರುತ್ತಾರೆ’ ಎಂದು ಬಿಗ್ ಬಾಸ್​ ವೇದಿಕೆ ಮೇಲೆ ಸುದೀಪ್ ಅವರು ಹೇಳಿದ್ದರು. ಈಗ ಹಾಗೆಯೇ ಆಗಿದೆ. ದೇವಸ್ಥಾನದ ಅರ್ಚಕರನ್ನು ಮದುವೆ ಆಗುತ್ತಿರುವ ಸೂಚನೆಯನ್ನು ಕೊಟ್ಟಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ಮದುವೆ; ವಿಡಿಯೋ ಮೂಲಕ ಹುಡುಗನ ಪರಿಚಯ

ಅಂದಹಾಗೆ ಸುದೀಪ್ ಅವರಿಗೆ ಈ ವಿಚಾರ ಮೊದಲೇ ಗೊತ್ತಿದ್ದಿರಬಹುದು, ಈ ಕಾರಣದಿಂದಲೇ ಆ ರೀತಿ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಚೈತ್ರಾ ಅವರು ಸಾಕಷ್ಟು ಸಂಪ್ರದಾಯಗಳನ್ನು ಪಾಲನೆ ಮಾಡುತ್ತಾರೆ. ಅವರು ಇತ್ತೀಚೆಗೆ ಹೆಚ್ಚು ಸ್ಟೈಲಿಶ್ ಆಗಿದ್ದಾರೆ. ಆದರೆ, ಸೀರೆಯಲ್ಲೇ ಮಿಂಚುತ್ತಿದ್ದಾರೆಯೇ ಹೊರತು ಮಾಡರ್ನ್​ ಡ್ರೆಸ್ ಹಾಕಿಲ್ಲ. ಈ ಕಾರಣಕ್ಕೆ ತಮಗೆ ಮ್ಯಾಚ್ ಆಗುವ ರೀತಿಯ ಹುಡುಗನನ್ನೇ ಆರಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಸುದೀಪ್ ಆ ರೀತಿ ಹೇಳಿದ್ದಕ್ಕೆ ಈ ಥೀಮ್​ನಲ್ಲಿ ವಿಡಿಯೋ ಶೂಟ್ ಮಾಡಿರಬಹುದು ಎನ್ನಲಾಗಿದೆ.


ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಹೋಗುವಾಗಲೇ ‘ನನಗೆ ಮದುವೆ ಫಿಕ್ಸ್ ಆಗಿದೆ. ನನ್ನ ನಡತೆಗೆ ಕಪ್ಪು ಚುಕ್ಕೆ ಬಂದರೆ ಸಹಿಸೋದಿಲ್ಲ’ ಎಂದು ಆಗಲೇ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.